BigTv News
August 5, 2025
Breaking News
ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಆಗಸ್ಟ್ 5 ರಂದು ಉಡುಪಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆಗಳಲ್ಲಿ ಮಂಗಳವಾರ ವ್ಯತ್ಯಯ ಕಂಡುಬಂತು.ಉಡುಪಿ ಡಿಪೋದಿಂದ ಬಸ್ಸುಗಳು ಹೊರಟಿವೆಯಾದರೂ ಇತರ ಭಾಗದಿಂದ ಉಡುಪಿಗೆ ಬರುವ ಬಸ್ ಗಳಲ್ಲಿ ವ್ಯತ್ಯಯವಾಗಿದೆ.ಸಮಯಕ್ಕೆ ಸರಿಯಾಗಿ ಬಸ್ ಗಳು ಇಲ್ಲದ ಕಾರಣ ವಾಪಾಸು ಹಿಂತಿರುಗಿದ ಘಟನೆ ನಡೆಯಿತು.
Read More »
BigTv News
August 5, 2025
Breaking News
ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಮಂಗಳೂರು ವಿಭಾಗದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.ನಿತ್ಯ ಸಂಚರಿಸುತ್ತಿದ್ದ ಎಲ್ಲ ಬಸ್‌ಗಳು ಇಂದೂ ಸಹ ಸಂಚರಿಸುತ್ತಿವೆ. ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
Read More »
BigTv News
August 5, 2025
Breaking News
ವೇತನ ಹೆಚ್ಚಳ ಹಿಂಬಾಕಿ, ವೇತನ ಪರಿಷ್ಕರಣೆ ಸಂಬಂಧ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರ ಸಂಘಟನೆಗಳು ಮತ್ತು ಸರ್ಕಾರದ ನಡುವೆ ಸೋಮವಾರ ನಡೆದ ಮಾತುಕತೆ ವಿಫಲವಾಗಿದೆ. ‘ನೌಕರರ ಬೇಡಿಕೆಯಂತೆ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ.ಕೇವಲ 14 ತಿಂಗಳ ಹಿಂಬಾಕಿ ನೀಡಲು ಸಿದ್ಧ’ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವುದಾಗಿ ಘೋಷಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿಗಮಗಳ ಆರ್ಥಿಕ ಪರಿಸ್ಥಿತಿ, ವೇತನ …
Read More »
Shaikh BigTv
August 4, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರೋಪಿ ಫೈಯಾಜ್ ಜಾಮೀನು ಅರ್ಜಿ ವಜಾ ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವ ಆದೇಶ.ಮಹಿಳಾ ನ್ಯಾಯಾಧೀಶರಾದ ಪಲ್ಲವಿ ಬಿಆರ್ ರಿಂದ ಆದೇಶ.ಕಳೆದ ಒಂದು ವರ್ಷ,ನಾಲ್ಕು ತಿಂಗಳಿಂದಲ್ಲೂ ಧಾರವಾಡ ಕೇಂದ್ರ ಕಾರಾಗೃಹದಿಲ್ಲಿರುವ ಆರೋಪಿ ಫೈಯಾಜ್.ಇಂದು ವಿಡಿಯೋ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಫೈಯಾಜ್.ಆರೋಪಿ ಪರವಾಗಿ ಬೆಳಗಾವಿಯ ಜೆಡ್ ಎಂ ಹತ್ತರಕಿ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು.ಸಿಐಡಿ ಪರವಾಗಿ ಎಸ್ ಪಿಪಿ ಮಹೇಶ್ ವೈದ್ಯ, ನೇಹಾ ಕುಟುಂಬ …
Read More »
BigTv News
August 4, 2025
Breaking News
ಕೆಆರ್‌ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಗೌರವ ಉಳಿಯಬೇಕಾದರೆ ಕೂಡಲೇ ರಾಜ್ಯದ ಜನತೆ, ನಾಲ್ವಡಿ ಕುಟುಂಬಕ್ಕೆ ಕ್ಷಮಾಪಣೆ ಕೇಳಿ. ಹೀಗೆ ಮಾತನಾಡಿದರೆ ಜನರು ನಿಮ್ಮ ಪಕ್ಷವನ್ನು ಧೂಳೀಪಟ ಮಾಡುತ್ತಾರೆ. ತಕ್ಷಣವೇ ರಾಜಮನೆತನಕ್ಕೆ ಕ್ಷಮೆಯಾಚಿಸಿ ಗೌರವ ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, …
Read More »
BigTv News
August 4, 2025
Breaking News
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಜುಲೈ 25ರ ರಾತ್ರಿ ಮನೋಹರ್ ಲೋಧಿ (45), ಅವರ ತಾಯಿ ಫೂಲ್ರಾಣಿ (70), ಮಗಳು ಶಿವಾನಿ (18) ಮತ್ತು ಅವರ 16 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ ಮನೋಹರ್ ಲೋಧಿಯ ಪತ್ನಿ ದ್ರೌಪದಿ, ಮನೋಹರ್ ಅವರ ಬಾಲ್ಯದ ಸ್ನೇಹಿತನೂ ಆಗಿದ್ದ ಸುರೇಂದ್ರ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ …
Read More »
BigTv News
August 4, 2025
Breaking News
ಮನೆ ಕಟ್ಟಿಸಲು ದಂಪತಿಗಳು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಆಗದೇ ಸಾಲಗಾರರ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಗುಂಡ ನಾಯಕ್ (72) ಲಕ್ಷಮ್ಮ ( 58) ಎಂದು ಗುರುತಿಸಲಾಗಿದೆ. ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »
BigTv News
August 4, 2025
Breaking News
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ 19 ನವಿಲುಗಳು ನಿಗೂಢವಾಗಿ ಮೃತಪಟ್ಟಿದೆ. ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಎಫ್ ಎಸ್ ಎಲ್ ತನಿಖೆಯಿಂದ ಸಾವಿಗೆ ಕಾರಣ ತಿಳಿದು ಬರಲಿದೆ.14 ಹೆಣ್ಣು ನವಿಲುಗಳು ಸೇರಿ 19 ನವಿಲುಗಳ ಮೃತದೇಹ ಪತ್ತೆ ಆಗಿದೆ. ಬೆಳಗ್ಗೆ ರೈತರು ಜಮೀನಿಗೆ ಹೋಗಿದ್ದಾಗ ನವಿಲಿನ ಮೃತದೇಹ ಪತ್ತೆಯಾಗಿದೆ. ಕ್ರಿಮಿನಾಶಕ ಸಿಂಪಡಿಸಿರುವ ಬೆಳೆಗಳನ್ನು ಸೇವಿಸಿ ನವಿಲು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
Read More »
BigTv News
August 4, 2025
Breaking News
ರಸ್ತೆಯಲ್ಲೇ ಕರುವಿನ ಮೇಲೆ ಹಠಾತ್ ಎಗರಿ, ಅದನ್ನು ಕೊಂದು ತಿನ್ನಲು ಯತ್ನಿಸಿದ ಚಿರತೆಯೊಂದನ್ನು ತಾಯಿ ಹಸು ಬೆದರಿಸಿ ಕಾಡಿಗೆ ಅಟ್ಟಿದೆ.ರಾಜಸ್ಥಾನದಲ್ಲಿ ಸಫಾರಿಯಲ್ಲಿದ್ದ ಜನರ ಗುಂಪೊಂದು ಈ ವಿಡಿಯೋವನ್ನು ಸೆರೆ ಹಿಡಿದಿದೆ. ಕರುವಿನ ಕುತ್ತಿಗೆಗೆ ಚಿರತೆ ಬಾಯಿ ಹಾಕಿದ್ದಾಗ ತಾಯಿ ಆಕಳು ಬಂದು ಅದನ್ನು ರಕ್ಷಿಸಿದೆ. ಬಾಲಿ, ಪಾಲಿ ಎಂದು ಈ ವಿಡಿಯೋಗೆ ಟೈಟಲ್ ನೀಡಲಾಗಿದೆ.
Read More »
BigTv News
August 4, 2025
Breaking News
ಕರ್ನಾಟಕದಲ್ಲಿ ಹುಟ್ಟಿದ್ದ ಮಹಾದೇವಿ (ಮಾಧುರಿ) ಆನೆಯನ್ನು ಮೂರು ವರ್ಷವಿರುವಾಗಲೇ ಕೊಲ್ಹಾಪುರದ ಜೈನ ಮಠಕ್ಕೆ ಹಸ್ತಾಂತರಿಸಲಾಗಿತ್ತು. ಹೀಗಾಗಿ ಕಳೆದ ಮೂವತ್ತು ವರ್ಷಗಳಿಂದ ಮಠದಲ್ಲೇ ಇದ್ದ ಆನೆಯೂ ಜಾತ್ರೆಗಳು, ಧಾರ್ಮಿಕ ಉತ್ಸವಗಳ ಭಾಗವಾಗಿಯೇ ಇತ್ತು. ಹೀಗಾಗಿ ಜೈನ ಧರ್ಮಗುರು ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗೂ ಹಾಗೂ ಇಲ್ಲಿನ ಭಕ್ತವೃಂದಕ್ಕೂ ಮಹಾದೇವಿ ಎನ್ನುವ ಆನೆಯೂ ತುಂಬಾನೇ ಆಪ್ತವಾಗಿತ್ತು, ಹೀಗಾಗಿ ಭಾವನಾತ್ಮಕ ಸಂಬಂಧವು ಏರ್ಪಟ್ಟಿತ್ತು. ಹೀಗಾಗಿರುವ ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು, ಇತ್ತ ಮಾನಸಿಕ …
Read More »