Breaking News

Breaking News

ವಿಜಯನಗರ: ಟಿಪ್ಪರ್‌ಗೆ ಬಸ್ ಡಿಕ್ಕಿ; ನಿರ್ವಾಹಕ ಸಾವು, ಚಾಲಕನಿಗೆ ಗಾಯ!

ಟಿಪ್ಪರ್ ಲಾರಿಗೆ ಹಿಂದಿನಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬಸ್ ಡಿಕ್ಕಿ ಹೊಡೆದ ಪರಿಣಾಮ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ತೀವ್ರ ಗಾಯಗೊಂಡ ಘಟನೆ ಸಮೀಪದ ಹಾರುವನಹಳ್ಳಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ರಾತ್ರಿ ನೆಡೆದಿದೆ.ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಭಟಪನಹಳ್ಳಿ ಗ್ರಾಮದ ನಿರ್ವಾಹಕ ಉಮೇಶ್ ಮರಿಯಪ್ಪ ಹಾದಿಮನಿ (41) ಮೃತರು. ಅದೇ ತಾಲ್ಲೂಕಿನ ಅಡೂರು ಗ್ರಾಮದ ಚಾಲಕ ಮಬೂಸಾಬ್ ತೀವ್ರವಾಗಿ ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ …

Read More »

ಕಳೆ ಕತ್ತರಿಸುವ ಯಂತ್ರಗಳಿಗೆ ಕೃಷಿಕರ ಬೇಡಿಕೆ: ಒಂದು ಯಂತ್ರ, ಬಹುಪಯೋಗಿ ಕೆಲಸ

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಶ್ರಮಿಕರ ಕೊರತೆ ಹೆಚ್ಚಾಗಿದ್ದು ಸಾಗುವಳಿದಾರರು ಮಾನವ ಶ್ರಮದ ಬದಲು ಕೃಷಿ ಯಂತ್ರಗಳತ್ತ ಚಿತ್ತ ಹರಿಸಿದ್ದಾರೆ.ಹೊಲ, ಗದ್ದೆ, ತೋಟ, ತಿಟ್ಟುಗಳನ್ನು ಹಸನು ಮಾಡಲು, ಕಳೆ ಕೀಳಲು, ಬಂಡು ಎತ್ತರಿಸಲು ಯಂತ್ರಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.ಸರ್ಕಾರ ಕಾರ್ಮಿಕರ ಸಮಸ್ಯೆ ನೀಗಿಸಿ, ಕೃಷಿ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆ ಜಾರಿಗೆ ತಂದಿದ್ದು 2025-26ನೇ ಸಾಲಿನಲ್ಲಿ ಉಳುಮೆಯಿಂದ ಕೊಯ್ಲಿನವರೆಗೂ ಹಲವು ಮಾದರಿಯ ಕೃಷಿ ಯಂತ್ರಗಳನ್ನು ನೀಡುತ್ತಿದೆ.ಸಾಮಾನ್ಯ ರೈತರಿಗೆ …

Read More »

ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ ಸಾವು!

ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಕಳೆದ 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತನಿಖೆಯ ವರದಿಯಲ್ಲಿ ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ ಮಗು ಮೃತಪಟ್ಟಿದೆ ಎಂಬುದು ವರದಿಯಾಗಿದೆ.ಶ್ವಾಸಕೋಶ ಹಾಗೂ ಮೆದುರಳಿನಲ್ಲಿ ರಕ್ತ ಹೆಪ್ಪು ಗಟ್ಟಿದ್ದು, ಮಗು ಮೃತಪಟ್ಟಿದೆ ಎಂಬುದು ಧೃಡವಾಗಿದೆ. ನಮ್ಮ ಮಗುವಿನ ಸಾವಿಗೆ ನ್ಯಾಯ ಬೇಕು ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಅನಸ್ತೇಷಿಯಾ …

Read More »

ಚಾಮರಾಜನಗರ ಶಾಲೆಯಲ್ಲಿ ಕುಸಿದುಬಿದ್ದು 1ನೇ ತರಗತಿ ವಿದ್ಯಾರ್ಥಿ ಸಾವು!

ಜಿಲ್ಲೆಯಲ್ಲಿ ಇಂದು ಎರಡು ವಿಭಿನ್ನ ಘಟನೆಗಳು ನಡೆದಿವೆ. ಒಂದು ಕಡೆ ಹೃದಯ ಸಂಬಂಧಿ ಸಮಸ್ಯೆಯಿಂದ ಶಾಲಾ ವಿದ್ಯಾರ್ಥಿಯೊಬ್ಬ ಕುಸಿದುಬಿದ್ದು ಮೃತಪಟ್ಟರೆ, ಮತ್ತೊಂದು ಕಡೆ ಸರ್ಕಾರಿ ಶಾಲೆಗೆ ಬಂದ ಮರಿಯಾನೆಯನ್ನು ರಕ್ಷಿಸಲಾಗಿದೆ. ತಿಳಿದ ಕೂಡಲೇ ಕೇರಳ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಮರಿಯಾನೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸದ್ಯ, ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಯನ್ನು ಅದರ ತಾಯಿಯೊಂದಿಗೆ ಮತ್ತೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆ ಮಕ್ಕಳಲ್ಲಿ ಅಚ್ಚರಿ ಮತ್ತು ಸಂತಸ ತಂದರೆ, …

Read More »

ಧಾರವಾಡ :ಥಿನ್ನರ್‌ ಬಾಟಲಿ ಜಾರಿ ಬಿದ್ದು ಮಗು ಸಾವನ್ನಪ್ಪಿದ ಮರುದಿನವೇ ರಕ್ಷಿಸಲು ತಂದೆ ಕೂಡ ಸಾವು

ಥಿನ್ನರ್‌ ಬಾಟಲಿ ಜಾರಿ ಬಿದ್ದು ಮಗು ಸಾವನ್ನಪ್ಪಿದ ಮರುದಿನವೇ ರಕ್ಷಿಸಲು ಮುಂದಾಗಿ ಗಂಭೀರ ಗಾಯಗೊಂಡಿದ್ದ ತಂದೆಯೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಂದು ಮೃತಪಟ್ಟಿರುವ ಘಟನೆ ಧಾರವಾಡದ ಸಂತೋಷ್‌ ನಗರದಲ್ಲಿ ನಡೆದಿದೆ.ಥಿನ್ನರ್‌ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಬಾಲಕನ ದೇಹ ಸುಟ್ಟು ಹೋಗಿತ್ತು.ಮಗನನ್ನು ಕಾಪಾಡಲು ಹೋಗಿದ್ದ ಚಂದ್ರಕಾಂತ್‌ಗೆ ಸಹ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಕೂಡಲೆ ಮನೆಯವರು ತಂದೆ, ಮಗನನ್ನು ಕಿಮ್ಸೌಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಬಾಲಕ ಅಗಸ್ತ್ಯ ಮೃತಪಟ್ಟಿದ್ದ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ …

Read More »

ತಿಪಟೂರು: ಯೂರಿಯಾಗೆ ರೈತರ ಸಾಲು!

ನಗರ ಹಾಗೂ ತಾಲ್ಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಯೂರಿಯಾ ದೊರೆಯದ ಕಾರಣ ರೈತರು ಪರದಾಡುತ್ತಿದ್ದು, ಸರ್ಕಾರಿ ಸಂಘಗಳಲ್ಲೇ ಗೊಬ್ಬರ ಕೊರತೆಯಿಂದ ರೈತರು ಖಾಸಗಿ ಕೃಷಿ ಕೇಂದ್ರಗಳಿಗೆ ಮುಗಿಬಿದ್ದರು.ರೈತನ ಹೊಲ ಹಸಿರಾಗಬೇಕಾದರೆ ಮೊದಲು ಸರ್ಕಾರದ ಮನಸ್ಸು ಹಸಿರಾಗಬೇಕು. ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಪ್ರತಿ ವರ್ಷವೂ ರೈತರು ರಸಗೊಬ್ಬರಕ್ಕೆ ಅಲೆದಾಡಬೇಕಿದೆ. ಸಹಕಾರ ಸಂಘಗಳು ಹೆಸರಿಗಷ್ಟೇ ರೈತರ ಬೆಂಬಲಕ್ಕಿದೆ ಎಂದು ಹೇಳುತ್ತಾರೆ. ಕೃಷಿ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿದರೆ ಯಾವುದೇ ಅನಾಹುತಗಳು ಇರುವುದಿಲ್ಲ’ ಎಂದು …

Read More »

ಭಾರೀ ಮಳೆಗೆ ಭೂಕುಸಿತ: ಸಂಚಾರಕ್ಕೆ ಅಡ್ಡಿ, ಜನಜೀವನ ಅಸ್ತವ್ಯಸ್ತ!

ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ಜನತೆ ಹೈರಾಣಾಗಿದ್ದಾರೆ. ಸಕಲೇಶಪುರದಲ್ಲಂತೂ ಮಳೆಯ ಅಬ್ಬರ ಹೇಳತೀರದಾಗಿದೆ.ಜೋರು ಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಭೂಕುಸಿತ, ಗುಡ್ಡ ಕುಸಿತದಂತ ಪ್ರಕರಣಗಳು ವರದಿಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದೆ.ಸತತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಹೆಗ್ಗದ್ದೆ ಬಳಿ ನಿರಂತರವಾಗಿ ಭೂಕುಸಿತ ಉಂಟಾಗುತ್ತಿದೆ. ರಸ್ತೆಗೆ ಭಾರೀ ಪ್ರಮಾಣದ ಮಣ್ಣು ಕುಸಿದಿದ್ದು ಸಂಚಾರಕ್ಕೆ ಅಡಿಪಡಿಸಿದೆ.

Read More »

ರೈಲ್ವೆ ಹಳಿ ಮಧ್ಯ ಸೌರವಿದ್ಯುತ್ ಉತ್ಪಾದನೆ! ದೇಶದಲ್ಲೇ ಮೊದಲ ಐತಿಹಾಸಿಕ ಹೆಜ್ಜೆ!

ಭಾರತೀಯ ರೈಲ್ವೆ ಮಟ್ಟಿಗೆ ಇದೊಂದು ಐತಿಹಾಸಿಕ ಹಾಗೂ ಮೊದಲ ಬಾರಿಗೆ ನಡೆಸುತ್ತಿರುವ ಪ್ರಯತ್ನವಾಗಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಭಾರತೀಯ ರೈಲ್ವೆಯ ಉತ್ಪಾದನಾ ಘಟಕವಾದ ‘ಬನಾರಸ್ ಲೋಕೋಮೋಟಿವ್ ವರ್ಕ್ಸ್’ ರೈಲ್ವೆ ಹಳಿಯಿಂದಲೇ ವಿದ್ಯುತ್ ಉತ್ಪಾದಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇಂತಹ ಪ್ರಯತ್ನ ದೇಶದಲ್ಲೇ ಮೊದಲು ಎನ್ನಬಹುದು. ನೀರು, ಪವನ ಮೂಲಕ ಉತ್ಪಾದಿಸುವ ವಿದ್ಯುತ್ ಅನ್ನು ರೈಲು ಚಲನೆಗೆ ಬಳಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ರೈಲ್ವೆ ಟ್ರ್ಯಾಕ್ ಮೇಲಿನ ಸೋಲಾರ್ ಪ್ಲೇಟ್‌ಗಳಿಂದ ವಿದ್ಯುತ್‌ ಉತ್ಪಾದಿಸಿ ಅದನ್ನು …

Read More »

ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ಹಣ ಪೀಕಿದ ವೃದ್ಧ!

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಓರ್ವ ವೃದ್ಧ ಜನರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾನೆ. ನಿವೃತ್ತ ಲೋಕೋ ಪೈಲಟ್​ ಶಿವಕುಮಾರ್ (71 ವರ್ಷ) ವಂಚಿಸಿದ ಆರೋಪಿ.ಆರೋಪಿ ಶಿವಕುಮಾರ ರಾಮನಗರದ ಸಾವಿತ್ರಮ್ಮ ಎಂಬುವರ ಬಳಿ 8.65 ಲಕ್ಷ ನಗದು, 3 ಲಕ್ಷ ಮೌಲ್ಯದ 59 ಗ್ರಾಮ ಚಿನ್ನಭರಣ ಪಡೆದಿದ್ದಾನೆ. ಬಳಿಕ, ಶಿವಣ್ಣ ಎಂಬುವರಿಂದ 4 ಲಕ್ಷ 50 ಸಾವಿರ ರೂ. ಹಣ ಪಡೆದಿದ್ದಾನೆ. ನಂತರ, ಇವರಿಗೆಲ್ಲ ರೈಲ್ವೆ ಇಲಾಖೆಯ …

Read More »

BMTC’ ಗೆ ಮತ್ತೊಂದು ಬಲಿ : ಬೈಕ್ ಸವಾರ ಸಾವು.!

ಬೆಂಗಳೂರಿನ ಸಂಜಯನಗರದಲ್ಲಿ ಮಗುವಿಗೆ ಉಪಹಾರ ತರಲು ಬೈ‍ಕ್ ನಲ್ಲಿ ಹೋಗುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ರೋಶನ್ ಎಂಬ ವ್ಯಕ್ತಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದು , ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಸವಾರ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

Read More »