Breaking News

Breaking News

ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನು ‘ಬೈಕ್’ ಗೆ ಕಟ್ಟಿ ಸಾಗಿಸಿದ ಪತಿ

ನಾಗ್ಪುರದಿಂದ ಒಂದು ಆತಂಕಕಾರಿ ವಿಡಿಯೋ ಹೊರಬಿದ್ದಿದ್ದು, ಸಾರ್ವಜನಿಕರಿಂದ ಯಾವುದೇ ಸಹಾಯ ದೊರೆಯದ ಕಾರಣ ವ್ಯಕ್ತಿಯೊಬ್ಬ ತನ್ನ ಮೃತ ಪತ್ನಿಯ ಶವವನ್ನು ಮೋಟಾರ್ ಸೈಕಲ್ಗೆ ಕಟ್ಟಿ ಸಾಗಿಸುತ್ತಿದ್ದಾನೆ.ಶವವನ್ನು ಸಾಗಿಸಲು ಯಾವುದೇ ಸಹಾಯ ಸಿಗದ ಕಾರಣ, ಹತಾಶನಾದ ಅಮಿತ್ ತನ್ನ ಪತ್ನಿಯ ಶವವನ್ನು ಬೈಕ್ ಗೆ ಕಟ್ಟಿ ಮಧ್ಯಪ್ರದೇಶದಲ್ಲಿರುವ ತಮ್ಮ ಊರಿಗೆ ಕೊಂಡೊಯ್ಯಲು ನಿರ್ಧರಿಸಿದನು. ಈ ದಂಪತಿಗಳು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯವರಾಗಿದ್ದರೂ, ಕಳೆದ 10 ವರ್ಷಗಳಿಂದ ನಾಗ್ಪುರದ ಕೊರಾಡಿ ಬಳಿಯ ಲೋನಾರಾದಲ್ಲಿ ವಾಸಿಸುತ್ತಿದ್ದರು. …

Read More »

ಬಂಡೀಪುರದಲ್ಲಿ ‘ಸೆಲ್ಪಿ’ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಅಟ್ಟಾಡಿಸಿ ತುಳಿದ `ಕಾಡಾನೆ!

ಬಂಡೀಪುರದಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದಿರುವ ಘಟನೆ ನಡೆದಿದ್ದು, ಸದ್ಯ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ. ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆ ಆನೆ ದಾಳಿ ನಡೆಸಿದೆ. ಕಾಡು ಆನೆಯನ್ನು ಕಂಡ ಆ ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದು ಕಂಡುಬರುತ್ತದೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

Read More »

ತುಮಕೂರು | ಡಿಸಿಸಿ ಬ್ಯಾಂಕ್‌: ಸಚಿವ ರಾಜಣ್ಣ ನಾಮಪತ್ರ ಸಲ್ಲಿಕೆ!

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಚುನಾವಣೆಗೆ ಭಾನುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಶಾಸಕರಾದ ಕೆ.ಷಡಕ್ಷರಿ, ಎಚ್‌.ವಿ.ವೆಂಕಟೇಶ್‌ ಸೇರಿ 15 ಮಂದಿ ನಗರದ ಡಿಸಿಸಿ ಬ್ಯಾಂಕ್‌ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.

Read More »

ಮಾವಾ’ ಘಾಟಿನಲ್ಲಿ ಮುಳುಗಿರುವ ಜಮಖಂಡಿ!

ಒಂದು ಕಾಲಕ್ಕೆ ಜಮಖಂಡಿ ಆಧ್ಯಾತ್ಮ, ಕ್ರೀಡೆ, ಸಾಹಿತ್ಯ, ರಾಜ್ಯವೈಭವ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಸಾಧನೆಗಳನ್ನು ಮಾಡುತ್ತಾ ರಾಜ್ಯದ ಗಮನವನ್ನು ಸೆಳೆಯುತ್ತಿತ್ತು. ಆದರೆ, ಇಂದು ಜಮಖಂಡಿ ‘ಮಾವಾ’ (ಗುಟಕಾದಂತಿರುತ್ತದೆ) ಮಾರಾಟದಿಂದ ಗುರುತಿಸಿಕೊಳ್ಳತೊಡಗಿದೆ.ಜಮಖಂಡಿ ವ್ಯಾಪ್ತಿಯಲ್ಲಿ 2020ರಿಂದ 2025ರವರೆಗೆ ಅಂದಾಜು 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆದರೆ, ಮಾವಾ ಉತ್ಪಾದನೆಯ ಸಂಪೂರ್ಣ ಜಾಲವನ್ನು ಭೇದಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಲವಾರು ಪ್ರಕರಣ ದಾಖಲು ಮಾಡಿ, ಬಿಟ್ಟು ಬಿಡುತ್ತಾರೆ. ಕೆಲ …

Read More »

ಮಾಜಿ ಸಚಿವ ‘ಅರವಿಂದ್ ಲಿಂಬಾವಳಿ’ಗೆ ಮಾತೃ ವಿಯೋಗ.!

ಬಿಜೆಪಿ ಮಾಜಿ ಶಾಸಕ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ತಾಯಿ ಭೀಮಾಬಾಯಿ ಲಿಂಬಾವಳಿ ನಿಧನರಾಗಿದ್ದಾರೆ.ಈ ಕುರಿತು ಅರವಿಂದ್ ಲಿಂಬಾವಳಿ ಪೋಸ್ಟ್ ಹಂಚಿಕೊಂಡಿದ್ದು, ’84 ವರ್ಷದ ನನ್ನ ಮಾತೃಶ್ರೀಯವರಾದ ಶ್ರೀಮತಿ ಭೀಮಾಬಾಯಿ ವೆಂಕಟರಾವ ಲಿಂಬಾವಳಿ ಅವರು ಬಾಗಲಕೋಟೆಯ ನಮ್ಮ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ 4:00 ಗೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇನೆ.

Read More »

4 ದಿಕ್ಕಿನಲ್ಲಿ 18 ಕಡೆ ಶವದ ಭಾಗ ಎಸೆದು ಧರ್ಮಸ್ಥಳ ಯಾತ್ರೆಗೆ ಹೋಗಿದ್ದ ಆರೋಪಿಗಳು ವಶಕ್ಕೆ!

ಮಹಿಳೆಯನ್ನು ಭೀಕರವಾಗಿ ಕೊ*ಲೆ ಮಾಡಿದ ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಮಹಿಳೆಯನ್ನು ಲಕ್ಷ್ಮೀ ದೇವಮ್ಮ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಅಳಿಯ ಡಾ.ರಾಮಚಂದ್ರ ಸೇರಿದಂತೆ ನಾಲ್ವರನ್ನು ಕೊರಟಗೆರೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

Read More »

ಧಾರವಾಡ ಜೆಎಸ್ಎಸ್ ಕಾಲೇಜಿನ ಕಾಂಪೌಂಡಿಗೆ ಡಿಕ್ಕಿ ಹೊಡೆದ BSRTC ಬಸ್!

ವಿದ್ಯ ಗಿರಿಯ ಜೆಎಸ್ಎಸ್ ಕಾಲೇಜಿನ ಕಾಂಪೌಂಡಿಗೆ ಡಿಕ್ಕಿ ಹೊಡೆದ ಬಿ ಆರ್ ಟಿ ಸಿ ಬಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ರಸ್ತೆ ತಡೆ ನಡೆಸುತ್ತಿದ್ದಾರೆ ಬಿ ಆರ್ ಟಿ ಸಿ ಬಸ್ಗಳು ಸಾಲಾಗಿ ತಡೆ ನಿಂತಿವೆ. ವ್ಯವಸ್ಥಾಪಕರು ನಿರ್ದೇಶಕರು ಬಿಎ ಟೆಸ್ಟ್ ಸಿಎ ನಿರ್ದೇಶಕರು ಕೂಡಲೇ ಬಂದು ಪರಿಸ್ಥಿತಿಯನ್ನು ವಿಚಾರಿಸಬೇಕೆಂದು ಪ್ರತಿವರ್ತಿಸುತ್ತಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾಲೇಜ್ ಕಾಂಪೌಂಡ್ ಹಾಳಾಗಿದೆ.

Read More »

ಗೃಹಲಕ್ಷ್ಮೀ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಒಟ್ಟಿಗೆ 2 ಕಂತಿನ 4,000 ರೂ. ಖಾತೆಗೆ ಜಮೆ.!

ರಾಜ್ಯದ ಮಹಿಳೆಯರಿಗೆ ವರಮಮಹಾಲಕ್ಮೀ ಹಬ್ಬದ ಸಂದರ್ಭದಲ್ಲಿ ಸಿಹಿಸುದ್ದಿ ಸಿಕ್ಕಿದ್ದು, ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ ಹಾಗೂ ಆಗಸ್ಟ್ ತಿಂಗಳ 4,000 ರೂ. ಒಟ್ಟಿಗೆ ಜಮೆ ಆಗಲಿದೆ.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.

Read More »

ಮುಸ್ಲಿಂ ಯುವತಿ ಮದುವೆಯಾದವರಿಗೆ 5 ಲಕ್ಷ ರೂ.: ಶಾಸಕ ಯತ್ನಾಳ್ ಘೋಷಣೆ

ಮುಸ್ಲಿಂ ಯುವತಿ ಪ್ರೀತಿಸಿ ಕೊಲೆಯಾದ ಗವಿಸಿದ್ದಪ್ಪ ಅವರ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಈಶ್ವರಪ್ಪ ಭೇಟಿ ನೀಡಿದ್ದಾರೆ.ವಿಜಯಪುರ ಶಾಸಕ ಯತ್ನಾಳ್, ಮುಸ್ಲಿಂ ಯುವತಿ ಮದುವೆಯಾದವರಿಗೆ 5 ಲಕ್ಷ ರೂಪಾಯಿ ಕೊಡಲಾಗುವುದು. ಈ ರೀತಿಯ ಅಭಿಯಾನ ಆರಂಭಿಸುತ್ತೇವೆ. ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಮುಸ್ಲಿಮರಲ್ಲಿದೆ. ರೀಲ್ಸ್ ನಲ್ಲಿ ಮಚ್ಚು ತೋರಿಸಿದ್ದಾನೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಗವಿಸಿದ್ದಪ್ಪ ಪ್ರೀತಿಸಿದ್ದ ಹುಡುಗಿಯನ್ನು ಕೂಡ ಬಂಧಿಸಬೇಕು. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. …

Read More »

ಬೆಂಗಳೂರಿಗೆ ಆಗಮಿಸಿದ `ಪ್ರಧಾನಿ ಮೋದಿ’ ಗೆ ಭರ್ಜರಿ ಸ್ವಾಗತ : ಗಲ್ಲಿ ಗಲ್ಲಿಯಲ್ಲಿ `ಮೋದಿ, ಮೋದಿ ಘೋಷಣೆ

ಪ್ರಧಾನಿ ಮೋದಿ ಅವರು ರಸ್ತೆಯ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹೊರಟಿದ್ದು, ಈ ವಳೆ ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಜನರು ಮೋದಿ ಮೋದಿ ಘೋಷಣೆ ಕೂಗುತ್ತಿದ್ದಾರೆ.ಬೆಂಗಳೂರಿನ ನಮ್ಮ ಮೆಟ್ರೋ `ಹಳದಿ ಮೆಟ್ರೋ’ ಮಾರ್ಗ ಉದ್ಘಾಟನೆ ಹಾಗೂ 3 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇಂದು ಬೆಳಿಗ್ಗೆ 10:55 ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಮೋದಿ ಹೆಲಿಕಾಪ್ಟರ್ ಮೂಲಕ …

Read More »