BigTv News
August 6, 2025
Breaking News
ಜಾಲತಾಣದಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡು ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರೀತಿಸುತ್ತೇನೆಂದು ನಂಬಿಸಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಈ ವೇಳೆ, ಸಂತ್ರಸ್ತ ಬಾಲಕಿ ಈಗ ಗರ್ಭಿಣಿಯಾಗಿದ್ದು, ಈ ಬಗ್ಗೆ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಸ್ಟಾಗಾಂ ಐ.ಡಿ ಮುಖಾಂತರ ಆರೋಪಿಯ ಬೆನ್ನತ್ತಿದ ಪೊಲೀಸರು ತುಮಕೂರು ಮೂಲದ ನರಸಿಂಹಮೂರ್ತಿಯನ್ನು ಪತ್ತೆ ಹಚ್ಚಿ, ದಸ್ತಗಿರಿ ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Read More »
BigTv News
August 6, 2025
Breaking News
ಅಂತರ್ಜಾತಿ ವಿವಾಹ ಆಗಿದ್ದಕ್ಕೆ ವ್ಯಕ್ತಿಯೊಬ್ಬ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ದರ್ಭಾಂಗಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.ಗುಂಡಿನ ದಾಳಿಯ ನಂತರ, ರಾಹುಲ್‌ನ ಸ್ನೇಹಿತರು ಮತ್ತು ಇತರ ಹಾಸ್ಟೆಲ್‌ನವರು ಝಾಗೆ ಥಳಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಪ್ರಾಥಮಿಕ ತನಿಖೆಗಳ ಪ್ರಕಾರ, ಮೃತ ವಿದ್ಯಾರ್ಥಿ ಅದೇ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇದರಿಂದ ಹುಡುಗಿಯ ತಂದೆ ಕೋಪಗೊಂಡು ಕೊಂದಿರುವುದು ಬೆಳಕಿಗೆ ಬಂದಿದೆ ಎಂದು ದರ್ಭಾಂಗದ SSP ಜಗುನಾಥ್ …
Read More »
BigTv News
August 6, 2025
Breaking News
ಮಹಾಂಗ್ವಾ ಕೆವಾಲ್ರಿ ಪ್ರದೇಶದಲ್ಲಿ ವರ್ಷಗಳ ಭೂವೈಜ್ಞಾನಿಕ ಸಮೀಕ್ಷೆಗಳು ಮತ್ತು ಮಣ್ಣಿನ ಪರೀಕ್ಷೆಯ ನಂತರ ಮಾಡಲಾದ ಈ ಆವಿಷ್ಕಾರವು ಭಾರತದ ಖನಿಜ ಪರಿಶೋಧನಾ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.ಪ್ರಾಥಮಿಕ ವರದಿಗಳ ಪ್ರಕಾರ, ಚಿನ್ನದ ನಿಕ್ಷೇಪಗಳು ಸುಮಾರು 100 ಹೆಕ್ಟೇರ್‌ಗಳಲ್ಲಿ ಹರಡಿಕೊಂಡಿವೆ ಮತ್ತು ತಜ್ಞರು ಈ ಪ್ರಮಾಣವು ಲಕ್ಷ ಟನ್‌ಗಳಷ್ಟು ಇರಬಹುದು ಎಂದು ಸೂಚಿಸುತ್ತಾರೆ. ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಇಲಾಖೆಯ ಪ್ರಾದೇಶಿಕ ಕಚೇರಿಯ ನೇತೃತ್ವದ ವ್ಯಾಪಕ ಸಮೀಕ್ಷೆಯಿಂದ ದೃಢೀಕರಣ ಬಂದಿದೆ. ಸ್ಥಳದಿಂದ …
Read More »
BigTv News
August 6, 2025
Breaking News
ಚಲಿಸುತ್ತಿರುವಾಗಲೇ ರೈಲಿನ ಬೋಗಿಗಳು ಬೇರ್ಪಟ್ಟು ಸೇತುವೆ ಮೇಲೆಯೇ ನಿಂತಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ದೊಡ್ಡ ದುರಂತವೊಂದು ತಪ್ಪಿದೆ. ರೈಲು ಸಂಖ್ಯೆ 16205 ತಾಳಗುಪ್ಪದಿಂದ ಮೈಸೂರಿಗೆ ಹೊರಟಿತ್ತು. ರೈಲು ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣ ಬಳಿ ಇರುವ ತುಂಗಾ ಸೇತುವೆ ಮೇಲೆ ಬರುತ್ತಿದ್ದಂತೆ ಏಕಾಏಕಿ 6 ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ.
Read More »
BigTv News
August 6, 2025
Breaking News
ತಂದೆ-ಮಗನ ಜಗಳ ಬಿಡಿಸಲು ಹೋದ ಸಬ್ ಇನ್ಸ್ ಪೆಕ್ಟರ್ ಓರ್ವರನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಗುಡಿಮಂಗಲಮ್ ಜಿಲ್ಲೆಯಲ್ಲಿ ನಡೆದಿದೆ.ಎಂ.ಷಣ್ಮುಗವೇಲು (57) ಕೊಲೆಯಾದ ಸಬ್ ಇನ್ಸ್ ಪೆಕ್ಟರ್. ತಿರುಪ್ಪುರ ಜಿಲ್ಲೆಯ ಗುಡಿಮಂಗಲಂ ಠಾಣೆಯ ಸ್ಪೆಷಲ್ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
Read More »
BigTv News
August 6, 2025
Breaking News
ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ್ದ ದಾಸನ ಪುಂಡಾಭಿಮಾನಿಗಳು ಈಗ ಅಕ್ಷರಶಃ ಪರದಾಡ್ತಾ ಇದ್ದಾರೆ. ಸೈಬರ್ ಪೊಲೀಸರು ಒಂದೊಂದೇ ಅಕೌಂಟ್ಗಳ ಜಾಡು ಹಿಡಿದು ಕೆಡಿ ಫ್ಯಾನ್ಸ್ನ ಅರೆಸ್ಟ್ ಮಾಡ್ತಾ ಇದ್ದಾರೆ.ಇತ್ತೀಚಿಗೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯವರ ಸೋದರಿಗೆ ಒಬ್ಬ ವ್ಯಕ್ತಿ ಅಶ್ಲೀಲ ಸಂದೇಶ ಕಳಿಸ್ತಾ ಇದ್ದು, ಅವನಿಗೆ ಬುದ್ದಿ ಕಲಿಸೋಕೆ ಕಾನೂನು ಮೊರೆ ಹೋಗ್ತಿನಿ ಅಂದಿದ್ದಾರೆ ಪ್ರಜ್ವಲ್. ಸದ್ಯ 4 ಜನ ದಾಸನ ಫ್ಯಾನ್ಸ್ ಅಂದರ್ ಆಗಿದ್ದಾರೆ. ಇನ್ನಷ್ಟು ಜನ …
Read More »
BigTv News
August 6, 2025
Breaking News
ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳ ಮೇಲೆ ಅತ್ಯಾಚಾರ ಎಸಗುತ್ತಿರುವ ಆರೋಪದ ಮೇಲೆ ಕರ್ನಾಟಕದ ವ್ಯಕ್ತಿಯ ವಿರುದ್ಧ ಪುಣೆಯ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .ಆರೋಪಿಯನ್ನು 35 ವರ್ಷದ ಮಲ್ಲಪ್ಪ ಹೊಸಮನಿ ಎಂದು ಗುರುತಿಸಲಾಗಿದ್ದು, ಅವರು ಟಿಂಗ್ರೆ ನಗರದಲ್ಲಿ ಹೆಣ್ಣು ನಾಯಿಯನ್ನು ಟಿನ್ ಶೆಡ್‌ಗೆ ಕರೆದೊಯ್ದು ನಂತರ ಅದರ ಮೇಲೆ ಹಲ್ಲೆ ನಡೆಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
Read More »
BigTv News
August 6, 2025
Breaking News
ಎರಡು ವರ್ಷಗಳಿಂದ ಪತಿ, ಪತ್ನಿ ಇಬ್ಬರೂ ಬೇರ್ಪಟ್ಟಿದ್ದರು. ಇಬ್ಬರ ನಡುವೆ ಗಲಾಟೆ ನಡೆದು, ಆರೋಪಿ ಸುಮನ್ ಮಂಡಲ್ ಮನೆಯಲ್ಲಿದ್ದ ಚಾಕುವಿನಿಂದ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ್ದ. ಬಳಿಕ ಸುಮನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಮಂದಿರ ಮಂಡಲ್ (27) ಕೊಲೆಯಾದ ಮಹಿಳೆ ಹಾಗೂ ಸುಮನ್ ಮಂಡಲ್ (28) ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
Read More »
BigTv News
August 6, 2025
Breaking News
ಬೆಳಗಾವಿಯಲ್ಲಿ ಅಕ್ರಮ ಸಂಬಂಧಕ್ಕೆ ಭೀಕರ ಕೊಲೆ ನಡೆದಿದೆ. ಪ್ರೀತಿಸಿ ಮದುವೆಯಾದವನು ಇದೀಗ ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಗಿದ್ದಾನೆ. ಖಾನಾಪುರ ಪಟ್ಟಣದ ಶನಿ ಮಂದಿರದಲ್ಲಿ ಟೆಕ್ಕಿಯ ಬರ್ಬರ ಹತ್ಯೆ ನಡೆದಿದೆ.ಧಾರವಾಡ ತಾಲೂಕಿನ ತೇಗೂರ ಗ್ರಾಮದ ಸುರೇಶ ಬಂಡಿವಡ್ಡರ (32) ಹತ್ಯೆಯಾಗಿದ್ದಾನೆ.ಖಾನಾಪುರ ಪಟ್ಟಣದ ಗಾಂಧಿನಗರ ನಿವಾಸಿಗಳಾದ ಯಲ್ಲಪ್ಪ ಬಂಡಿವಡ್ಡರ (60), ಈತನ ಪತ್ನಿ ಸಾವಿತ್ರಿ (55) ಪುತ್ರ ಯಶವಂತ (25) ಹತ್ಯೆ ಆರೋಪಿಗಳಾಗಿದ್ದಾರೆ.
Read More »
BigTv News
August 6, 2025
Breaking News
ರಾಣೆಬೆನ್ನೂರಿನ ನಾಡಿಗೇರ್ ಓಣಿಯ ಮನೆಯ ಶೌಚಾಲಯದೊಳಗೆ ಇಂದು ಬೆಳಗ್ಗೆ ಚಿರತೆ ಕಂಡುಬಂತು. ಪಿ.ಟಿ.ಕಾಕಿ ಎಂಬವರ ಮನೆಯ ಶೌಚಾಲಯದಲ್ಲಿ ಚಿರತೆ ಅವಿತು ಕುಳಿತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಸುತ್ತಲೂ ಬಲೆ ಹಾಕಲಾಗಿದೆ. ಬೋನು ಇರಿಸಲಾಗಿದೆ. ಶೀಘ್ರದಲ್ಲೇ ಚಿರತೆಯನ್ನು ಸೆರೆ ಹಿಡಿಯುತ್ತೇವೆ. ಅರಿವಳಿಕೆ ತಜ್ಞರು ಧಾರವಾಡದಿಂದ ಬರುತ್ತಿದ್ದಾರೆ. ಜನರೂ ಸಹಕರಿಸಬೇಕು ಎಂದು ಅವರು ಹೇಳಿದರು.
Read More »