Breaking News

Breaking News

ಬಾಲಕಿಯ ಅಪಹರಣ ಕೊಲೆ: ಹನೂರಿನ ಆರೋಗ್ಯಸ್ವಾಮಿಗೆ ಜೀವಾವಧಿ ಶಿಕ್ಷೆ!

ಮದುವೆಯಾಗುವುದಾಗಿ ನಂಬಿಸಿ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್‌ಟಿಎಸ್‌ಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಬಾಲಕಿಯ ಅಪಹರಣ ಹಾಗೂ ಕೊಲೆ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಮನೋಜ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Read More »

ಭೀಮಾ ನದಿಯಲ್ಲಿ ಭಾರೀ ಪ್ರವಾಹ: 2 ದೇಗುಲಗಳು ಸಂಪೂರ್ಣ‌ ಮುಳುಗಡೆ

ಮಹಾರಾಷ್ಟ್ರ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಯಾದಗಿರಿ ನಗರದ ಹೊರ ಭಾಗದಲ್ಲಿ ಹರಿಯುವ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಭೀಮಾ ನದಿ ಮೈದುಂಬಿಕೊಂಡು ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸದ್ಯ ಮುಳುಗಡೆಯಾಗಿರುವ ಕಾರಣ ಭಕ್ತರಿಗೆ ದರ್ಶನ ಭಾಗ್ಯ‌ ಸಿಗುತ್ತಿಲ್ಲ. ಶ್ರಾವಣ ಮಾಸ ಹಿನ್ನಲೆ ನಿತ್ಯ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.ವಡಗೇರ ತಾಲೂಕಿನ ಗುರುಸಣಿ ಬ್ಯಾರೇಜ್ ನಿಂದ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿಯ …

Read More »

ಎಸಿಪಿ ಸ್ಥಾನಕ್ಕೆ ಬಡ್ತಿ ಪಡೆದ ಎರಡೇ ದಿನಕ್ಕೆ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ನಿವೃತ್ತಿ!

ಗ್ಯಾಂಗ್‌ಸ್ಟರ್‌ಗಳಿಗೆ ಎನ್‌ಕೌಂಟರ್‌ ಮೂಲಕವೇ ಬಿಸಿ ಮುಟ್ಟಿಸುತ್ತಿದ್ದ ʼಎನ್‌ಕೌಂಟರ್‌ ಸ್ಪೆಷಲಿಸ್ಟ್‌’ ಎಂದೇ ಖ್ಯಾತಿ ಪಡೆದಿದ್ದ ಕರ್ನಾಟಕ ಮೂಲಕ ಮುಂಬೈನ ಹಿರಿಯ ಪೊಲೀಸ್‌ ಅಧಿಕಾರಿ ಇನ್ಸ್ಪೆಕ್ಟರ್‌ ದಯಾ ನಾಯಕ್ ಇಂದು ಜುಲೈ 31 ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ.ಕರ್ನಾಟಕ ಮೂಲದ ದಯಾ ನಾಯಕ್‌ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯವರು. ಬಾಲ್ಯದಲ್ಲಿ ಬಡತನದ ಹಿನ್ನೆಲೆ ದುಡಿಮೆಗಾಗಿ 1979ರಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದ ಅವರು ಅಲ್ಲಿ ಪ್ಲಂಬರ್‌ ಮತ್ತು ಕ್ಯಾಂಟೀನ್‌ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ತಮ್ಮ ಓದನ್ನು …

Read More »

ಬೆಂಗಳೂರು: ಬಂಗಾಳಿ ವಲಸೆ ಕಾರ್ಮಿಕರಿಗೆ ಪೊಲೀಸರಿಂದ ಕಿರುಕುಳ, ಸುಲಿಗೆ ಆರೋಪ

ಗುರುಗ್ರಾಮ್‌ನಲ್ಲಿ ಬಂಗಾಳಿ ವಲಸೆ ಕಾರ್ಮಿಕರನ್ನು ಬಂಧಿಸಲಾಗುತ್ತಿದೆ ಅಥವಾ ಭಯದಿಂದ ಪಲಾಯನ ಮಾಡುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಬಂಗಾಳಿ ವಲಸೆ ಕಾರ್ಮಿಕರು ಹೆಚ್ಚಾಗಿರುವ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲೂ ವಾತಾವರಣ ದಿನದಿಂದ ದಿನಕ್ಕೆ ಉದ್ವಿಗ್ನವಾಗುತ್ತಿದೆ.ರಾಷ್ಟ್ರ ರಾಜಧಾನಿಯ ಬಳಿ ನಡೆಯುತ್ತಿರುವ ಘಟನೆಗಳು ಅಂತರ್ಜಾಲದ ಮೂಲಕ ಬಹಿರಂಗವಾಗುತ್ತಿದ್ದಂತೆ, ಬೆಂಗಳೂರಿನ ಬಂಗಾಳಿ ವಲಸಿಗರು ಸಹ ತೀವ್ರ ಆತಂಕಗೊಂಡಿದ್ದು, ತಮ್ಮ ಜೀವನೋಪಾಯ ಮುಂದುವರಿಸುವ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರು ಪೊಲೀಸರು ತಮಗೆ ಕಿರುಕಳ ನೀಡುತ್ತಿದ್ದು, ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು …

Read More »

ಧರ್ಮಸ್ಥಳ| ದೂರುದಾರ ಗುರುತಿಸಿದ ಸ್ಥಳದಲ್ಲಿ ಹರಿದ ಕೆಂಪು ಬ್ಲೌಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆ; ಸುಜಾತಾ ಭಟ್ ಪರ ವಕೀಲರು

ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಗುರುತು ಪಡಿಸಿದ ಸ್ಥಳಗಳ ಪೈಕಿ ಮೊದಲನೇ ಗುರುತಿನ ಸ್ಥಳವನ್ನು ಅಗೆಯುವ ವೇಳೆ ಸೈಟ್ ಸಂಖ್ಯೆ 1ರಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಮಹತ್ವದ ಸಾಕ್ಷ್ಯಗಳನ್ನು ಪತ್ತೆ ಹಚ್ಚಿದೆ ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ಅವರು ತಿಳಿಸಿದ್ದಾರೆ.ಇದುವರೆಗೆ ಎಸ್‌ಐಟಿಯು ಪ್ರದರ್ಶಿಸಿರುವ ಗಂಭೀರತೆ, ಶಿಸ್ತು ಮತ್ತು ಕಾರ್ಯದಕ್ಷತೆ ನಮಗೆ …

Read More »

ನಟ ಪ್ರಥಮ್‌ಗೆ ಬೆದರಿಕೆ: ಇಬ್ಬರ ವಿರುದ್ಧ ಎಫ್‌ಐಆರ್‌

ನಟ ಎಂ.ಪ್ರಥಮ್‌ ಅವರಿಗೆ ಬೆದರಿಕೆ ಹಾಕಿದ್ದ ಆರೋಪದಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೇಕರಿ ರಘು ಹಾಗೂ ಯಶಸ್ವಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.ನಟ ದರ್ಶನ್ ಅವರ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಥಮ್‌ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ಪಿಗೆ ಮಂಗಳವಾರ ಲಿಖಿತ ದೂರು ನೀಡಿದ್ದರು. ಆ ದೂರು ಆಧರಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ …

Read More »

ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

ಆಗಸ್ಟ್.3ರಂದು ಲೋಕ ಹಿತಕರ ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಸಾಗರದ ಪುರಪ್ಪೇಮನೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪತಂಜಲಿ.ಕೆ.ವಿ ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ವೆಂಟರಮಣ ಆಚಾರ್ ಶಿಷ್ಯ ಬಳಗದ ಪ್ರಧಾನ ಸಂಚಾಲಕ ಮ.ಸ ನಂಜುಂಡಸ್ವಾಮಿ ತಿಳಿಸಿದ್ದಾರೆ.

Read More »

ಧರ್ಮಸ್ಥಳ ಕೇಸ್’ಗೆ ಬಿಗ್ ಟ್ವಿಸ್ಟ್: ‘ಶವ’ಕ್ಕಾಗಿ ಅಗೆಯುವಾಗ ಮಹತ್ವದ ‘ಕುರುಹು ಪತ್ತೆ’

ಸೈಟ್ ನಂ.1ರಲ್ಲಿ ಪತ್ತೆಯಾದಿರುವಂತ ಎಟಿಎಂ ಕಾರ್ಡ್ ನಲ್ಲಿ ಪುರುಷನ ಹೆಸರು ನಮೂದಾಗಿದ್ದರೇ, ಲಕ್ಷ್ಮೀ ಎಂಬ ಹೆಸರಿನ ಮಹಿಳೆಯ ಪ್ಯಾನ್ ಕಾರ್ಡ್ ಕೂಡ ಪತ್ತೆಯಾಗಿದೆ. ಒಂದು ಬ್ಯಾಗ್ ಕೂಡ ಪತ್ತೆಯಾಗಿರುವ ಬಗ್ಗೆ ಎಸ್‌ಐಟಿಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಸೈಟ್ ನಂ.1ರಲ್ಲಿ ಇಷ್ಟೆಲ್ಲಾ ವಸ್ತುಗಳು ಪತ್ತೆಯಾಗಿರೋದನ್ನು ಎಸ್‌ಐಟಿ ಕೂಡ ದೃಢಪಡಿಸಿದೆ. ಆ ಮೂಲಕ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತೆ, ಮಹತ್ವದ ಸುಳಿವುಗಳು ಸಿಕ್ಕಂತೆ ಆಗಿದೆ.

Read More »

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮುಂದುವರಿದ ಗಲಾಟೆ: ಪಾಲಿಕೆ ಸದಸ್ಯೆ ಅಸ್ವಸ್ತ..!

ಹುಬ್ಬಳ್ಳಿ: ಸಾಮಾನ್ಯ ಸಭೆಯ ವೇಳೆ ಗಲಾಟೆಯಲ್ಲಿ ಪಾಲಿಕೆಯ ಕಾಂಗ್ರೆಸ್ ಸದಸ್ಯೆಯೊಬ್ಬರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಮಾರ್ಷಲ್ ಗಳು ಸದಸ್ಯರನ್ನು ಹೊರ ಹಾಕುತ್ತಿರುವ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಅಸ್ವಸ್ಥಗೊಂಡಿದ್ದಾರೆ. ಹೌದು… ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲ ಅವರನ್ನು ಮಾರ್ಷಲ್ ಗಳು ಹೊತ್ತುಕೊಂಡು ಬರುತ್ತಿರುವ ವೇಳೆಯಲ್ಲಿ ಕೆಳಗೆ ಬಿದ್ದಿರುವ ಸುವರ್ಣ …

Read More »

ಜಮ್ಮು-ಕಾಶ್ಮೀರದಲ್ಲಿ ನದಿಗೆ ಬಿದ್ದ ‘ITBP ‘ ಯೋಧರಿದ್ದ ಬಸ್!

ITBP ‘ ಯೋಧರಿದ್ದ ಬಸ್ ನದಿಗೆ ಬಿದ್ದಿದ್ದು, ಯೋಧರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಬಸ್ ನಲ್ಲಿ ಎಷ್ಟು ಮಂದಿ ಯೋಧರಿದ್ದರು ಎಂಬುದು ತಿಳಿದು ಬಂದಿಲ್ಲಎನ್ನಲಾಗಿದೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್ ಕುಲ್ಲನ್ ಸೇತುವೆಯಿಂದ ಹೊರಬಂದು ಸಿಂಧ್ ನದಿಗೆ ಬಿದ್ದ ನಂತರ, ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ನ ಕುಲ್ಲನ್ ಪ್ರದೇಶದಲ್ಲಿ ಜಂಟಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Read More »