ಹುಬ್ಬಳ್ಳಿಯಲ್ಲಿ
ಜನನಿಬಿಡ ಪ್ರದೇಶ ಹಾಗೂಶಾಲಾ ಕಾಲೇಜುಗಳ ಬಳಿ ಯುವತಿಯರು, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಚುಡಾಯಿಸುತ್ತಿದ್ದ ಆರು ಜನ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿನಿಯರು ಹಾಗೂ ಹಳೇ ಬಸ್ ನಿಲ್ದಾಣ ಬಳಿ ಯುವತಿಯರನ್ನು ಚುಡಾಯಿಸುತ್ತಿದ್ದ ಆರು ಜನ ಯುವಕರನ್ನು ಬಂಧಿಸಲಾಗಿದೆ.
ಶಿರಡಿ ನಗರದ ಸಂಜುಕುಮಾರ, ತೋರವಿಹಕ್ಕಲದ ಪ್ರವೀಣ ಜೈನ್, ಶಿರಾಜ್ ಅಹ್ಮದ್, ಶಂಕರ್ ತಲವಾಯಿ, ವಿವೇಕ ಗದಗಿ ಹಾಗೂ ವಿದ್ಯಾ ನಗರದ ಮಂಜುನಾಥ ಶಾಮನೂರ ಬಂಧಿತರು. ಈ ಹಿಂದೆಯೂ ಕೂಡ ನಗರದ ವಿವಿಧ ಕಡೆ ಚೆನ್ನಮ್ಮ ಪಡೆ ಮಹಿಳಾ ಪೊಲೀಸ್ ಪೇದೆಗಳನ್ನು ಮುಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಹಲವು ರೋಡ್ ರೋಮಿಯೋಗಳನ್ನು ಜೈಲಿಗೆ ಅಟ್ಟಿದ್ದರು, ಈಗ ಮತ್ತೆ ವಿವಿಧ ಠಾಣೆಗಳಲ್ಲಿ ಇಂತ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





