Breaking News

Breaking News

ದೆಹಲಿಯಲ್ಲಿ ಕಾಂಗ್ರೆಸ್ ಸಂಸದೆ ಸುಧಾ ಸರ ಕಳ್ಳತನ: ಪ್ರಕರಣ ದಾಖಲು

ರಾಷ್ಟ್ರ ರಾಜಧಾನಿಯ ಚಾಣಕ್ಯಪುರಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಕಾಂಗ್ರೆಸ್ ಸಂಸದೆ ಸುಧಾ ಅವರ ಚಿನ್ನದ ಸರವನ್ನು ಕಸಿದುಕೊಳ್ಳಲಾಗಿದೆ. ಸಂಸದರು ಪ್ರಸ್ತುತ ವಾಸಿಸುತ್ತಿರುವ ತಮಿಳುನಾಡು ಭವನದ ಬಳಿ ಈ ಘಟನೆ ನಡೆದಿದೆ.ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಗುರುತಿಸಲು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅಪರಾಧಿಯನ್ನು ಪತ್ತೆಹಚ್ಚಲು ಅನೇಕ ತಂಡಗಳನ್ನು ರಚಿಸಲಾಗಿದೆ. ಈ ಘಟನೆಯು ರಾಜಧಾನಿಯ ರಾಜತಾಂತ್ರಿಕ ಎನ್ಕ್ಲೇವ್ನಲ್ಲಿನ ಸುರಕ್ಷತಾ ಲೋಪಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

Read More »

ಉದ್ಘಾಟನೆಗೊಂಡು 2 ತಿಂಗಳಲ್ಲೇ ಬಿರುಕುಬಿಟ್ಟ ಪಾಟ್ನಾದ ಡಬಲ್ ಡೆಕ್ಕರ್ ಸೇತುವೆ!

ಪಾಟ್ನಾದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಡಬಲ್ ಡೆಕ್ಕರ್ ಸೇತುವೆ. ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ಉದ್ಘಾಟನೆಗೊಂಡು ಕೇವಲ ಎರಡು ತಿಂಗಳಷ್ಟೇ ಕಳೆದಿದೆ.ಎಎನ್​ಐ ವಿಡಿಯೋವೊಂದನ್ನು ಹಂಚಿಕೊಂಡಿದೆ. ಫ್ಲೈಓವರ್‌ನ ಒಂದು ಭಾಗದಲ್ಲಿ ಹಲವು ಬಿರುಕುಗಳನ್ನು ಕಾಣಬಹುದು.ಬಿಹಾರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಜೂನ್ 11 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು.

Read More »

ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ ಹಾಕಿ ನಿಂದನೆ ಪ್ರಕರಣ : ‘CCB’ ಪೊಲೀಸರಿಂದ ಮತ್ತಿಬ್ಬರ ಬಂಧನ!

ದರ್ಶನ್ ಅಭಿಮಾನಿಗಳು ಎಂದು ಹೇಳಿ ನಟಿ ರಮ್ಯಾ ಗೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದರು. ಈ ಕುರಿತು ನಟಿ ರಮ್ಯಾ ಬೆಂಗಳೂರು ಕಮಿಷನರ್ ಗೆ ದೂರು ನೀಡಿದ್ದರು. ಬಳಿಕ ಕಮಿಷನರ್ ಈ ಒಂದು ಪ್ರಕರಣ ಸಿಸಿಬಿಗೆ ವರ್ಗಾಯಿಸಿದರು.ಈ ವೇಳೆ ಸಿಸಿಬಿ ಪೊಲೀಸರು ಇತ್ತೀಚಿಗೆ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಮತ್ತೆ ಇಬ್ಬರ ಆರೋಪಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Read More »

ಮಸೀದಿ ಎದುರಲ್ಲೇ ಯುವಕನ ಭೀಕರ ಕೊಲೆ!

ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ ನಡೆದಿರುವಂತಹ ಘಟನೆ ಭಾನುವಾರ ರಾತ್ರಿ ಕೊಪ್ಪಳ ನಗರದ ವಾರ್ಡ್​ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್​ ಎಂಬುವನಿಂದ ಗವಿಸಿದ್ದಪ್ಪ ನಾಯಕ್​​ನ ಕೊಲೆ ಮಾಡಲಾಗಿದೆ.ಸದ್ಯ ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

Read More »

ಆಂಧ್ರಪ್ರದೇಶದಲ್ಲಿ ಗ್ರಾನೈಟ್ ಕ್ವಾರಿಯಲ್ಲಿ ಕಲ್ಲು ಕುಸಿದುಬಿದ್ದು 6 ಕಾರ್ಮಿಕರು ದುರ್ಮರಣ!

ಭಾನುವಾರ ಆಂಧ್ರಪ್ರದೇಶದ ಗ್ರಾನೈಟ್ ಕ್ವಾರಿಯಲ್ಲಿ ಬೃಹತ್ ಬಂಡೆಗಳು ಕುಸಿದು ಕನಿಷ್ಠ ಆರು ಕಾರ್ಮಿಕರು ಸಾವನ್ನಪ್ಪಿದ ದುರದೃಷ್ಟಕರ ಘಟನೆ ನಡೆದಿದೆ.ಮೃತರು ಒಡಿಶಾದಿಂದ ವಲಸೆ ಬಂದ ಕಾರ್ಮಿಕರು ಎಂದು ಹೇಳಲಾಗಿದೆ. ಇತರ ಕೆಲವು ಕಾರ್ಮಿಕರು ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.ತೀವ್ರವಾಗಿ ಗಾಯಗೊಂಡ ಎಂಟು ಜನರನ್ನು ನರಸರಾವ್ಪೇಟದ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಕಾರ್ಮಿಕರು ಕರ್ತವ್ಯಕ್ಕೆ ಬಂದಿದ್ದರು, ಮತ್ತು ಕೆಲವು ನಿಮಿಷಗಳ ನಂತರ, ಸ್ಫೋಟ ಕಾರ್ಯಾಚರಣೆಯ ಸಮಯದಲ್ಲಿ ಬಂಡೆಗಳು …

Read More »

ರಾಹುಲ್ ಗಾಂಧಿಗೆ MLC ಛಲವಾದಿ ನಾರಾಯಣಸ್ವಾಮಿ ಪತ್ರ: ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿಯೆಂದು ಆಗ್ರಹ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುಧೀರ್ಘ ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಇತಿಹಾಸವನ್ನು ನೀವು ಮರೆಯಬೇಡಿ. ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ ಎಂಬುದಾಗಿ ಸವಾಲ್ ಹಾಕಿದ್ದಾರೆ.ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ, ದಲಿತರ ಹಣ ಕಳ್ಳತನ ಮಾಡಿರುವುದರ ವಿರುದ್ಧ, ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ವಿರುದ್ಧ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ, ಇನ್ನೂ ಅನೇಕ ವಿಷಯಗಳ ವಿರುದ್ಧ ನಾವು …

Read More »

7 ತಿಂಗಳ ಗರ್ಭಿಣಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ

ಪತಿ ರವಿಶಂಕರ್ ತನ್ನ ಏಳು ತಿಂಗಳ ಗರ್ಭಿಣಿ ಪತ್ನಿ ಸಪ್ನಾಳನ್ನು ಪೊಲೀಸರಿಗೆ ಕರೆ ಮಾಡುವ ಮೊದಲು ಬೀಗ ಹಾಕಿದ ಕೋಣೆಯೊಳಗೆ ಕೊಂದಿದ್ದಾನೆ.ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಪ್ನಾ ಕಳೆದ ಐದು ತಿಂಗಳಿನಿಂದ ಅಮ್ಹೇರಾದಲ್ಲಿರುವ ತನ್ನ ಸಹೋದರಿ ಪಿಂಕಿಯ ಮನೆಯಲ್ಲಿ ವಾಸವಾಗಿದ್ದಳು. ಈ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದ ತನ್ನ ಪತಿ ರವಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆ ಸಹೋದರಿ ಮನೆಗೆ ತೆರಳಿದ್ದರು.

Read More »

ಬಾಲಕಿಯ ಮೇಲೆ ನಿರಂತರ ಗ್ಯಾಂಗ್ ರೇಪ್ – ಮುವರು ಕಾಮುಕರು ಅರೆಸ್ಟ್.!

ಕೊಲಾರದ ವೇಮಗಲ್ ನಲ್ಲಿ ಬಾಲಕಿಯೊಬ್ಬಳ ಮೇಲೆ ನಿರಂತರವಾಗಿ ಪ್ರತ್ಯೇಕವಾಗಿ 6 ಜನ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿ ಪಿಜಿ ಮಾಲೀಕನನ್ನು ಅಶ್ರಫ್ ಎಂದು ಗುರುತಿಸಲಾಗಿದೆ. ಕೇವಲ 10 ದಿನಗಳ ಹಿಂದೆ ಪಿಜಿಗೆ ಸೇರಿಕೊಂಡಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ, ಕಾರಿನಲ್ಲಿ ಕರೆದುಕೊಂಡು ಹೋಗಿ ಆತ ಅತ್ಯಾಚಾರ ಎಸಗಿದ್ದಾನೆ. ಘಟನೆಯ ಕುರಿತು ವಿದ್ಯಾರ್ಥಿನಿ ಸೋಲದೇವನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

Read More »

ಸ್ಪೇನ್‌ನಿಂದ ಏರ್‌ಬಸ್ C-295 ಮಿಲಿಟರಿ ಸಾರಿಗೆ ವಿಮಾನ ಪಡೆದ ಭಾರತ: ರಕ್ಷಣಾ ಸಾಮರ್ಥ್ಯ ಬಲವರ್ಧನೆಯಲ್ಲಿ ಪ್ರಮುಖ ಮೈಲಿಗಲ್ಲು!

ಭಾರತ ತನ್ನ 16 ಏರ್‌ಬಸ್ C-295 ಮಿಲಿಟರಿ ಸಾರಿಗೆ ವಿಮಾನಗಳಲ್ಲಿ ಕೊನೆಯದನ್ನು ಸ್ಪೇನ್‌ನಿಂದ ಶನಿವಾರ ಸ್ವೀಕರಿಸಿದೆ. ಇದು ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲನ್ನು ಗುರುತಿಸಿದೆ ಎಂದು ಸ್ಪೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.ಅಧಿಕಾರಿಗಳೊಂದಿಗೆ ಸೆವಿಲ್ಲೆಯಲ್ಲಿರುವ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಅಸೆಂಬ್ಲಿ ಲೈನ್‌ನಲ್ಲಿ 16 ಏರ್‌ ಬಸ್ ಸಿ-295 ಮಿಲಿಟರಿ ಸಾರಿಗೆ ವಿಮಾನಗಳಲ್ಲಿ ಕೊನೆಯದನ್ನು ಸ್ವೀಕರಿಸಿದರು. ನಿಗದಿತ ಸಮಯಕ್ಕಿಂತ ಎರಡು ತಿಂಗಳ ಮುಂಚಿತವಾದ ವಿತರಣೆಯು ಭಾರತದ ರಕ್ಷಣಾ …

Read More »

ಬೆಳ್ತಂಗಡಿ | ಕೋಮು ವೈಷಮ್ಯ ಸೃಷ್ಟಿಸುವ ಸಂದೇಶ ಹರಡಿದ ಆರೋಪ: ಪ್ರಕರಣ ದಾಖಲು!

ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ, ಕೋಮು ವೈಷಮ್ಯ ಸೃಷ್ಟಿಸುವ ಸಂದೇಶ ಹಾಕಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಉಜಿರೆ ನಿವಾಸಿ ಪುತ್ತುಮೋನು ಎಂಬವರು ಈ ಬಗ್ಗೆ ದೂರು ನೀಡಿದ್ದು ಫೇಸ್ ಬುಕ್ ನ ಕುಲುಮೆ ಎಂಬ ಗ್ರೂಪ್ ನಲ್ಲಿ ಅಯ್ಶುಅಯ್ಶಾ (AyshuAysha) ಎಂಬ ಖಾತೆಯಿಂದ ವಿಭಿನ್ನ ಕೋಮುಗಳ ನಡುವೆ ವೈಷಮ್ಯ ಉಂಟು ಮಾಡುವ ಸುಳ್ಳು ವದಂತಿಗಳಿರುವ ಹಾಕಲಾಗಿದೆ ಎಂದು ದೂರಿದ್ದಾರೆ.

Read More »