ದಾವಣಗೆರೆ; ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆಯನ್ನು ವಿರೋಧಿಸಿ ದಾವಣಗೆರೆಯಲ್ಲಿಂದು ಫೆಡರೇಶನ್ ಆಪ್ ಕರ್ನಾಟಕ ಆಟೋ ರಿಕ್ಷಾ ಸಮಿತಿಯವತಿಯಿಂದ ಪ್ರತಿಭಟನೆ ನಡೆಸಲಾಯಿತು.ದಾವಣಗೆರೆಯ ಜಯದೇವ ವೃತ್ತದಲ್ಲಿ ಆಟೋ ಚಾಲಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.ಬಳಿಕ ಪ್ರತಿಭಟನಾಕಾರರು ಎಸಿ ಕಚೇರಿಗೆ ತೆರಳಿ ಈ ಕಾಯ್ದೆಯು ಚಾಲಕರಿಗೆ ಮಾರಕವಾಗಿದೆ. ಹೀಗಾಗಿ ಆಟೋ ಚಾಲಕರು ಈ ಕಾಯ್ದೆಯನ್ನು ವಿರೋಧಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮನವಿ ಸಲ್ಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





