Breaking News

Breaking News

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳಿಗೆ ರಿಯಾಯಿತಿ ಶೇ.80ರಷ್ಟು ಹೆಚ್ಚಳ.

ಧಾರವಾಡ 500 ಮೀ. ವ್ಯಾಪ್ತಿಯ ಹೊರಗಿರುವ ಪಂಪ್ಸೆಟ್ ವಿದ್ಯುತ್ ಸಂಪರ್ಕಗಳಿಗೆ ಈಗಾಗಲೇ ಶೇ. 60 ರಷ್ಟು ಇರುವ ರಿಯಾಯಿತಿಯನ್ನು ಶೇ. 80 ರಷ್ಟು ಹೆಚ್ಚಳ ಮಾಡಿ ಯಾವುದೇ ಅಕ್ರಮ, ಹೆಚ್ಚುವರಿ ಆರ್ಥಿಕ ವೆಚ್ಚವಾಗದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.ಧಾರವಾಡ ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯ ಗೃಹ ಬಳಕೆ ಸ್ಥಾವರಗಳು 5,59,183 ಪೈಕಿ 5,12,621 ಫಲಾನುಭವಿಗಳು ಇದ್ದು, ಶೇ. 92 ರಷ್ಟು ಫಲಾನುಭವಿಗಳಿಗೆ 2609.15 ಲಕ್ಷ ಅನುದಾನ …

Read More »

ವಿದ್ಯುತ್‌ ಶಾಕ್‌ಗೆ ಯುವಕ ಬಲಿ: ಶವ ಹೂತಿಟ್ಟಿದ್ದ ಲೈನ್‌ಮನ್‌ ಬಂಧನ .

ಗುಡಿಬಂಡೆ ತಾಲೂಕಿನಲ್ಲಿ ಪೋಲಂಪಲ್ಲಿ ಗ್ರಾಮದಲ್ಲಿ ವಿದ್ಯುತ್‌ ಶಾಕ್‌ಗೆ ಬಲಿಯಾದ ಯುವಕನನ್ನು ಯಾರ ಗಮನಕ್ಕೂ ಬಾರದೇ ಕೆರೆಯಲ್ಲಿ ಹೂತಿಟ್ಟ ಪ್ರಕರಣವನ್ನು ಗುಡಿಬಂಡೆ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಲೈನ್‌ಮೆನ್‌ ಚಂದ್ರಕುಮಾರ್‌ ಮೃತ ಯುವಕನ ಶವವನ್ನು ಸಮೀಪದ ಕೆರೆಯಲ್ಲಿ ಹೂತಿಟ್ಟು ಪರಾರಿಯಾಗಿದ್ದನು.ಘಟನೆ ಸಂಬಂಧ ಮೃತನ ಅಣ್ಣ ಗಂಗರಾಜು ಬುಧವಾರ ನೀಡಿದ ದೂರನ್ನು ಆಧರಿಸಿ, ತನಿಖೆ ನಡೆಸಿದ ಪೊಲೀಸರು, ಲೈನ್‌ಮನ್‌ ಚಂದ್ರಕುಮಾರ್‌ನನ್ನು ಬಂಧಿಸಿದ್ದಾರೆ.

Read More »

ಉಪ್ಪಿನಂಗಡಿ: ಮಹಿಳೆ ಸಂಶಯಾಸ್ಪದ ಸಾವು.

ಶಿರಾಡಿ ಗ್ರಾಮದ ಸಂಪ್ಯಾಡಿ ಎಂಬಲ್ಲಿ ಓಮನ (53) ಎಂಬವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.ಮನೆ ಮಂದಿ ಗುರುಮಂದಿರದಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ತನ್ನ ತಾಯಿ ಮನೆಗೆ ಹೋಗಿ ಬರುತ್ತೇನೆಂದು ತಿಳಿಸಿದ್ದ ಓಮನ ಅವರು ದಿನ ಕಳೆದರೂ ಮರಳಿ ಬಾರದೇ ಇದ್ದಾಗ ಅವರ ತವರು ಮನೆಗೆ ಫೋನ್‌ ಮಾಡಿ ವಿಚಾರಿಸಿದಾಗ ಅವರು ಅಲ್ಲಿಗೆ ಬಂದಿಲ್ಲದಿರುವುದು ತಿಳಿಯಿತು.

Read More »

ನೇಪಾಳ | ಮಧ್ಯಂತರ ಸರ್ಕಾರ ರಚನೆಗೆ ಯತ್ನ; ಮುಂಚೂಣಿಯಲ್ಲಿ ಮೂವರ ಹೆಸರು.

ಯುವ ಸಮುದಾಯದ ಪ್ರತಿಭಟನೆ, ಹಿಂಸಾಚಾರದಿಂದಾಗಿ ಅರಾಜಕತೆ ಮನೆ ಮಾಡಿರುವ ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆ ಕುರಿತಂತೆ ಪ್ರಯತ್ನಗಳು ಬುಧವಾರ ನಡೆದಿವೆ. ಮಧ್ಯಂತರ ಸರ್ಕಾರ ಮುನ್ನಡೆಸಲು, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹಾಗೂ ವಿದ್ಯುತ್‌ ಮಂಡಳಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕುಲಮಾನ್ ಘೀಸಿಂಗ್ ಅವರ ಹೆಸರುಗಳನ್ನು ಪ್ರತಿಭಟನೆ ನಡೆಸುತ್ತಿರುವ ಜೆನ್‌-ಝೀ ಯುವ ಸಮುದಾಯ ಪರಿಗಣಿಸುತ್ತಿದೆ.

Read More »

ನೇಪಾಳದ ರಾಜಕಾರಣಿಗಳು, ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಪರಾರಿ.

ಸೇನಾ ಹೆಲಿಕಾಪ್ಟರ್ಗಳ ಸಹಾಯದಿಂದ ನೇಪಾಳ ಸರ್ಕಾರದ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಪ್ಪಿಸಿಕೊಳ್ಳುವ ವೈರಲ್ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿರುವ ಜನರು ಹಂಚಿಕೊಂಡಿದ್ದಾರೆ.ಮೂರನೇ ದಿನಕ್ಕೆ ಕಾಲಿಟ್ಟ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಪ್ರತಿಭಟನಾಕಾರರು ಅವರನ್ನು ಹಿಡಿದು ಹೊಡೆಯಲು ಧಾವಿಸಿದಾಗ, ಹಗ್ಗಗಳಿಗೆ ಅಂಟಿಕೊಂಡಿದ್ದ ಸರ್ಕಾರಿ ಅಧಿಕಾರಿಗಳನ್ನು ರಕ್ಷಿಸಲು ನೇಪಾಳಿ ಸೇನೆಯು ಹೆಲಿಕಾಪ್ಟರ್ಗಳನ್ನು ಹೇಗೆ ಬಳಸುತ್ತಿದೆ ಎಂಬುದನ್ನು ವೀಡಿಯೊಗಳು ಎತ್ತಿ ತೋರಿಸಿವೆ.

Read More »

ಈರುಳ್ಳಿ ಬೆಲೆ ಕುಸಿತ: ಕಂಗಾಲಾದ ರೈತ

ಕಳೆದ ವರ್ಷ ಕ್ವಿಂಟಲ್‌ ಈರುಳ್ಳಿಗೆ ₹4 ಸಾವಿರದಿಂದ ₹5,500 ಬೆಲೆ ಸಿಕ್ಕಿತ್ತು. ಹಂಗಾಗಿ ಈ ಬಾರಿ ಹೆಚ್ಚಿಗೆ ಈರುಳ್ಳಿ ಬೆಳೆದಾರ್‍ರಿ. ಆದರೆ, ಈಗ ಬೆಲೆ ಇಲ್ಲದ್ದಕ್ಕ ಬೆಳೆಗೆ ಮಾಡಿದ ವೆಚ್ಚವೂ ಕೈಸೇರುತ್ತಿಲ್ಲ’ ಎಂದು ಹಳ್ಳೂರ ಗ್ರಾಮದ ರೈತ ಬಸಲಿಂಗಪ್ಪ ರಡ್ಡೇರ ಬೇಸರ ತೋಡಿಕೊಂಡರು.ಬಾಗಲಕೋಟೆ ಎಪಿಎಂಸಿಗೆ 3 ಸಾವಿರ ಕ್ವಿಂಟಲ್‌ ಈರುಳ್ಳಿ ಆವಕವಾಗಿತ್ತು. ಕ್ವಿಂಟಲ್‌ಗೆ ಕನಿಷ್ಠ ₹500, ಗರಿಷ್ಠ ₹1,800 ದೊರೆತಿದೆ. ₹1,200 ಮಾದರಿ ಬೆಲೆಯಾಗಿದೆ. ಕಳೆದ ಬಾರಿ ಸಿಕ್ಕ ಬೆಲೆಗೆ …

Read More »

ಚಲಿಸುತ್ತಿದ್ದ ಬಸ್ ನಲ್ಲಿ ಅಪ್ರಾಪ್ತ ಯುವತಿಗೆ ಚಾಲಕನಿಂದ ‘ಲೈಂಗಿಕ ಕಿರುಕುಳ’!

ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಚಲಿಸುತ್ತಿದ್ದ ಬಸ್ನಲ್ಲಿ ಅಪ್ರಾಪ್ತ ಯುವತಿಗೆ ಚಾಲಕನೊಬ್ಬ ಕಿರುಕುಳ ನೀಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ವಿಚಾರ ತಿಳಿದು ಚಾಲಕನಿಗೆ ಯುವತಿಯ ಪೋಷಕರು ಹಿಗ್ಗಾಮುಗ್ಗ ಥಳಿಸಿದ್ದಾರೆ.ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಅಪ್ರಾಪ್ತೆ ಗೆ ಚಾಲಕ ಕಿರುಕುಳ ನೀಡಿದ್ದಾನೆ ಬಸ್ ಡ್ರೈವರ್ ಬಳಿ ಯುವತಿ ಮೊಬೈಲ್ ಚಾರ್ಜ್ ಗೆ ಹಾಕಿದ್ದಳು ಕಿಸ್ ಕೊಟ್ಟರೆ ಮೊಬೈಲ್ ಕೊಡುತ್ತೇನೆ ಅಂತ ಬಸ್ ಚಾಲಕ ಆರಿಫ್ ಹೇಳಿದ್ದಾನೆ. …

Read More »

ಮಹಿಳೆಯ ತಲೆಗೆ `ಕುಕ್ಕರ್’ನಿಂದ ಹೊಡೆದು ಕೊಲೆ, ಚಿನ್ನಭಾರಣ ದೋಚಿ ಪರಾರಿ.!

ಹೈದರಾಬಾದ್‌ನ ಕುಕತ್‌ ಪಲ್ಲಿಯಲ್ಲಿ ಮಹಿಳೆಯೊಬ್ಬರ ಕೈ ಮತ್ತು ಕಾಲುಗಳಿಂದ ಕಟ್ಟಿಹಾಕಿ, ಕುಕ್ಕರ್‌ನಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ.ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ತಲುಪಿದ ಪೊಲೀಸರು, ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ.

Read More »

ಗೋವಿನ ಜೋಳದ ಬೆಳೆ ನಾಶವಾದ ಕಾರಣ ಆತ್ಮಹತ್ಯೆಗೆ ಶರಣಾದ ರೈತ.

ಧಾರವಾಡದ ಕುಂದಗೋಳದಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತೀವೃಷ್ಟಿ ಮಳೆಯಿಂದ ಗೋವಿನ ಜೋಳದ ಬೆಳೆ ನಾಶವಾಗಿದ್ದು, ಇದಕ್ಕೆ ಮನನ”ಂದ ರೈತ, ಜೀವ ಹಾನಿಮಾಡಿಕoಡಿದ್ದಾರೆ.ಬುತರ್ಲಘಟ್ಟ ಗ್ರಾಮದ ರುದ್ರಗೌಡ ಹುತ್ತನಗೌಡ ರಾಮನಗೌಡ್ರ ಎಂಬ ರೈತ ಆತ್ಮಹತ್ಯೆಗೀಡಾಗಿದ್ದು, ರೈತನಿಗೆ ಒಟ್ಟು 3‌ ಜಮೀನು ಇತ್ತು.ಹಾಗಾಗಿ ಜಮೀನಿನಲ್ಲಿ ಉತ್ತಮ ಬೆಳೆ ಬರಿಸಲು ರೈತ, ಕೆವಿಜಿ & ಸಹಾಕಾರಿ ಬ್ಯಾಂಕ್ನಿಂದ ಸಾಲ ಒಟ್ಟು 8 ಲಕ್ಷ ಸಾಲ ಮಾಡಿದ್ದಾರೆ. ಆದರೆ ಬೆಳೆ ಕೈಗೆ ಸಿಗದೇ, ನಷ್ಟವಾದ ಕಾರಣ, …

Read More »

ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ : ಮಾಜಿ ಪ್ರಧಾನಿ ‘ಜಲನಾಥ್ ಖಾನಲ್’ ಪತ್ನಿ ಸಜೀವ ದಹನ.!

ನೆಪಾಳದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಗೆ ಬೆಂಕಿ ಹಚ್ಚಿದ್ದರಿಂದ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಮಂಗಳವಾರ ಸಜೀವ ದಹನರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ಜನರಲ್ ಝಡ್ ನೇತೃತ್ವದ ಪ್ರತಿಭಟನಾಕಾರರು ಅವರನ್ನು ಅವರ ಮನೆಯಲ್ಲಿ ಬಂಧಿಸಿ ಮನೆಗೆ ಬೆಂಕಿ ಹಚ್ಚಿದರು.ಘಟನೆ ರಾಜ್ಯ ರಾಜಧಾನಿ ಕಠ್ಮಂಡುವಿನ ದಲ್ಲು ಪ್ರದೇಶದಲ್ಲಿರುವ ಅವರ ಮನೆಯಲ್ಲಿ ನಡೆದಿದೆ. ಶ್ರೀಮತಿ ಚಿತ್ರಾಕರ್ ಅವರನ್ನು ಕೀರ್ತಿಪುರ ಬರ್ನ್ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಚಿಕಿತ್ಸೆಯ …

Read More »