Breaking News

ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ:12 ಗಂಟೆಯೊಳಗೆ ಆರೋಪಿಯನ್ನು ಬಂಧಿಸವಲ್ಲಿ ಪೊಲೀಸರು ಯಶಸ್ವಿ.

ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾದ 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ಮಾರುತಿ ನಗರದ ಗಜಾನನ ಪಾಟೀಲ್ (40) ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.

ಆರೋಪಿಯು ಟ್ಯೂಷನ್‌ಗೆ ಹೋಗುತ್ತಿದ್ದ 9 ನೇ ತರಗತಿ ವಿದ್ಯಾರ್ಥಿನಿಯನ್ನು ಎತ್ತಿಕೊಂಡು ಹೋಗಿ ಅಪಹರಿಸಲು ಯತ್ನಿಸಿದ್ದ ಈ ವೇಳೆ ಬಾಲಕಿ ಕಿರುಚಿದ್ದರಿಂದ ಆರೋಪಿ ಓಡಿ ಹೋಗಿದ್ದಾನೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆಯ ಬಗ್ಗೆ ಆತಂಕಿತರಾದ ಹೆತ್ತವರು ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಆತನನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *