ನಾಗ್ಪುರದಿಂದ ಒಂದು ಆತಂಕಕಾರಿ ವಿಡಿಯೋ ಹೊರಬಿದ್ದಿದ್ದು, ಸಾರ್ವಜನಿಕರಿಂದ ಯಾವುದೇ ಸಹಾಯ ದೊರೆಯದ ಕಾರಣ ವ್ಯಕ್ತಿಯೊಬ್ಬ ತನ್ನ ಮೃತ ಪತ್ನಿಯ ಶವವನ್ನು ಮೋಟಾರ್ ಸೈಕಲ್ಗೆ ಕಟ್ಟಿ ಸಾಗಿಸುತ್ತಿದ್ದಾನೆ.ಶವವನ್ನು ಸಾಗಿಸಲು ಯಾವುದೇ ಸಹಾಯ ಸಿಗದ ಕಾರಣ, ಹತಾಶನಾದ ಅಮಿತ್ ತನ್ನ ಪತ್ನಿಯ ಶವವನ್ನು ಬೈಕ್ ಗೆ ಕಟ್ಟಿ ಮಧ್ಯಪ್ರದೇಶದಲ್ಲಿರುವ ತಮ್ಮ ಊರಿಗೆ ಕೊಂಡೊಯ್ಯಲು ನಿರ್ಧರಿಸಿದನು. ಈ ದಂಪತಿಗಳು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯವರಾಗಿದ್ದರೂ, ಕಳೆದ 10 ವರ್ಷಗಳಿಂದ ನಾಗ್ಪುರದ ಕೊರಾಡಿ ಬಳಿಯ ಲೋನಾರಾದಲ್ಲಿ ವಾಸಿಸುತ್ತಿದ್ದರು. ರಕ್ಷಾ ಬಂಧನದಂದು ಅಮಿತ್ ಮತ್ತು ಅವರ ಪತ್ನಿ ಭಾನುವಾರ ಲೋನಾರಾದಿಂದ ದಿಯೋಲಾಪರ್ ಮೂಲಕ ಕರಣ್ಪುರಕ್ಕೆ ಮೋಟಾರ್ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

