ನಗರ ಹಾಗೂ ತಾಲ್ಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಯೂರಿಯಾ ದೊರೆಯದ ಕಾರಣ ರೈತರು ಪರದಾಡುತ್ತಿದ್ದು, ಸರ್ಕಾರಿ ಸಂಘಗಳಲ್ಲೇ ಗೊಬ್ಬರ ಕೊರತೆಯಿಂದ ರೈತರು ಖಾಸಗಿ ಕೃಷಿ ಕೇಂದ್ರಗಳಿಗೆ ಮುಗಿಬಿದ್ದರು.ರೈತನ ಹೊಲ ಹಸಿರಾಗಬೇಕಾದರೆ ಮೊದಲು ಸರ್ಕಾರದ ಮನಸ್ಸು ಹಸಿರಾಗಬೇಕು. ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಪ್ರತಿ ವರ್ಷವೂ ರೈತರು ರಸಗೊಬ್ಬರಕ್ಕೆ ಅಲೆದಾಡಬೇಕಿದೆ. ಸಹಕಾರ ಸಂಘಗಳು ಹೆಸರಿಗಷ್ಟೇ ರೈತರ ಬೆಂಬಲಕ್ಕಿದೆ ಎಂದು ಹೇಳುತ್ತಾರೆ. ಕೃಷಿ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿದರೆ ಯಾವುದೇ ಅನಾಹುತಗಳು ಇರುವುದಿಲ್ಲ’ ಎಂದು ಹೊಲದಮನೆ ಹರೀಶ್ ಹೇಳಿದರು.ಪವನ್ ಸಹಾಯಕ ಕೃಷಿ ನಿರ್ದೇಶಕಪ್ರತಿ ರೈತ ರಸಗೊಬ್ಬರ ಪಡೆದಾಗ ಬಿಲ್ ಪಡೆಯಬೇಕು. ಒಂದು ಎಕರೆ ರಾಗಿಗೆ 22 ಕೆ.ಜಿ ಅಗತ್ಯ. ಈಗಾಗಲೇ ಸಾರ್ಥವಳ್ಳಿ ಬುರಡೇಘಟ್ಟ ಹಾಲ್ಕುರಿಕೆ ಸಹಕಾರ ಸಂಘಗಳಲ್ಲಿ ನೀಡಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

