ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಪ್ರಕರಣವೊಂದರಲ್ಲಿ ವೇಶ್ಯಾವಾಟಿಕೆಗಾಗಿ ನಗರಕ್ಕೆ ಕಳ್ಳಸಾಗಣೆಯಾಗಿದ್ದ ಬಾಂಗ್ಲಾದೇಶದ 30 ವರ್ಷದ ಮಹಿಳೆಯೊಬ್ಬರು ತಪ್ಪಿಸಿಕೊಂಡು ಬಂದ ಬಳಿಕ ಬೆಂಗಳೂರು ಪೊಲೀಸರಿಂದ ರಕ್ಷಣೆಗೊಳಗಾಗಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ ಸಂತ್ರಸ್ತೆ ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡು ಭಾನುವಾರ ಸಹಾಯ ಕೋರಿ ಹುಳಿಮಾವು ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಕೆ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸಹಾಯಕ್ಕಾಗಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರ ಬಳಿಗೆ ಆಗಮಿಸಿದ್ದರು. ನಂತರ ಆಕೆಯನ್ನು ವಿಚಾರಿಸಿದಾಗ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದದ್ದಾಳೆ. .
bigtvnews | Hubli Dharwad News | Kannada News | Karnataka News Hubli News | News In Hubli | Local news

