ಗ್ಯಾಂಗ್‌ಸ್ಟರ್‌ಗಳಿಗೆ ಎನ್‌ಕೌಂಟರ್ ಮೂಲಕವೇ ಬಿಸಿ ಮುಟ್ಟಿಸುತ್ತಿದ್ದ ʼಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತಿ ಪಡೆದಿದ್ದ ಕರ್ನಾಟಕ ಮೂಲಕ ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ಇನ್ಸ್ಪೆಕ್ಟರ್ ದಯಾ ನಾಯಕ್ ಇಂದು ಜುಲೈ 31 ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ.ಕರ್ನಾಟಕ ಮೂಲದ ದಯಾ ನಾಯಕ್ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯವರು. ಬಾಲ್ಯದಲ್ಲಿ ಬಡತನದ ಹಿನ್ನೆಲೆ ದುಡಿಮೆಗಾಗಿ 1979ರಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದ ಅವರು ಅಲ್ಲಿ ಪ್ಲಂಬರ್ ಮತ್ತು ಕ್ಯಾಂಟೀನ್‌ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ತಮ್ಮ ಓದನ್ನು ಕೂಡಾ ಮುಂದುವರೆಸಿದ್ದರು. ಪದವಿ ಮುಗಿಸಿದ ಬಳಿಕ ಅವರು 1995ರಲ್ಲಿ ಮಹಾರಾಷ್ಟ್ರ ಪೊಲೀಸ್ ವಿಭಾಗದಲ್ಲಿ ಜುಹು ಪೊಲೀಸ್ ಠಾಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಸೇರಿ, ದಕ್ಷತೆಯಿಂದ ಕತ್ಯವ್ಯ ನಿರ್ವಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

