BigTv News
September 8, 2025
Breaking News
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ನಡೆದ ಘರ್ಷಣೆ ಇಂದು ತೀವ್ರವಾಗಿದೆ. ಇಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡಲು ಮುಂದಾಗಿದ್ದು, ಪರಿಸ್ಥಿತಿ ಹದಗೆಟ್ಟಿದೆ. ಈ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ತುರ್ತು ಚರ್ಚೆ ನಡೆಸಿದ್ದು, ಪೊಲೀಸರಿಗೆ ಅಗತ್ಯ ಸೂಚನೆ ನೀಡಿದ್ದಾರೆ
Read More »
BigTv News
September 8, 2025
Breaking News
ನಗರದ ಜಿಕೆವಿಕೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಸನ್‌ರೂಫ್‌ನಿಂದ ಹೊರಗೆ ನಿಂತಿದ್ದ ಚಿಕ್ಕ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ತಂದೆಯ ನಿರ್ಲಕ್ಷ್ಯದಿಂದ ನಡೆದ ಈ ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಅಪಾಯದ ಬಗ್ಗೆ ಅರಿವಿಲ್ಲದ ಬಾಲಕನ ತಲೆ ನೇರವಾಗಿ ಬ್ಯಾರಿಕೇಡ್‌ಗೆ ಬಡಿದಿದ್ದು, ತೀವ್ರ ಆಘಾತದಿಂದ ಆತ ತಕ್ಷಣವೇ ಕಾರಿನೊಳಗೆ ಕುಸಿದು ಬಿದ್ದಿದ್ದಾನೆ. ತಲೆಗೆ ಗಂಭೀರ ಪೆಟ್ಟಾಗಿರುವ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ …
Read More »
BigTv News
September 8, 2025
Breaking News
ನಾಳೆ ಇರ್ತಿನೋ ಇಲ್ವೋ, ಏನ್ ಮಾಡ್ತಿನೋ ಗೊತ್ತಿಲ್ಲ ಎಂದು ರೀಲ್ಸ್ ಮಾಡಿದ ಸ್ವಾಮೀಜಿ ಸಾವನಪ್ಪಿದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ನಿನ್ನೆ (ಭಾನುವಾರ) ರೀಲ್ಸ್ ಮಾಡಿದ್ದ ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿದ್ದಾರೆ.ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
September 8, 2025
Breaking News
ಗೊಬ್ಬರದ ಮೂಟೆ ಮೈ ಮೇಲೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಗುರುವಾರ ಸಮೀಪದ ಗೇರುಬೈಲು ಗ್ರಾಮದಲ್ಲಿ ನಡೆದಿದೆ. ಕರ್ಕೇಶ್ವರ ಗ್ರಾಮದ ಮೇಲ್ಪಾಲ್‌ನ ಪೂರ್ಣೇಶ್ (27) ಮೃತಪಟ್ಟ ಯುವಕ. ಈತ ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸಿಕೊಂಡಿದ್ದು, ಕೃಷಿ ಸಂಘದಿಂದ ಗೇರುಬೈಲಿನ ಖಾಸಗಿ ಎಸ್ಟೇಟ್‌ಗೆ ನೀಡಲು ಗೊಬ್ಬರದ ಮೂಟೆಗಳನ್ನು ಪಿಕ್‌ಅಪ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾನೆ.ಬಳಿಕ ಗೊಬ್ಬರದ ಮೂಟೆಗಳನ್ನು ಪಿಕ್‌ಅಪ್‌ನಿಂದ ಅನ್‌ಲೋಡ್ ಮಾಡುವಾಗ ಆಕಸ್ಮಿಕ ಕಾಲು ಜಾರಿ ಕುಸಿದು ಬಿದ್ದಿದ್ದು, …
Read More »
BigTv News
September 8, 2025
Breaking News
ದಕ್ಷಿಣ ಕೊರಿಯಾದ ಸಾಂಗ್ಕ್ಯುಂಕ್ವಾನ್ ವಿಶ್ವವಿದ್ಯಾಲಯದ ಸಂಶೋಧಕರು ಮೂಳೆಯಲ್ಲಿ ಹೊಸ ಆವಿಷ್ಕಾರವನ್ನು ಮಾಡಿದ್ದಾರೆ. ಅವರು ಸಾಮಾನ್ಯ ಅಂಟು ಗನ್ ಅನ್ನು 3D ಮುದ್ರಣ ಯಂತ್ರದೊಂದಿಗೆ ಬದಲಾಯಿಸಿದ್ದಾರೆ, ಅದು ಮೂಳೆಯಂತಹ ವಸ್ತುಗಳನ್ನು ನೇರವಾಗಿ ಮುರಿದ ಮೂಳೆಗಳ ಮೇಲೆ ಮುದ್ರಿಸಬಹುದು.ಹೊಸ ತಂತ್ರಜ್ಞಾನವು ಸಂಕೀರ್ಣ ಮೂಳೆ ಶಸ್ತ್ರಚಿಕಿತ್ಸೆಯನ್ನು ಸುಲಭ ಮತ್ತು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಅಧ್ಯಯನವನ್ನು ನಡೆಸಿದ ವಿಜ್ಞಾನಿಗಳು ಹೇಳುತ್ತಾರೆ.ಹೊಸ ತಂತ್ರಜ್ಞಾನವನ್ನು ಕಂಡುಹಿಡಿದ ಜಂಗ್ ಸೆಯುಂಗ್ ಲೀ ಮಾತನಾಡಿ, ನಮ್ಮ ತಂತ್ರಜ್ಞಾನವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮುರಿದ …
Read More »
BigTv News
September 8, 2025
Breaking News
ಉಡುಪಿ :ಬೈಕ್ ಉರುಳಿ ಬಿದ್ದು ಸಹ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಣಿಪಾಲ – ಅಲೆವೂರು ರಸ್ತೆಯ ಮಂಚಿ ಇಳಿಜಾರಿನ ತಿರುವಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಕಟಪಾಡಿ ನಿವಾಸಿ ಮೋಹನ್ (33) ಮೃತಪಟ್ಟವರು. ಬೈಕ್ ಚಲಾಯಿಸುತ್ತಿದ್ದ ಪ್ರದೀಪ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೋಹನ್ ಅವರು ಪೊದೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರು. ರವಿವಾರ ಬೆಳಗ್ಗಿನ ವರೆಗೆ ಈ ಘಟನೆ ಯಾರ ಅರಿವಿಗೆ ಬಂದಿರಲಿಲ್ಲ ಎನ್ನಲಾಗುತ್ತಿದೆ.
Read More »
BigTv News
September 8, 2025
Breaking News
ಮುಂಬೈನ ಕುರ್ಲಾದ ಖೈರಾನಿ ರಸ್ತೆಯಲ್ಲಿ ನೇತಾಡುತ್ತಿದ್ದ ತಂತಿಯು ಗಣೇಶ ಮೂರ್ತಿಗೆ ತಗುಲಿ ಆರು ಜನರಿಗೆ ವಿದ್ಯುದಾಘಾತವಾಗಿದೆ. ಘಟನೆಯಲ್ಲಿ ಸುಕುಮಾರನ್ ಕುಮಾರನ್ (36) ಮೃತಪಟ್ಟಿದ್ದು, ಇಬ್ಬರು ಬಾಲಕರು ಸೇರಿ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಾಂದೇಡ್ ಜಿಲ್ಲೆಯಲ್ಲಿ ಗಡೇಗಾಂವ್‌ನ ನದಿಯೊಂದರಲ್ಲಿ ಮೂವರು ಕೊಚ್ಚಿಕೊಂಡು ಹೋಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ. ಉಳಿದ ಇಬ್ಬರ ಪತ್ತೆ ಕಾರ್ಯ ಮುಂದುವರೆದಿದೆ. ನಾಸಿಕ್ ಜಿಲ್ಲೆಯಲ್ಲಿ ನಾಲ್ವರು ಕೊಚ್ಚಿಕೊಂಡು ಹೋಗಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಜಲಗಾಂವ್‌ನಲ್ಲಿ ನಡೆದ ಪತ್ಯೇಕ ಘಟನೆಗಳಲ್ಲಿ ಮೂವರು …
Read More »
BigTv News
September 8, 2025
Breaking News
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಹತ್ಯೆಗೆ ಪತ್ನಿಯೇ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ. ಪ್ರಿಯಕರನ ಜೊತೆ ಸೇರಿದ ಸುನಂದಾ ಪತಿ ಬೀರಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಸಿದ್ದಪ್ಪ ಕ್ಯಾತಕೇರಿ ಎಂಬಾತನ ಜೊತೆ ಸುನಂದಾ ಅಕ್ರಮ ಸಂಬಂಧ ಹೊಂದಿದ್ದಾಗಿ ಬೀರಪ್ಪ ಆರೋಪಿಸಿದ್ದಾರೆ.ಸಿದ್ದಪ್ಪ ಮನೆಗೆ ನುಗ್ಗಿದ್ದು ತನ್ನ ಕತ್ತು ಹಿಸುಕಿ, ಮರ್ಮಾಂಗಕ್ಕೆ ಒದ್ದು ಮಾರಾಣಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ದೂರಿದ್ದಾನೆ.
Read More »
BigTv News
September 8, 2025
Breaking News
ಹಣ ಮತ್ತು ಆಸ್ತಿಗಾಗಿ ನಿರಂತರವಾಗಿ ಜಗಳ ತೆಗೆಯುತ್ತಿದ್ದ ಮಗನೊಬ್ಬನನ್ನು ಆತನ ತಂದೆ, ತಾಯಿ ಹಾಗೂ ಯೋಧ ಸಹೋದರ ಸೇರಿ ಕೈ-ಕಾಲು ಕಟ್ಟಿ, ಡೀಸೆಲ್ ಸುರಿದು ಸುಟ್ಟು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ.ಮೃತನನ್ನು ಅನಿಲ್ ಕಾನಟ್ಟಿ (32) ಎಂದು ಗುರುತಿಸಲಾಗಿದೆ. ಅನಿಲ್ ಮದ್ಯಪಾನ ಮತ್ತು ಆನ್‌ಲೈನ್ ಬೆಟ್ಟಿಂಗ್ ಸೇರಿದಂತೆ ಹಲವು ದುಶ್ಚಟಗಳಿಗೆ ದಾಸನಾಗಿದ್ದ. ಈಗಾಗಲೇ ಕುಟುಂಬದವರು ಆತನ ₹20 ಲಕ್ಷ ಸಾಲವನ್ನು ತೀರಿಸಿದ್ದರೂ, ಮತ್ತೆ …
Read More »
BigTv News
September 8, 2025
Breaking News
ಫರೂಕಾಬಾದ್‌ನ ಬಿಜೆಪಿ ಸಂಸದ ಮುಖೇಶ್ ರಜಪೂತ್ ಅವರ ಸಹೋದರಿ, ತಮ್ಮ ಅತ್ತೆ-ಮಾವ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ದೂರಿನ ಪ್ರಕಾರ ರೀನಾ ಸಿಂಗ್ ಅವರ ಮಾವ ಲಕ್ಷ್ಮಣ್ ಸಿಂಗ್ ಮತ್ತು ಸೋದರ ಮಾವ ರಾಜೇಶ್ ಮತ್ತು ಗಿರೀಶ್ ಅವರು ತಮ್ಮ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ
Read More »