BigTv News
August 9, 2025
Breaking News
ದುಷ್ಕರ್ಮಿಗಳಿಂದ ಹಲ್ಲೆ ಮೃತ ವ್ಯಕ್ತಿಯನ್ನ ವಡ್ಡರಹಳ್ಳಿ ಗ್ರಾಮದ 34 ವರ್ಷದ ಅರುಣ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶುಕ್ರವಾರ ರಾತ್ರಿ ಊರಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಅಂದರೆ ಆಗಸ್ಟ್ 8ರಂದು ಮೃತ ಅರುಣ್ ಸ್ನೇಹಿತ ಸೂರ್ಯ, ಸಹೋದರ ಉಮೇಶ್ ಹಾಗೂ ಸಂಬಂಧಿ ದೇವರಾಜ್ ಜೊತೆಗೆ ಬಾರ್‌ನಲ್ಲಿ ಕುಳಿತು ಕುಡಿಯುತ್ತಿದ್ದ ಸಮಯದಲ್ಲಿ, ಅರುಣ್ ಸ್ನೇಹಿತ ಸೂರ್ಯ …
Read More »
BigTv News
August 9, 2025
Breaking News
ಮಂಗಳೂರಿನ ಸಲೂನ್ ಒಂದರಲ್ಲಿ ಮಸಾಜ್ ದಂಧೆ ನಡೆಸುತ್ತಿದ್ದ ಆರೋಪ ಕೇಳಿಬಂದಿದ್ದು, ಅದೇ ಸಲೂನ್‌ನಲ್ಲಿ ಬ್ಯೂಟೀಶಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ಮಾಲಕಿ ಹಲ್ಲೆ ನಡೆಸಿದ್ದಲ್ಲದೇ ತನ್ನ ಅರೆಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.ನನಗೆ ಮೂರು ವರ್ಷದ ಮಗುವಿದೆ. ಇಂತಹ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆಯ ಯೋಚನೆಯನ್ನೂ ಮಾಡಿದ್ದೆ. ಬಳಿಕ ನಾನು ಈ ವಿಚಾರವನ್ನು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ಗಮನಕ್ಕೆ ತಂದೆ. …
Read More »
BigTv News
August 9, 2025
Breaking News
ಜೆಸಿ ರಸ್ತೆಯಲ್ಲಿ ಹರೀಶ್ ಕುಮಾರ್(38) ಎಂಬಾತನ ಮೇಲೆ ಹಲ್ಲೆ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರನ್ನು ಬಂಧಿಸಿದ ಕಲಾಸಿಪಾಳ್ಯ ಪೊಲೀಸರು ಒಂದು ವಾರದಲ್ಲೇ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಜೆ.ಸಿ ರಸ್ತೆಯಲ್ಲಿ ಆಗಸ್ಟ್ 2 ರಂದು ರಾತ್ರಿ 10.30 ಕ್ಕೆ ನಡೆದ ಹಲ್ಲೆ ಪ್ರಕರಣ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಆಟೋಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಹರೀಶ್ ರಾತ್ರಿ ಹೊತ್ತು ಸ್ನೇಹಿತರ ಜೊತೆಗೆ ನಿಂತು ಮಾತನಾಡುತ್ತಿದ್ದ. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪ್ರಾಪ್ತರು ನೇರವಾಗಿ …
Read More »
BigTv News
August 9, 2025
Breaking News, Crime, ಬಾಗಲಕೋಟೆ
ಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗಳ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿರುವ ಘಟನೆ ಶುಕ್ರವಾರ ಬಾಗಲಕೋಟೆಯಲ್ಲಿ ನಡೆದಿದೆ. ಅಂಜಲಿ ಮುಂಡಾಸ (21) ಮೃತ ದುರ್ದೈವಿ. ಈಕೆ ಸಾಯುವ ಮುನ್ನ ತನಗೆ ಕಿರುಕುಳ ನೀಡಿದಿವರ ಹೆಸರು ಬರೆದಿಟ್ಟು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾಳೆ.ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಕಾರಣರಾದವರು ಈ ಮೂವರು ವ್ಯಕ್ತಿಗಳು. ನನ್ನ ಬದುಕಿನಲ್ಲಿ ಪರಿಣಾಮವನ್ನು ಬೀರಿದ್ದಾರೆ. ಅವರುಗಳೆಂದರೆ ವರ್ಷಾ, ಪ್ರದೀಪ ಮತ್ತು ಇನ್ನಿತರ ಸ್ನೇಹಿತರು. ನನ್ನ ಬಗ್ಗೆ …
Read More »
BigTv News
August 9, 2025
Breaking News
ಭಾರತದಲ್ಲಿ ಎಕ್ಸ್‌ಪ್ರೆಸ್‌ವೇ ಮೂಲಕ ಹೊಸ ಕ್ರಾಂತಿ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ನಿತಿನ್ ಗಡ್ಕರಿ ಹೊಸ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ನಿರ್ಮಾಣದ ಘೋಷಣೆ ಮಾಡಿದ್ದಾರೆ.ಬೆಂಗಳೂರು ಹಾಗೂ ಪುಣೆ ಸಂಪರ್ಕಿಸುವ ಈ ರಸ್ತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಾಣಗೊಳ್ಳಲಿದೆ. ಇದರಿಂದ ಪ್ರಯಾಣ ಸಮಯ ಎರಡು ಪಟ್ಟು ಇಳಿಕೆ ಮಾಡಲಿದೆ. ಈ ರಸ್ತೆ ಮೂಲಕ ಬೆಂಗಳೂರಿನಿಂದ ಪುಣೆಗೆ ಕೇವಲ 5 ಗಂಟೆಯಲ್ಲಿ ಪ್ರಯಾಣ …
Read More »
BigTv News
August 9, 2025
Breaking News
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನೆನ್ನೆ ರಾತ್ರಿ (ಆ.8)ರಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಂದು ಸೇನೆ ತಿಳಿಸಿದೆ. ಇದಕ್ಕೂ ಮೊದಲು ನಡೆದ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.ವೀರ ಯೋಧರಾದ ಕೆ ಪ್ರೀತ್ಪಾಲ್ ಸಿಂಗ್ ಮತ್ತು ರ್ಮಿಂದರ್ ಸಿಂಗ್ ಅವರ ಈ ತ್ಯಾಗಕ್ಕೆ ಅವರನ್ನು ಚಿನಾರ್ ಕಾರ್ಪ್ಸ್ ಗೌರವಿಸುತ್ತದೆ. ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ ಎಂದು ಭಾರತೀಯ ಸೇನೆ …
Read More »
BigTv News
August 9, 2025
Breaking News
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆರಂಭವಾಗಿರುವ ಸಪ್ತರಾತ್ರೋತ್ಸವಕ್ಕೆ ಶನಿವಾರ ತಿರುಪತಿ ತಿರುಮಲ ದೇವಸ್ಥಾನದ ಎಇಒ ರಾಮಕೃಷ್ಣ ಅವರು ಟಿಟಿಡಿಯಿಂದ ಮಂತ್ರಾಲಯಕ್ಕೆ ಶ್ರೀವಾರಿ ವಸ್ತ್ರವನ್ನು ತಂದರು.ಮಠದ ಪ್ರವೇಶದಲ್ಲೇ ಇರುವ ಶ್ರೀ ಮಂಚಲಮ್ಮನಿಗೆ ಸೀರೆ ಅರ್ಪಿಸಿದ ನಂತರ, ಶ್ರೀ ರಾಮಕೃಷ್ಣರು ಗೌರವಯುತವಾಗಿ ಶ್ರೀವಾರಿ ವಸ್ತ್ರವನ್ನು ಶ್ರೀ ಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು. ನಂತರ ಶ್ರೀ ಸ್ವಾಮೀಜಿಯವರು ಭಕ್ತಿಯಿಂದ ಶ್ರೀ ರಾಯರ ಮೂಲ ಬೃಂದಾವನಕ್ಕೆ ವಸ್ತ್ರವನ್ನು ಅರ್ಪಿಸಿ ಆರತಿ ಬೆಳಗಿದರು.
Read More »
BigTv News
August 9, 2025
Breaking News
ಧರ್ಮಸ್ಥಳ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಬಂಧ ಧರ್ಮಸ್ಥಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬುಧವಾರ ನಡೆದ ಯೂಟ್ಯೂಬರ್ ಮತ್ತು ಸುದ್ದಿ ವಾಹಿನಿಯ ಪತ್ರಕರ್ತನ ಮೇಲಿನ ದಾಳಿಗೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ನಾಲ್ಕು ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಮೂರು ಸೇರಿದಂತೆ ಒಟ್ಟು ಏಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
Read More »
BigTv News
August 9, 2025
Breaking News
ಕಳೆದ ಎರಡು ವರ್ಷಗಳಿಂದ ಕಾದು ಕುಳಿತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಹಳೇ ಪಿಂಚಣಿ ಜಾರಿಗೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಗಳು ಫಲ ನೀಡಿದಂತೆ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನ ಈಡೇರಿಸುವುದಾಗಿ ರಾಜ್ಯ ಕಾಂಗ್ರೆಸ್ ಭರವಸೆಯನ್ನ ನೀಡಿತ್ತು.NPS ರದ್ದುಗೊಳಿಸಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಲ್ಲಿ ಒಂದಾಗಿರುವ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಎಂದು ರಾಜ್ಯ ಸರ್ಕಾರ ಮಾತು ಕೊಟ್ಟಿದೆ. ಈ ವಿಚಾರದಲ್ಲಿ ಈಗಾಗಲೇ ಜಾರಿಗೊಳಿಸುವುದಾಗಿ …
Read More »
BigTv News
August 9, 2025
Breaking News
ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ನಂದೀಶ್, ಯುವತಿಯನ್ನು ಹಾಸನದಿಂದ ಕರೆದುಕೊಂಡು ಬಂದು, ಕಂಪ್ಲಿಯಲ್ಲಿ ಒಂದು ದಿನ ತಿರುಗಾಡಿಸಿದ್ದಾನೆ. ಮನೆಯವರಿಂದ ನಂದೀಶ್ ಪೋನ್ ಬಂದ ಕೂಡಲೇ ಯುವತಿಯನ್ನು ಬಿಟ್ಟು ಹೋಗಿದ್ದಾನೆ. ಮನೆಯವರ ಒತ್ತಡಕ್ಕೆ ತುತ್ತಾಗಿ ಬಿಟ್ಟು ಹೋಗಿದ್ದಾನೆ. ಮನೆಯವರ ವಿರೋಧಕ್ಕೆ ಕಾರಣ ಜಾತಿ ಅಡ್ಡಿ ಬಂದಿದೆ. ಯುವತಿ ಭೋವಿ (ಎಸ್ಸಿ) ಸಮಾಜಕ್ಕೆ ಸೇರಿದ್ದರೆ, ನಂದೀಶ್ ಲಿಂಗಾಯತ ಜಂಗಮ ಸಮಾಜಕ್ಕೆ ಸೇರಿದವನು. ಪ್ರೀತಿ ಮಾಡುವಾಗ ಜಾತಿ ಅಡ್ಡಿಯಾಗದಿದ್ದರೂ, ಮದುವೆಯ ವಿಷಯದಲ್ಲಿ ವಿರೋಧ ವ್ಯಕ್ತವಾಗಿದೆ …
Read More »