BigTv News
September 9, 2025
Breaking News
ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಪ್ರಕರಣವೊಂದರಲ್ಲಿ ವೇಶ್ಯಾವಾಟಿಕೆಗಾಗಿ ನಗರಕ್ಕೆ ಕಳ್ಳಸಾಗಣೆಯಾಗಿದ್ದ ಬಾಂಗ್ಲಾದೇಶದ 30 ವರ್ಷದ ಮಹಿಳೆಯೊಬ್ಬರು ತಪ್ಪಿಸಿಕೊಂಡು ಬಂದ ಬಳಿಕ ಬೆಂಗಳೂರು ಪೊಲೀಸರಿಂದ ರಕ್ಷಣೆಗೊಳಗಾಗಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ ಸಂತ್ರಸ್ತೆ ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡು ಭಾನುವಾರ ಸಹಾಯ ಕೋರಿ ಹುಳಿಮಾವು ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಕೆ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸಹಾಯಕ್ಕಾಗಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರ ಬಳಿಗೆ ಆಗಮಿಸಿದ್ದರು. ನಂತರ ಆಕೆಯನ್ನು ವಿಚಾರಿಸಿದಾಗ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದದ್ದಾಳೆ. .
Read More »
BigTv News
September 9, 2025
Breaking News
ಕೆಲಸ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರನ್ನು ವಂಚಿಸುವ ಜಾಲದೊಂದಿಗೆ ಸಂಪರ್ಕ ಹೊಂದಿದ್ದೀರಿ. ಇದರಿಂದ ₹ 30 ಲಕ್ಷ ಕಮಿಷನ್ ಪಡೆದಿದ್ದೀರಿ. ಬ್ಯಾಂಕ್ ಖಾತೆಯಲ್ಲಿ ₹ 30 ಕೋಟಿ ವಹಿವಾಟು ನಡೆದಿರುವುದಕ್ಕೆ ಸಾಕ್ಷ್ಯಗಳಿವೆ. ವಂಚಕರ ಜಾಲದಲ್ಲಿ ಸಿಲುಕಿಲ್ಲ ಎಂಬುದನ್ನು ಖಚಿತಪಡಿಸಲು ₹ 26 ಲಕ್ಷ ಹಣ ವರ್ಗಾವಣೆ ಮಾಡಿ.ಅಂದಾಜು ₹ 86 ಲಕ್ಷ ಹಣವನ್ನು ಐವರು ಕಳೆದುಕೊಂಡಿದ್ದಾರೆ. 38 ವರ್ಷದ ಗೃಹಿಣಿಯಿಂದ 74 ವರ್ಷದ ನಿವೃತ್ತ ಪ್ರಾಧ್ಯಾಪಕರವರೆಗೆ ಹಲವರು ವಂಚನೆಗೆ ಒಳಗಾಗಿದ್ದಾರೆ.ಷೇರುಗಳ ಮೌಲ್ಯ …
Read More »
BigTv News
September 9, 2025
Breaking News
ದೇಶ ನೇಪಾಳದಲ್ಲಿ ಶುರುವಾಗಿರುವ ಜೆನ್ ಝೀ ಪ್ರತಿಭಟನೆ ಮಂಗಳವಾರ ಮತ್ತೆ ತಾರಕಕ್ಕೇರಿದೆ. ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ಹಿಂಪಡೆದ ನಂತರವೂ ಪ್ರತಿಭಟನಾಕಾರರ ಆಕ್ರೋಶ ಕುಗ್ಗದೆ, ಇಂದು ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ನಿವಾಸಕ್ಕೆ ಬೆಂಕಿಯಿಟ್ಟಿದ್ದಾರೆ.ರಸ್ತೆಗಳನ್ನು ತಡೆದಿರುವ ಪ್ರತಿಭಟನಾಕಾರರು ಮಧ್ಯದಲ್ಲಿ ಟೈರುಗಳನ್ನು ಸುಟ್ಟು ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಪೊಲೀಸರು ಅಶ್ರುವಾಯು ಮುಂದಾಗಿರುವುದು ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
Read More »
BigTv News
September 9, 2025
Breaking News
ನಗರದ ಪ್ರಿಯಾಂಕಾ ಮಹಿಳಾ ಮತ್ತಿನ ಸಹಕಾರ ಸಂಘದ ಅಧ್ಯಕ್ಷೆ ಪ್ರಿಯಾಂಕಾ ಜೈನ್ ಅವರಿಗೆ ನೀಡಿರುವ ಜಾಮೀನು ರದ್ದುಪಡಿಸಿ ಪೊಲೀಸ್ ಕಸ್ಟಡಿಗೆ ನೀಡಬೇಕು, ಈ ವಂಚನೆಗೆ ಪ್ರೇರಣೆ ಎನ್ನಲಾದ ಶ್ರೀ ತಾಯಮ್ಮ ಮಹಿಳಾ ಶಕ್ತಿ ಸಂಘದ ಅಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 300ಕ್ಕೂ ಅಧಿಕ ಮಹಿಳೆಯರಿಗೆ ಕೋಟ್ಯಂತರ ಹಣ ವಂಚಿಸಲಾಗಿದೆ, ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ದೂರು ಸಲ್ಲಿಸಿರುವವರ ಅಭಿಪ್ರಾಯ ಪರಿಗಣಿಸಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು …
Read More »
BigTv News
September 9, 2025
Breaking News
ಬೆಂಗಳೂರು ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಆರೋಪಿಯ ಪರಾರಿ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.ಭಾರತೀಯ ದಂಡ ಸಂಹಿತೆಯ ಸೆಕ್ಷನ್ 262ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಪ್ರಸ್ತುತ ಸಿದ್ದಾಪುರ ಪೊಲೀಸರು ಘಟನಾ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿ, ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು …
Read More »
BigTv News
September 9, 2025
Breaking News
ಮಂಗಳವಾರ ಮಧ್ಯಾಹ್ನ ದೆಹಲಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.ಆವರಣದಾದ್ಯಂತ ತಪಾಸಣೆ ಮತ್ತು ಸ್ಕ್ಯಾನ್ಗಳನ್ನು ನಡೆಸಲು ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್)ವನ್ನು ತಕ್ಷಣವೇ ನಿಯೋಜಿಸಲಾಯಿತು, ಹೆಚ್ಚುವರಿ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಯಿತು.
Read More »
BigTv News
September 9, 2025
Breaking News
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಕುರಿತು ಇಂದು ಆದೇಶ ಹೊರ ಬರಲಿದೆ. ಆದರೆ ದರ್ಶನ್ ಕೋರ್ಟ್ ನಲ್ಲಿ ನನಗೆ ವಿಷ ಕೊಡಿ ಅಂತ ಹೇಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಹಾಸಿಗೆ ದಿಂಬು ಮನೆಯ ಊಟ ವಿಚಾರಕ್ಕೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದ್ದು ಅಲ್ಲದೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಇವೆರಡರ ಕುರಿತು ಆದೇಶ ಹೊರಬೀಳಲಿದೆ.ಮಧ್ಯಾಹ್ನ ಆದೇಶ ನೀಡುತ್ತೇವೆ ಎಂದು …
Read More »
BigTv News
September 9, 2025
Breaking News
ಬಿಡಿಸಿಸಿ ಬ್ಯಾಂಕ್ ಚುನಾವಣಾ ಕಣ ರಂಗೇರುತ್ತಿದ್ದು, ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಎದುರೇ, ಅವರನ್ನು ಬೆಂಬಲಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕನನ್ನು ಆತನ ಪತ್ನಿಯೇ ಕೊರಳಪಟ್ಟಿ ಹಿಡಿದು ಎಳೆದಾಡಿ, ಕಪಾಳಮೋಕ್ಷ ಮಾಡಿರುವ ಘಟನೆ ಸೋಮವಾರ ನಡೆದಿದೆ.
Read More »
BigTv News
September 9, 2025
Breaking News
ಕತಿಹಾರ್ ಸಂಸದ ತಾರಿಕ್ ಅನ್ವರ್ ತಮ್ಮ ಬೆಂಬಲಿಗರು ಮತ್ತು ಕಾರ್ಮಿಕರೊಂದಿಗೆ ಬರಾರಿ ಮತ್ತು ಮಣಿಹರಿ ವಿಧಾನಸಭೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಸಂಸದರು ತಮ್ಮ ಬೆಂಬಲಿಗರೊಂದಿಗೆ ದೋಣಿ ಮತ್ತು ಟ್ರ್ಯಾಕ್ಟರ್ ಹತ್ತಿ ಗ್ರಾಮಸ್ಥರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸದ ಸಮಯದಲ್ಲಿ, ಸಂಸದ ತಾರಿಕ್ ಅನ್ವರ್ ಮಣ್ಣು ಮತ್ತು ನೀರನ್ನು ನೋಡಿದ ನಂತರ ಯುವಕನ ಹೆಗಲ ಮೇಲೆ ಹತ್ತಿದರು. ಅದರ ವೀಡಿಯೊ ಕೂಡ …
Read More »
BigTv News
September 9, 2025
Breaking News
ಸಿಲಿಕಾನ್ ಸಿಟಿಯ ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ಕಾರ್ ಡ್ರೈವರ್ ಒಬ್ಬನನ್ನು ಕಲ್ಲಿನಿಂದ ಹೊಡೆದು ಕೊ8ಲೆ ಮಾಡಲಾಗಿದೆ. ಈ ಭೀಕರ ಹತ್ಯೆ ಪ್ರಕರಣವು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಸಾವನ್ನಪ್ಪಿರುವ ವ್ಯಕ್ತಿ ರೌಡಿಶೀಟರ್ ಕೌಶಿಕ್ (25) ಎಂದು ಗುರುತಿಸಲಾಗಿದೆ.ಹತ್ಯೆಯ ಮಾಹಿತಿ ದೊರಕುತ್ತಿದ್ದಂತೆ ಬ್ಯಾಟರಾಯನಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪೋಸ್ಟ್‌ಮಾರ್ಟಂ ವರದಿ ಆಧಾರದ ಮೇಲೆ ಹೆಚ್ಚಿನ ಮಾಹಿತಿಗಳು ಹೊರಬರುವ ನಿರೀಕ್ಷೆಯಿದೆ. ಈ …
Read More »