Breaking News

ಕರ್ನಾಟಕ ಜನರ ಸಮಸ್ಯೆಗಳ ಆಲಿಸಿ ಇದರ ವಿಸ್ತ್ರತ ವರದಿ ಸಿದ್ಧಪಡಿಸಿ, ಸ್ಪೀಕರ್‌ಗೆ ನೀಡಲಾಗುವುದು: ಜಗದಂಬಿಕಾ ಪಾಲ

ಹುಬ್ಬಳ್ಳಿ: ವಕ್ಸ್‌ ಬೋರ್ಡ್ ಆಸ್ತಿ ಕಬಳಿಸುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ ಜನರ ಸಮಸ್ಯೆಗಳ ಆಲಿಸಿ ಇದರ ವಿಸ್ತ್ರತ ವರದಿ ಸಿದ್ಧಪಡಿಸಿ, ಸ್ಪೀಕರ್‌ಗೆ ನೀಡಲಾಗುವುದು ಎಂದು ವಕ್ಸ್ ಬೋರ್ಡ್ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಕ್ಸ್ ಬೋರ್ಡ್ ಕರ್ನಾಟಕದ ರೈತರು ಹಾಗೂ ಜನಸಾಮಾನ್ಯರ ಆಸ್ತಿಗಳನ್ನು ಕಬಳಿಕೆ ಮಾಡಲು ಮುಂದಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಆದ್ದರಿಂದ ಅಹವಾಲು ಸ್ವೀಕರಿಸಲು ಬಂದಿದ್ದೇನೆ ಎಂದರು.

ಉತ್ತರ ಕರ್ನಾಟಕ ಭಾಗದ ಸುಮಾರು 50-60 ವರ್ಷಗಳಿಂದ ಉಳುಮೆ ಮಾಡಿದ ಜಮೀನು, ಐತಿಹಾಸಿ ದೇವಸ್ಥಾನಗಳನ್ನು ಕಂಬಳಿಸಲಾಗಿದೆ ಎನ್ನಲಾಗುತ್ತಿದೆ. ಆದ್ದರಿಂದ ಹುಬ್ಬಳ್ಳಿ, ವಿಜಯಪುರ, ಬೀದರ್ ರೈತರ ಹಾಗೂ ಜನರ ಅಹವಾಲು ಸ್ವೀಕರಿಸುತ್ತೇನೆ. ಸದ್ಯ ಹುಬ್ಬಳ್ಳಿಯಲ್ಲಿ ಅದ್ವತ್ ಪರಿಷತ್ ಉತ್ತರ ಕರ್ನಾಟಕ ಹಾಗೂ ರತ್ನ ಭಾರತ ರೈತ ಸಮಾಜದವರು ಮನವಿ ಸಲ್ಲಿಸಿದ್ದು, ಇದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.

Share News

About Shaikh BigTv

Check Also

ವಿಜಯಪುರದಲ್ಲಿ ಹಾಡಹಗಲೇ ಫೈರಿಂಗ್ : ನಡು ರಸ್ತೆಯಲ್ಲೇ ಗುಂಡಿನ ದಾಳಿ ನಡೆಸಿ, ವ್ಯಕ್ತಿಯ ಹತ್ಯೆ!

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಬಳಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಟಕ್ಕೆ ಗ್ರಾಮದ ಯಾಸೀನ್ ಜುಬೇರ್ (ಮೃತ) ಸ್ಕೂಟಿಯಲ್ಲಿ …

Leave a Reply

Your email address will not be published. Required fields are marked *