Breaking News

Breaking News

ಹಾಸನ ಸ್ಥಿತಿ ಹೃದಯ ವಿದ್ರಾವಕ – 21 ವರ್ಷದ ಯುವಕನ ಹೃದಯ ಸ್ತಬ್ಧ!

ಗುರುವಾರ ರಾತ್ರಿ ಮದನ್‌ (21) ಯುವಕ ಬಲಿಯಾಗಿದ್ದಾನೆ. ಮೂಲತಃ ಹಾಸನದ ಚಿಟ್ನಹಳ್ಳಿ ಗ್ರಾಮದ ಈತ ತನ್ನ ತಾಯಿಯೊಡನೆ ಚನ್ನಪಟ್ಟಣದಲ್ಲಿ ವಾಸವಾಗಿದ್ದ. ಹಾಸನದ ಚಿಕ್ಕಕೊಂಡಗುಳದಲ್ಲಿರುವ ತನ್ನ ಭಾವನ ಮನೆಗೆ ಬಂದಿದ್ದಾಗ ಸಾವು ಸಂಭವಿಸಿದೆ.ಈ ಪ್ರಕರಣದಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.

Read More »

ಜಾತಿ ಸಮೀಕ್ಷೆ ವೇಳೆ ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿ ಕಿರಿಕ್ : ‘BBMP’ ಯ ಮೂವರು ಸಿಬ್ಬಂದಿಗಳು ಸಸ್ಪೆಂಡ್.!

ಜಾತಿ ಸಮೀಕ್ಷೆ ವೇಳೆ ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿ, ಸಾರ್ವಜನಿಕರ ಜೊತೆ ಕಿರಿಕ್ ಮಾಡಿದ ಹಿನ್ನೆಲೆ ಮೂವರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.ಬಿಬಿಎಂಪಿಯ ವಿವಿಧ ವಾರ್ಡ್ ನ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.ಜಾತಿಗಣತಿ ವೇಳೆ ಖಾಲಿ ಮನೆಗೂ ಸ್ಟಿಕರ್ ಅಂಟಿಸಿ ಬಿಬಿಎಂಪಿ ಸಿಬ್ಬಂದಿ ಕಳ್ಳಾಟವಾಡಿದ್ದು, ಜನಾಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನ ಕೆಲವು ಮನೆಗಳಲ್ಲಿ ಮನೆಯ ಸದಸ್ಯರನ್ನ ಮಾತನಾಡಿಸದೇ ಅವರ ವಿವರಗಳನ್ನ ಪಡೆಯದೇ ಹಾಗೇ ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. …

Read More »

ಜಮೀನಿಗಾಗಿ ಅತ್ತೆಯನ್ನೇ ಕೊಂದ ಮಹಿಳೆ!

ಪೂಜಾ ತನ್ನ ಪತಿ ಮೃತಪಟ್ಟ ಬಳಿಕ ಅವರ ಇಬ್ಬರು ಸಹೋದರರ ಜತೆ ಅಕ್ರಮ ಸಂಬಂಧದಲ್ಲಿದ್ದಳು. ಜತೆಗೆ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದಳು. ಆಕೆಯ ಜತೆ ಆಕೆಯ ಸಹೋದರಿಯ ಪ್ರಿಯಕರ ಅನಿಲ್ ವರ್ಮಾ ಕೂಡ ಇದ್ದರು. ಕದ್ದ ಆಭರಣಗಳನ್ನು ಸಂಬಂಧಿಕರೊಬ್ಬರಿಗೆ ಮಾರಾಟ ಮಾಡಲು ಅನಿಲ್ ವರ್ಮಾ ತೆರಳುತ್ತಿದ್ದಾಗ ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ವರ್ಮಾ ಪೊಲೀಸರ ಮೇಲೆ ಗುಂಡು ಹಾರಿಸಿದ್ದ, ಹೀಗಾಗಿ ಪೊಲೀಸರು ಕೂಡ ಅತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಝಾನ್ಸಿಯಲ್ಲಿ ನಡೆದ …

Read More »

ಕಂದಗಲ್ಲ: ಭೀಕರ ರಸ್ತೆ ಅಪಘಾತ. ಬೈಕ್ ಸವಾರ ಸ್ಥಳದಲ್ಲೇ ಸಾವು!

ಇಳಕಲ್ಲ ತಾಲೂಕಿನ ಚಿಕ್ಕ ಆದಾಪೂರ ಗ್ರಾಮದ ಹತ್ತಿರ ಇಳಕಲ್ ನತ್ತ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾರದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟ ದುದೈವಿಯನ್ನು ತಾಲೂಕಿನ ಚಿಕ್ಕ ಆದಪೂರ ಗ್ರಾಮದ ಹಾಲಿವಸ್ತಿ ಜಂಬಲದಿನ್ನಿ ರಾಜು ಬಡಿಗೇರ (25) ಎಂದು ಗುರುತಿಸಲಾಗಿದೆ.

Read More »

ಗಾಂಜಾ ಖದೀಮರ ಬೆನ್ನತ್ತಿ ಹೋಗಿದ್ದ ವೇಳೆ ಅಪಘಾತ: ಗಂಭೀರವಾಗಿ ಗಾಯಗೊಂಡಿದ್ದ PSI ಸಾವು!

ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸ್ಥಳ ಮಹಜರುಗಾಗಿ ಕರೆಯುತ್ತಿದ್ದ ವೇಳೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ತಲಘಟ್ಟಪುರ ಪೊಲೀಸ್‌ ಠಾಣೆ ಪಿಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನಪ್ಪಿದ್ದಾರೆ.ಮೆಹಬೂಬ್ ಗುಡ್ಡಹಳ್ಳಿ (40) ಮೃತ ಪೊಲೀಸ್.

Read More »

ಬೆಂಗಳೂರು: ಬೈಕ್ ಗೆ ಗೂಡ್ಸ್ ಲಾರಿ ಡಿಕ್ಕಿ; 19 ವರ್ಷದ ಸವಾರ ಸಾವು!

ದ್ವಿಚಕ್ರ ವಾಹನಕ್ಕೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದು 19 ವರ್ಷದ ಯುವಕ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯಲ್ಲಿ ಬುಧವಾರ ನಡೆದಿದೆ. ಮೃತರನ್ನು ವಿನಯ್ ಬಿ ಎಂದು ಗುರುತಿಸಲಾಗಿದ್ದು, ಪೊಲೀಸರು ಟ್ರಕ್ ಚಾಲಕ ಮಹೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Read More »

ನಿಯಂತ್ರಣ ತಪ್ಪಿ ಬೈಕ್ ಬಸ್ ಗೆ ಡಿಕ್ಕಿ; ಜಿಮ್ ಟ್ರೈನರ್ ಸ್ಥಳದಲ್ಲೇ ಸಾವು!

ರಸ್ತೆ ಅಂಚಿನಲ್ಲಿ ಸಾಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಏಕಾಏಕಿ ಬಸ್ ಗೆ ಢಿಕ್ಕಿ ಹೊಡೆದಿದೆ.ಹೆಲ್ಮೆಟ್ ಹಾಕಿದ್ದರೂ ಅನಂತಭೂಷಣ್ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಅನಂತಭೂಷಣ್ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು.

Read More »

ಹುಬ್ಬಳ್ಳಿ :ಬಸ್‌ಗಳ ನಡುವೆ ಅಪಘಾತ, ಚಾಲಕರಿಗೆ ಹಾರ ಹಾಕಿ ಅವಮಾನ ಮಾಡಿದ ಅಧಿಕಾರಿಗಳು!

ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ ಹುಬ್ಬಳ್ಳಿ ಘಟಕಕ್ಕೆ ಸೇರಿದ ಬಸ್‌ಗಳು ಸರಿಯಾಗಿ ಬ್ರೇಕ್‌ ಹಿಡಿಯದ ಕಾರಣ ಒಂದು ಚಿಗರಿ ಬಸ್‌ ಇನ್ನೊಂದು ಚಿಗರಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಟೋಲ್‌ ನಾಕಾ ಹತ್ತಿರ ಸಣ್ಣ ಅಪಘಾತವಾಗಿದೆ.ಚಾಲಕರನ್ನ ಕಚೇರಿಗೆ ಕರೆಸಿಕೊಂಡಿರುವ ಡಿಸಿ ಸಿದ್ದಲ್ಲಿಂಗೇಶ್‌ ಹಾಗೂ ಡಿಇಎಂ ಪ್ರವೀಣ್‌ ಅವರು ಇಬ್ಬರಿಗೂ ಹಾರ ಹಾಕಿ ಫೋಟೋ ತೆಗೆದಿದ್ದಾರೆ. ಇದಿಷ್ಟೇ ಅಲ್ಲದೇ, ಆ ಫೋಟೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಸಹ ಹಾಕಿದ್ದು, ಇದರಿಂದ ಅವರಿಗೆ ಅವಮಾನವಾಗಿದೆ. …

Read More »

ಬೆಳಗಾವಿ :ಬೈಕ್ ಅಪಘಾತ – ವಚನಾನಂದ ಶ್ರೀಗಳ ಸಹೋದರ ಸಾವು!

ಅಥಣಿ ತಾಲೂಕಿನ ತಾಂವಶಿ ಗ್ರಾಮದಿಂದ ಅಥಣಿಗೆ ಹೋಗುವಾಗ ಭರಮೋಕೋಡಿ ಬಳಿ ನಾಯಿಯೊಂದು ಬೈಕ್ ಗೆ ಅಡ್ಡ ಬಂದಿದೆ.ಬೈಕ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಅಶೋಕ್ ಗಂಭೀರ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

Read More »

ದಾವಣಗೆರೆ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ ಆತ್ಮಹತ್ಯೆ!

ದಾವಣಗೆರೆ ನಗರದ ಸರಸ್ವತಿ ನಗರದ 25 ವರ್ಷದ ಯುವಕ ಶಶಿಕುಮಾರ್ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂಪಾಯಿ ತೊಡಗಿಸಿಕೊಂಡು ಮೋಸ ಹೋಗಿ ಸಾವಿಗೆ ಶರಣಾದವನು.ಸುಮಾರು ಆರು ಪುಟಗಳ ಸುದೀರ್ಫ ಡೆತ್ ನೋಟ್ ಬರೆದಿಟ್ಟಿದ್ದು, ಮುಖ್ಯ ನ್ಯಾಯಾಧೀಶರಿಗೂ ಎರಡು ಪುಟಗಳ ಮನವಿ ಪತ್ರ ಬರೆದಿದ್ದಾನೆ.ಆನ್ ಲೈನ್ ಗೇಮ್ ನಲ್ಲಿ 19 ಕೋಟಿ ರೂಪಾಯಿ ಗೆದ್ದಿದ್ದೇನೆ ಎಂದು ಶಶಿಕುಮಾರ್ ಹೇಳಿಕೊಂಡಿದ್ದಾನೆ. ಆನ್ ಲೈನ್ ಗೇಮ್ ಕಂಪೆನಿ ನೀಡಿಲ್ಲ. ದೂರು ನೀಡಿದ್ದೆ ಎಂದು …

Read More »