Breaking News

Breaking News

ಐಪಿಎಸ್ ಅಧಿಕಾರಿ ರವೀಂದ್ರ ಕಾಶಪ್ಪ ವಿರುದ್ಧ ಅಕ್ರಮವಾಗಿ ಆಸ್ತಿ ಸಂಪಾದನೆ ಆರೋಪ!

ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ರವೀಂದ್ರ ಕಾಶಪ್ಪ ಅವರು ಪ್ರಸ್ತುತ ಬೆಳಗಾವಿ ವಲಯದ ಡಿಸಿಆರ್‌ಇ ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ತಮ್ಮ ಪತ್ನಿ, ಸಂಬಂಧಿಕರು ಹಾಗೂ ಬೇನಾಮಿ ಹೆಸರಿನಲ್ಲಿ ಕೃಷಿ ಜಮೀನು ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂದು ದೂರಲಾಗಿದೆ.ಇವರ ಕುಟುಂಬ ಸದಸ್ಯರು ಸಹಕಾರ ಸಂಘವನ್ನು ಕೂಡ ಆರಂಭಿಸಿ ನಿಯಮ ಬಾಹಿರವಾಗಿ ಸಾಲ ನೀಡಿಕೆ ಹಾಗೂ ಹೂಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ …

Read More »

ಪತ್ನಿಗೆ ಮಂಗಳಸೂತ್ರ ಉಡುಗೊರೆ ನೀಡಿದ 93 ವರ್ಷದ ವೃದ್ಧ..!

ವೃದ್ಧ ದಂಪತಿ ಅಂಗಡಿಯೊಳಗೆ ಹೋದಾಗ, ಆ ವ್ಯಕ್ತಿಯ ಬಳಿ ಕೇವಲ 1,120 ರೂ.ಗಳಿದ್ದವು. ಆ ವ್ಯಕ್ತಿಯ ಬಳಿ ತನ್ನ ಹೆಂಡತಿಗೆ ಮಂಗಳಸೂತ್ರ ಖರೀದಿಸಬೇಕೆಂದು ಹೇಳಿದ್ದ. ಅಂಗಡಿ ಮಾಲೀಕರು ಅವರ ಆಸೆಯಿಂದ ಆಶ್ಚರ್ಯಚಕಿತರಾದರು. ಇದಲ್ಲದೆ, ಆಶೀರ್ವಾದದ ಸಂಕೇತವಾಗಿ ಅವರಿಂದ 20 ರೂ.ಗಳನ್ನು ತೆಗೆದುಕೊಂಡು ಅವರಿಗೆ ಮಂಗಳಸೂತ್ರ ನೀಡಿದರು. ಈ ಘಟನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ವೃದ್ಧ ದಂಪತಿಗಳ ಪ್ರೀತಿಯಿಂದ ಪ್ರಭಾವಿತರಾದ ಅಂಗಡಿ ಮಾಲೀಕರು, ಅವರಿಂದ ಕೇವಲ 20 ರೂಪಾಯಿಗಳನ್ನು ತೆಗೆದುಕೊಂಡು …

Read More »

ತಂದೆಯ ಸಾವಿಗೆ ಸಾಕ್ಷ್ಯ ನುಡಿದ ಮಗ!

ರಾಜಸ್ಥಾನದ ಅಲ್ವಾರ್ನ ಖೇರ್ಲಿ ಪ್ರದೇಶದಲ್ಲಿ ಜೂನ್ 7 ರ ರಾತ್ರಿ ಈ ಕೊಲೆ ನಡೆದಿದ್ದು, ತನ್ನ ಪ್ರಿಯಕರ ಮತ್ತು ಬಾಡಿಗೆ ಹಂತಕರ ಜೊತೆ ಸೇರಿಗೊಂಡು ಪತ್ನಿಯ ಪತಿಯ ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿಯನ್ನ ವೀರು ಅಥವಾ ಮಾನ್ ಸಿಂಗ್ ಜಾತವ್ ಎಂದು ಗುರುತಿಸಲಾಗಿದ್ದು, ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಪ್ರಕರಣದ ತನಿಖೆ ಮಾಡುವಾಗ ವೀರು ಪತ್ನಿ ಅನಿತಾ, ಗಂಡನ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ಹೇಳಿದ್ದರು. ಆದರೆ ಕೇವಲ 48 …

Read More »

ಜಾಲಿಬೆಂಚಿ: ವಿಷ ಸೇವಿಸಿ ರೈತ ಆತ್ಮಹತ್ಯೆ!

ಜಾಲಿಬೆಂಚಿ ಗ್ರಾಮದ ರೈತ ಅಂಬ್ರೇಶ ರಾಚಯ್ಯ ಮಠಪತಿ (44) ಬುಧವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಒಂದು ಎಕರೆ ಜಮೀನು ಇದೆ. ಬ್ಯಾಂಕ್ ಮತ್ತು ಖಾಸಗಿಯವರ ಬಳಿ ₹10 ಲಕ್ಷ ಸಾಲ ಇದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

Read More »

ಹೆದ್ದಾರಿ ವಿಭಜಕಕ್ಕೆ ಕಾರು ಡಿಕ್ಕಿ; ಯುವ ಕಾಂಗ್ರೆಸ್ ಮುಖಂಡ‌ ಸೇರಿ ಇಬ್ಬರ ಸಾವು!!

ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಫೋಕ್ಸ್ ವ್ಯಾಗನ್ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಓಂಶ್ರೀ ಪೂಜಾರಿ ತನ್ನ ನಾಲ್ವರು ಗೆಳೆಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು‌. ಕಾರಿನಲ್ಲಿದ್ದ ಐವರೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಓಂಶ್ರೀ ಪೂಜಾರಿ ಹಾಗೂ ಅಮನ್‌ ರಾವ್ ಆಸ್ಪತ್ರೆ ಗೆ ಕರೆಯೊಯ್ಯುವಷ್ಟರಲ್ಲಿ ಅಸುನೀಗಿದ್ದಾರೆ. ಉಳಿದ ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ …

Read More »

ಬೆಸ್ಕಾಂ ನಿರ್ಲಕ್ಷ್ಯ, ವಿದ್ಯುತ್ ಶಾಕ್ ನಿಂದ ವ್ಯಕ್ತಿ ಸಾವು!

ಬೆಸ್ಕಾಂ ಅಧಿಕಾರಿಗಳಿಂದ ಇದೀಗ ಮತ್ತೊಂದು ಎಡವಟ್ಟು ಸಂಭವಿಸಿದ್ದು, ಪದೇ ಪದೇ ವಿದ್ಯುತ್ ಕೈ ಕೊಟ್ಟಾಗ ಬೆಸ್ಕಾಂ ಸಿಬ್ಬಂದಿಗಳು ಮಾಡಬೇಕಾದ ಅಂತಹ ಕೆಲಸವನ್ನು ಜಯರಾಮ್ ಮಾಡಿದ್ದಾರೆ. ಆದರೆ ಜಯರಾಮ್ ಲೈಟ್ ಕಂಬ ದುರಸ್ತಿ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆ ಸಂಭಂದ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ

Read More »

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಜೋತಿಷಿಯ ಸೆರೆ‌!

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ರಾಜೇಶ್‌ಗೆ ಬೆಳ್ತಂಗಡಿ ನ್ಯಾಯಾಲಯ 2021ರಲ್ಲಿ ಶಿಕ್ಷೆ ವಿಧಿಸಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಜೂ. 16ರಂದು ಧರ್ಮಸ್ಥಳ ಬಳಿ ಬಂಧಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ ಮೂರು ತಿಂಗಳ ನ್ಯಾಯಾಂಗ ಬಂಧನ ಮತ್ತು 1,79,150 ರೂ. ದಂಡ ಪಾವತಿಸುವಂತೆ ಶಿಕ್ಷೆ ವಿಧಿಸಿದ್ದಾರೆ.

Read More »

ಪ್ರಿಯತಮೆಯನ್ನು ಹತ್ಯೆಗೈದ ಪಾಗಲ್ ಪ್ರೇಮಿ!!

ಗೋವಾದಲ್ಲಿ ಮದುವೆಯಾಗಲೆಂದು ಇಬ್ಬರೂ ಬೆಂಗಳೂರಿನಿಂದ ಗೋವಾಕ್ಕೆ ಬಸ್ ನಲ್ಲಿ ತೆರಳಿದ್ದಾರೆ. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಬಳಿಕ ಇಬ್ಬರೂ ಪಿಲಿಯೆಮ್-ಧರ್ಬಂದೋರಾದಲ್ಲಿ ಬಸ್ ನಿಂದ ಇಳಿದಿದ್ದಾರೆ. ಸಂಜಯ್, ರೋಷಿಣಿಯನ್ನು ಕಾಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಚಾಕುವಿನಿಂದ ಆಕೆಯ ಗಂಟಲು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.ಬೆಂಗಳೂರಿನ ರೋಷಿಣಿ ಮೋಸೆಸ್ (22) ಕೊಲೆಯಾದ ಯುವತಿ. ಸಂಜಯ್ ಕೆವಿನ್ (22) ಪ್ರಿಯತಮೆಯನ್ನು ಹತ್ಯೆಗೈದ ಪ್ರಿಯಕರ. ಇಬ್ಬರೂ ಬೆಂಗಳೂರು ನಿವಾಸಿಗಳು.ಆರೋಪಿ ಪತ್ತೆಗಾಗಿ ಬಲೆಬೀಸಿದ ಪೊಲೀಸರು ಹುಬ್ಬಳ್ಳಿಯಲ್ಲಿ …

Read More »

ಗೆಳೆಯನ ಜತೆ OYO ರೂಮ್​​ನಲ್ಲಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪತ್ನಿ!!

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮಹಿಳೆಯೊಬ್ಬರು ಬೃಹತ್ ಗೋಡೆಯಿಂದ ಜಿಗಿಯುತ್ತಿರುವ ಆಘಾತಕಾರಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಪ್ರಿಯಕರನೊಂದಿಗೆ ಬರೌತ್‌ನ OYO ಹೋಟೆಲ್‌ನಲ್ಲಿ ತಂಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆಕೆಯ ಅತ್ತೆ ಮಾವಂದಿರು ಆಕೆಯ ಪತಿ ಮತ್ತು ಪೊಲೀಸರೊಂದಿಗೆ ಹೋಟೆಲ್‌ಗೆ ತಲುಪಿದರು.ಮಹಿಳೆ ತನ್ನ ಪತಿ ಮತ್ತು ಪೊಲೀಸರನ್ನು ಕಂಡ ತಕ್ಷಣ ಭಯಭೀತರಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಸುಮಾರು 12 ಅಡಿ ಎತ್ತರದ ಹೋಟೆಲ್ ಛಾವಣಿಯಿಂದ ಹಾರಿ ಸ್ಥಳದಿಂದ ಓಡಿಹೋದರು ಎಂದು ವರದಿ ಉಲ್ಲೇಖಿಸಿದ್ದಾರೆ.

Read More »

ಪೆಟ್ರೋಲ್​ ಬಂಕ್​ ಸಿಬ್ಬಂದಿ ಎದೆಗೆ ಏಕಾಏಕಿ ರಿವಾಲ್ವರ್ ಇಟ್ಟ ಯುವತಿ!

ಕಾರು ಬಿಲ್‌ಗ್ರಾಮ್ ಪ್ರದೇಶದ ಸಿಎನ್‌ಜಿ ಪೆಟ್ರೋಲ್ ಪಂಪ್‌ನಲ್ಲಿ ನಿಂತಿದೆ. ಆದಾಗ್ಯೂ ಗ್ಯಾಸ್ ತುಂಬಿಸುವಾಗ, ಅಲ್ಲಿನ ಸಿಬ್ಬಂದಿ ಇಶಾನ್‌ಗೆ ಕಾರಿನಿಂದ ಇಳಿಯಲು ನಯವಾಗಿ ಹೇಳಿದ್ದಾರೆ.ಇಷ್ಟಕ್ಕೆ ಕೂಪಿತಗೊಂಡ ಇಶಾನ್​, ನಾನು ಕಾರಿನಿಂದ ಕೆಳಗೆ ಇಳಿಯಬೇಕಾ? ಎಂದು ಸಿಬ್ಬಂದಿ ಜತೆ ಜಗಳವಾಡಿದ್ದಾರೆ. ಅವನ ಹೆಂಡತಿ ಹಾಗೂ ಮಗಳು ಕೂಡ ಕಾರಿನಿಂದ ಹೊರ ಬಂದು ಜಗಳ ಮಾಡಿದ್ದಾರೆ. ಅಷ್ಟರಲ್ಲೇ ಮಗಳು ಸುರುಷ್ ಖಾನ್ (ಅರಿಬಾ) ಕಾರಿನಿಂದ ಇಳಿದು ಏಕಾಏಕಿ ರಿವಾಲ್ವರ್ ಅನ್ನು ಹೊರತೆಗೆದು, ಅಲ್ಲಿದ್ದ ಸಿಬ್ಬಂದಿಯ …

Read More »