ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಸಾವಿರಾರು ಎಕರೆ ಭೂಮಿ ನೀಡುತ್ತಿರುವ ವಿಚಾರವಾಗಿ ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಕಿಡಿಕಾರಿದ್ದಾರೆ. ಈ ಹಿಂದೆ ನಮ್ಮ ನೆಲದ ಮಣ್ಣನ್ನ ಬೇರೆ ಕಡೆ ಕೊಡಬಾರದು ಅಂತ ಸಿದ್ದರಾಮಯ್ಯ, ಕುಮಾರಸ್ವಾಮಿ ಸ್ಟ್ರೈಕ್ ಮಾಡಿದ್ರು. ಆದ್ರೇ ಈಗ ಅವರೇ ಜಿಂದಾಲ್ ಗೆ ಭೂಮಿ ಕೊಟ್ರೆ ಅದು ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತೇ, ಇದರಿಂದ ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದರ ವಿರುದ್ದ ಬಿಜೆಪಿ ಸ್ಟ್ರೈಕ್ ಮಾಡಲಿದೆ ಅದಕ್ಕೆ ನಮ್ಮ ಬೆಂಬಲವಿದೆ ಎಂದರು. ಇನ್ನೂ ಐಎಂಎ ಜ್ಯುವೇಲರಿ ಮಾಲೀಕ ಮನ್ಸೂರಖಾನ್ ವಂಚನೆ ಪ್ರಕರಣ ಕುರಿತು ದೇಶದಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಈ ನೆಲದ ಕಾನೂನು ಕಠಿಣ ಕ್ರಮ ಕೈಗೊಳ್ಳಲಿದೆ. ಸರ್ಕಾರ ಕೂಡ ಕಠಿಣ ತೀರ್ಮಾನಕ್ಕೆ ಮುಂದಾಗಬೇಕು. ಹೊರದೇಶಕ್ಕೆ ಓಡಿ ಹೋದ್ರು ಆಗಲ್ಲ. ವಿದೇಶದಲ್ಲಿ ಆಸ್ತಿಗಳನ್ನು ಜಪ್ತಿ ಮಾಡುವ ಕಾನೂನು ತಂದಿದಿವಿ. ದೇಶಕ್ಕೆ ಹಾನಿಯಾಗುವ ಯಾವುದೇ ಕೆಲಸದ ವಿರುದ್ದ ನರೇಂದ್ರ ಮೋದಿ ಸರ್ಕಾರ ಗಂಭೀರವಾದ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





