Breaking News

Breaking News

ಕೊಪ್ಪಳ :ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು!

ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಬಳಿಯ ತುಂಗಭದ್ರಾ ನದಿಯಲ್ಲಿ ಬಾಲಕರು ಈಜಲು ಹೋಗಿದ್ದಾರೆ.ಈ ವೇಳೆ ನದಿ ನೀರಿನ ಸೆಳೆತ ಹೆಚ್ಚಾದ್ದರಿಂದ ಬಾಲಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ ಈಗಾಗಲೇ ಪವನ್ ಮೃತದೇಹವನ್ನು ಹೊರತೆಗೆದಿದ್ದಾರೆ. ಗೌತಮ್ ಮೃತ ದೇಹಕ್ಕಾಗಿ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.ಗೌತಮ್ (15) ಹಾಗೂ ಪವನ್(14) ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.

Read More »

ಧಾರವಾಡ :ಬೈಕ್‌ ಓಡಿಸುವಾಗ ಹೃದಯಾಘಾತ, ಓರ್ವ ವ್ಯಕ್ತಿ ಸಾವು!

ಧಾರವಾಡ ಬೈಕ್ ಮೆಲೆ ಹೋಗುವಾಗ ವ್ಯಕ್ತಿಯೊಬ್ಬನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಸ್ಥಳಿಯ ಜನರು ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಧಾರವಾಡ ಗ್ರಾಮೀಣ ಪೋಲಿಸರು ಮಾಹಿತಿಯನ್ನ ಪಡೆದುಕೊಂಡು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.

Read More »

ಬೆಳಗಾವಿ :ಪತ್ನಿಯನ್ನು ಕೊಂದು ಅಪಘಾತದಲ್ಲಿ ಸಾವೆಂದು ಕಥೆ ಕಟ್ಟಿದ್ದ ಪತಿ, ಅತ್ತೆ-ಮಾವ ಅರೆಸ್ಟ್!!

ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಹತ್ಯೆಗೈದ ಪತಿ ಮಹಾಶಯ ಬೈಕ್ ಅಪಘಾತದಲ್ಲಿ ಹೆಂಡತಿ ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿದ್ದ. ಈ ಕೃತ್ಯಕ್ಕೆ ಆತನ ತಂದೆ-ತಾಯಿಯೂ ಸಾಥ್ ನೀಡಿದ್ದಾರೆ. ಇದೀಗ ಅಥಣಿ ಪೊಲೀಸರು ಪತಿ, ಅತ್ತೆ-ಮಾವ ಮೂವರನ್ನೂ ಬಂಧಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಸಂತೋಷ್, ಮಾವ ಕಾಮಣ್ಣ ಹಾಗೂ ಅತ್ತೆ ಜಯಶ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರೇಣುಕಾಳನ್ನು ತಾವೇ ಕೊಲೆ ಮಾಡಿ ಕಥೆ ಕಟ್ಟಿದ್ದಾಗಿ ಬಾಯ್ಬಿಟ್ಟಿದ್ದಾರೆ. ಮೂವರನ್ನು ಬಂಧಿಸಿರುವ ಅಥಣಿ ಪೊಲೀಸರು …

Read More »

ಮೈಸೂರು :ಮಾವಿನಕಾಯಿಗಾಗಿ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ!

ಮಾವಿನಕಾಯಿ ಕೊಯ್ಯುವ ವಿಚಾರದಲ್ಲಿ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.ಜಮೀನು ವಿಚಾರದಲ್ಲಿ ವಿವಾದ ಶುರುವಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವೇಳೆ ಮಲ್ಲೇಶ್ ಜಮೀನಿನಲ್ಲಿದ್ದ ಮಾವಿನ ಮರದಿಂದ ಕಾಯಿಗಳನ್ನ ಕೀಳಿಸುವಾಗ ಚೇತನ್ ಕಿರೀಕ್ ತೆಗೆದಿದ್ದಾನೆ.ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಚೇತನ್ ಜೊತೆ ಸರಿತಾ, ಪ್ರವೀಣ, ಪವನ್, ಮಂಜುಳ, ಕರಿಗೌಡ ಸಹ ಸೇರಿ ಗಲಾಟೆ ಮಾಡಿದ್ದಾರೆ. ಈ ವೇಳೆ ಚೇತನ್ …

Read More »

ಶಿವಮೊಗ್ಗ: ಕೊಲೆ ಆರೋಪಿಯ ಮೇಲೆ ಪೊಲೀಸರಿಂದ ಫೈರಿಂಗ್,ಓರ್ವ ಕಾನ್ಸ್ಟೇಬಲ್ ಗೆ ಗಾಯ!

ಕೊಲೆ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಮೇಲೆ ಗುಂಡಿನ ದಾಳಿ ನಡೆಸಿ ಸೆರೆಹಿಡಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹಳೆ ಹೊನ್ನೂರಿನಲ್ಲಿ ನಡೆದಿದೆ.ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಗುಂಡಿನ ದಾಳಿ ನಡೆದಿದೆ. ಬಂಧಿಸಲು ತೆರಳಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಹಿನ್ನೆಲೆಯಲ್ಲಿ ಮಂಜನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಹೊಳೆ ಹೊನ್ನೂರು ಪಿಐಲಕ್ಷ್ಮಿಪತಿ ಆರೋಪಿ ಮಂಜನ ಕಾಲಿಗೆ …

Read More »

ಮಡಿಕೇರಿ :ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!

ವ್ಯಕ್ತಿಯೋರ್ವ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.ಮೂರು ವರ್ಷದ ಮಗಳಿಗೆ ಅನಾರೋಗ್ಯ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಪತ್ನಿ ವಾರದ ಹಿಂದೆ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದರು. ನಿನ್ನೆ ಮಧು ಅವರ ತಾಯಿ ಕೂಡ ಬೆಂಗಳೂರಿಗೆ ಆಗಮಿಸಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಕಂಠಪೂರ್ತಿ ಕುಡಿದು ಡಬಲ್ ಬ್ಯಾರಲ್ ಬಂದೂಕಿನಿಂದ ತನಗೆ ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದಾರೆ.ಘಟನಾ …

Read More »

ಬೆಂಗಳೂರು :ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ!!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ 3 ಕಾರುಗಳು ಮತ್ತು ಒಂದು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿರುವಂತಹ ಘಟನೆ ನಡೆದಿದೆ.ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದಿಂದ ಅರ್ಧ ಕಿಲೋ ಮೀಟರ್​ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

Read More »

ಶಿವಾಜಿನಗರ : ಫುಟ್‌ಪಾತ್‌ ಮೇಲೆ ತಂದೆಯೊಂದಿಗೆ ಮಲಗಿದ್ದ ಮಗು ಅಪಹರಣ!!

ಲೇಡಿ ಕರ್ಜನ್ ಆಸ್ಪತ್ರೆಯ ಹೊರಗಿನ ಫುಟ್‌ಪಾತ್‌ನಲ್ಲಿ ತನ್ನ ತಂದೆಯ ಪಕ್ಕದಲ್ಲಿ ಮಲಗಿದ್ದ ಒಂದು ವರ್ಷ ನಾಲ್ಕು ತಿಂಗಳ ಗಂಡು ಮಗುವನ್ನು ಗುರುವಾರ ಮುಂಜಾನೆ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬಾಲಕನನ್ನು ರಾಜಸ್ಥಾನ ಮೂಲದ ರೋಹಿತ್ ಎಂದು ಗುರುತಿಸಲಾಗಿದೆ. ರೋಹಿತ್‌ನ ತಂದೆ ಮುಖೇಶ್ ತನ್ನ ಪತ್ನಿ ಮತ್ತು ನಾಲ್ಕು ವರ್ಷದ ಮಗಳೊಂದಿಗೆ ನಗರಕ್ಕೆ ಬಂದಿದ್ದರು. ಕುಟುಂಬವು ಶಿವಾಜಿನಗರ ಬಸ್ ನಿಲ್ದಾಣ ಮತ್ತು ಸುತ್ತಮುತ್ತ …

Read More »

ರಾಮನಗರ :ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು!

ಭಾರಿ ಮಳೆಗೆ ಬೆಂಗಳೂರಿನಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನಪ್ಪಿದ್ದಾರೆ.ಜಲಾಶಯ ವೀಕ್ಷಣೆಗೆ ಎಂದು 7 ಯುವತಿಯರು ತೆರಳಿದ್ದಾರೆ. ಓರ್ವ ಯುವತಿ ನೀರಿಗೆ ಬಿದ್ದಿದ್ದ ವೇಳೆ ರಕ್ಷಣೆಗೆ ಉಳಿದ ಸ್ನೇಹಿತೆಯರು ಧಾವಿಸಿದ್ದಾರೆ. ಯುವತಿಯ ರಕ್ಷಣೆಗಾಗಿ 7 ಯುವತಿಯರು ನೀರಿಗೆ ಧುಮುಕಿದ್ದಾರೆ. ಕೂಡಲೇ ಸ್ಥಳೀಯ ಓರ್ವ ಯುವಕ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾನೆ. ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ …

Read More »

ಹುಬ್ಬಳ್ಳಿ: “ವಿದೇಶಿ ಪ್ರಜೆ ಅನುಮಾನಾಸ್ಪದವಾಗಿ ಅಡ್ಡಾಡುತ್ತಿಲ್ಲ”. ಪೊಲೀಸ ಕಮಿಷನರ್ ಎನ್ ಶಶಿಕುಮಾರ್ ಹೇಳಿಕೆ, ಶಾಸಕ ಅರವಿಂದ ಬೆಲ್ಲದ ಪತ್ರದ ಕುರಿತು ಪ್ರತಿಕ್ರಿಯೆ.

ಹುಬ್ಬಳ್ಳಿ ಧಾರವಾಡ ಸ್ಥಳೀಯ ಶಾಸಕರು ಒಂದಿಷ್ಟು ಮಾಹಿತಿ ನೀಡಿದ್ದರು.ಧಾರವಾಡ ಜನ್ನತ್ ನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದರು.ಮಾಹಿತಿ ಬಂದ ತಕ್ಷಣವೇ ನಾವು ಸರ್ಚ್ ಮಾಡಿ ಮಾಹಿತಿ ಕಲೆ‌ ಹಾಕಿದ್ದೇವೆ.ಜನ್ನತ್ ನಗರದ ಬಿಲಾಲ್ ಮಸೀದಿ ಹಾಗು ಆರೋಗ್ಯ ನಗರದ ಯೂಸುಫಿಯಾ ಮಸೀದಿಯಲ್ಲಿ ಹೊರಗಿನವರು ಬಂದಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳು ಸೂರತ್ ಮೂಲದವರು ಅನ್ನೋದ ಪತ್ತೆಯಾಗಿದೆ. ಯಾವುದೇ ವಿದೇಶಿ ಪ್ರಜೆಗಳು ಬಗ್ಗೆ ಮಾಹಿತಿ ಸಿಕ್ಕಿಲ.ಇವರ ಪೂರ್ವಾಪರ ಎಲ್ಲ ಮಾಹಿತಿ ಕಲೆಹಾಕಿದ್ದೇವೆ.ಕೆಲವರು ಮಸೀದಿಯಲ್ಲಿ ತರಬೇತಿ …

Read More »