ನಟ ನಾಗಭೂಷಣ್ ಚಲಾಯಿಸುತ್ತಿದ್ದ ಕಾರು ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆಯೋರ್ವರು ಮೃತಪಟ್ಟಿದ್ದು, ಅವರ ಪತಿಗೆ ಗಂಭೀರ ಗಾಯಗಳಾಗಿದ್ದವು. ಸದ್ಯ ಅವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಮಹಿಳೆಯ ಅಂತ್ಯಕ್ರಿಯೆ ಕೂಡ ಮಾಡಲಾಗಿದೆ. ಈ ನಡುವೆ ನಾಗಭೂಷಣ್ ಮದ್ಯಪಾನಮಾಡಿ ಕಾರು ಚಲಾಯಿಸುತ್ತಿದ್ದರಾ ಎನ್ನುವ ಪ್ರಶ್ನೆ ಮೂಡಿತ್ತು.
ನಿನ್ನೆಯಷ್ಟೇ ಪೊಲೀಸ್ ಅಧಿಕಾರಿಗಳು ನಾಗಭೂಷಣ್ ಅವರು ಮದ್ಯಪಾನ ಸೇವಿಸಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಸಾಕ್ಷಿ ಎನ್ನುವಂತೆ ಬ್ಲಡ್ ರಿಪೋರ್ಟ್ ಕೂಡ ಬಂದಿದ್ದು, ನಾಗಭೂಷಣ್ ಮದ್ಯಪಾನ ಮಾಡಿರಲಿಲ್ಲ ಎಂದು ವರದಿಯಾಗಿದೆ. ನಾಳೆ ಅವರನ್ನು ಹೆಚ್ಚಿನ ವಿಚಾರಣೆಗೆ ಕರೆಯಲಾಗಿದ್ದು, ಈ ಸಂಬಂಧ ನೋಟಿಸ್ ನೀಡಿದ್ದಾರೆ.
ಶನಿವಾರ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರೇಮಾ ಎನ್ನುವ ಮಹಿಳೆ ಸಾವನ್ನಪ್ಪಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪತಿ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ನಾಗಭೂಷಣ್ (Nagbhushan) ಈ ಅಪಘಾತಕ್ಕೆ ಕಾರಣವಾಗಿದ್ದು, ಸದ್ಯ ನಟನನ್ನು ಕುಮಾರಸ್ವಾಮಿ ಪೋಲಿಸರು ಬಂಧಿಸಿದ್ದಾರೆ. ಈ ಘಟನೆಯ ಕುರಿತು ಸ್ವತ ನಾಗಭೂಷಣ್ ಕೂಡ ಪೊಲೀಸರ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





