Breaking News
Featured Video Play Icon

ಅಂಜಲಿ ಕೊಲೆ ಪ್ರಕರಣದಲ್ಲಿ ಸಿಐಡಿ ಹದ್ದಿನ ಕಣ್ಣು: ಕೊಲೆಗೆ ಬೆಂಬಲ ನೀಡಿದವರಿಗೂ ಡವಡವ..!

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮತ್ತಷ್ಟು ತನಿಖೆ ಚುರುಕುಗೊಳಿಸಿದ್ದಾರೆ.‌ ಅಂಜಲಿ‌ ಹತ್ಯೆ ಪ್ರಕರಣದಲ್ಲಿ ಬಗೆದಷ್ಟೂ ಹೊರಬರುತ್ತಿವೆ ಭಯಾನಕ‌ ಅಂಶಗಳು. ಅಂಜಲಿ ಹಂತಕ‌ ಗಿರೀಶ ಅಲಿಯಾಸ್ ವಿಶ್ವನನ್ನ ಮತ್ತೆ ಎಂಟು ದಿನಗಳ‌ಕಾಲ‌ ಕಷ್ಟಡಿಗೆ ತೆಗೆದುಕೊಂಡಿರುವ ಸಿಐಡಿ‌ ಅಧಿಕಾರಿಗಳು, ತನಿಖೆ ಚುರುಕುಗೊಳಿಸಿದ್ದಾರೆ… ಹಂತಕ‌ ಗಿರೀಶನಿಂದ ಇನ್ನೂ ಹಲವು ವಿಚಾರಣೆಗಳನ್ನ ಬಾಯಿಬಿಡಿಸಲು‌ ಮುಂದಾದ ಸಿಐಡಿ‌ ಅಧಿಕಾರಿಗಳು, ಎಂಟು‌ ದಿನಗಳ‌ ಕಾಲ‌ ಯಾವ್ಯಾವ ಹಂತಗಳಲ್ಲಿ ತನಿಖೆ ನಡೆಸಲಿದ್ದಾರೆ ಸಿಐಡಿ‌ ಅಧಿಕಾರಿಗಳು..? ಎಂಬುವುದನ್ನು ಕಾದುನೋಡಬೇಕಿದೆ.ಎಂಟು ದಿನಗಳ ಕಾಲ‌ ಮತ್ತೇ ಯಾರನ್ನು ತನಿಖೆಗೊಳ ಪಡಿಸಲಿದ್ದಾರೆ ಅಧಿಕಾರಿಗಳು ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕೊಲೆಯ ಹಿಂದಿನ‌ ರಹಸ್ಯಕ್ಕಾಗಿ ಮತ್ತಷ್ಟು‌ ತನಿಖೆ‌ ಚುರುಕುಗೊಳಿಸಿದ್ದು, ಕೊಲೆ ಪ್ರಕರಣಕ್ಕೆ ಕುಮ್ಮಕ್ಕು‌‌ ನೀಡಿದವರ ಮೇಲೂ ಕಣ್ಣಿಟ್ಟಿದ್ದಾರೆ.ಹಲವು ಆಯಾಮಗಳಲ್ಲ ಕೊಲೆಯ ಹಿಂದಿನ‌ ರಹಸ್ಯಕ್ಕಾಗಿ ತಲಾಶ್ ನಡೆಸಿರೋ ಸಿಐಡಿ ಅಧಿಕಾರಿಗಳು, ದಿನಕ್ಕೊಂದರಂತೆ ರಹಸ್ಯ ಬಿಚ್ಚಿಡುತ್ತಿರೋ ಹಂತಕ‌ ಗಿರೀಶ ಅಲಿಯಾಸ್ ವಿಶ್ವ. ವಿಶ್ವನ‌ ಹೇಳಿಕೆಯಂತೆ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *