Breaking News

Breaking News

ದೆಹಲಿ :ಪಾಕಿಸ್ತಾನ ಡ್ರೋನ್‌ ದಾಳಿಗೆ ಬ್ರೇಕ್ ಹಾಕಿದ ಬೆಂಗಳೂರಿಗನ ‘ಆಕಾಶ್’!

ಪಾಕಿಸ್ತಾನದ ಮೇಲೆರಗಿ ಉಗ್ರರ ನೆಲೆಗಳನ್ನು ಆಹುತಿ ಪಡೆಯುತ್ತಿದ್ದರೆ, ಇನ್ನೊಂದೆಡೆ ಪಾಕ್‌ ಕಡೆಯಿಂದ ಹಾರಿ ಬರುತ್ತಿರುವ ಕ್ಷಿಪಣಿಗಳನ್ನು ತಡೆಯುತ್ತಿರುವಲ್ಲಿ, ಸ್ವದೇಶಿ ಆಕಾಶ್‌ ವಾಯು ರಕ್ಷಣಾ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಇದನ್ನು ಬೆಂಗಳೂರು ಮೂಲದ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ.ಪದ್ಮಶ್ರೀ ಪುರಸ್ಕೃತ ಡಾ. ಪ್ರಹ್ಲಾದ್‌ ರಾಮ ರಾವ್‌ ಅವರು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಆಕಾಶ್‌ ಯೋಜನೆಯ ಅತಿ ಕಿರಿಯ ಯೋಜನಾ …

Read More »

ಕಲಬುರಗಿ: ಬಾಲಕಿ ಮೇಲೆ ಅತ್ಯಾಚಾರ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ!

ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದರಿಂದ ತಾಲ್ಲೂಕಿನ ತಾಂಡಾವೊಂದರ ನಿವಾಸಿ ಸೋನು ತಾರಾಸಿಂಗ್ ಜಾಧವ್ (19) ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 30 ಸಾವಿರ ದಂಡ ವಿಧಿಸಿದೆ.ಪಿಎಸ್‌ಐ ರೇಣುಕಾದೇವಿ ಹಾಗೂ ಪಿಐ ಸುಶೀಲಕುಮಾರ್ ಅವರು ಸೋನು ಜಾಧವ್ ವಿರುದ್ಧ ಬಿಎನ್‌ಎಸ್ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ …

Read More »

ಗೌರಿಬಿದನೂರು :ಕೆರೆ ಜಾಗ ಮಾರಾಟಕ್ಕೆ ಯತ್ನ,ಗ್ರಾಮಸ್ಥರ ವಿರೋಧ!

ಗ್ರಾಮದ ಜನರಿಗೆ ಕುಡಿಯುವ ನೀರಿಗಾಗಿ ಸರ್ಕಾರದಿಂದ ಎಂಟು ಕೊಳವೆ ಬಾವಿ ಕೊರೆಸಲಾಗಿದೆ. ಕೆರೆಯ ಕೋಡಿಯನ್ನು ಸಹ ಸರ್ಕಾರದಿಂದಲೇ ನಿರ್ಮಾಣ ಮಾಡಲಾಗಿದೆ. ₹20 ಲಕ್ಷ ನರೇಗಾ ಕಾಮಗಾರಿಯು ನಡೆದಿದೆ. ಇತ್ತೀಚೆಗೆ ಜಲ ಜೀವನ್ ಯೋಜನೆ ಅಡಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಇಷ್ಟ ಸರ್ಕಾರ ಕಾಮಗಾರಿ ನಡೆದಿರುವ ಜಾಗವನ್ನು ಕೆಲವರು ತಮ್ಮದೆಂದು ಮಾರಾಟಕ್ಕೆ ಯತ್ನಿಸಿರುವುದು ಅಪರಾಧ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಾಂತರಾಜು ದೂರಿದರು.ಕೆರೆಯಲ್ಲಿ ಸರ್ವೆ ನಂಬರ್ 22, 23,24,25 ಖಾಸಗಿ ಖಾತೆದಾರರ …

Read More »

ಸಾಗರ :ಪೂಜೆ ನೆಪದಲ್ಲಿ ಬಂಗಾರದ ಆಭರಣ ಕಳ್ಳತನ: ನಕಲಿ ಸ್ವಾಮೀಜಿ ಬಂಧನ!!

ಕಾಯಿಲೆ ವಾಸಿ ಮಾಡುತ್ತೇನೆ ಎಂದು ಹೇಳಿ ಮಹಿಳೆಯ ಮಾಂಗಲ್ಯ ಸರ, ಪುರುಷನ ಉಂಗುರವನ್ನು ಅಪಹರಿಸಿಕೊಂಡು ಹೋಗಿದ್ದ ಕಳ್ಳ ಸ್ವಾಮಿಯೋರ್ವನನ್ನು ಗುರುವಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪೂಜೆ ಮಾಡುವಾಗ ಹಿಟ್ಟಿನ ಗೊಂಬೆಯೊಳಗೆ ಚೈನ್‌ ಮತ್ತು ಉಂಗುರ ಅಡಗಿಸಿ ಇಡಬೇಕು ಎಂದು ಹೇಳಿ ಶೈಲಜಾರ ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಸರ, ವಿನಾಯಕ ಅವರ ಕೈಯಲ್ಲಿದ್ದ 5 ಗ್ರಾಂ. ತೂಕದ ಉಂಗುರವನ್ನು ನಕಲಿ ಸ್ವಾಮಿ ಪಡೆದುಕೊಂಡಿದ್ದ. ಆದರೆ ಪೂಜೆ ಬಳಿಕ ಹಿಟ್ಟಿನ …

Read More »

ಮೂರೂ ಸೇನಾ ಮುಖ್ಯಸ್ಥರ ಜೊತೆಗೆ ಪ್ರಧಾನಿ ಮೋದಿ ಚರ್ಚೆ!

ಪಾಕ್ ಜೊತೆಗಿನ ಸಂಘರ್ಷ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೂರು ಸೇನಾ ಮುಖ್ಯಸ್ಥರನ್ನು ಭೇಟಿಯಾದರು. ಇದೇ ವೇಳೆ ಸೇನಾ ಪಡೆಯ ಮಾಜಿ ಮುಖ್ಯಸ್ಥರು ಮತ್ತು ಸೈನಿಕರ ಜೊತೆಗೆ ಸಂವಾದ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರು ನೌಕಾ ಸೇನೆ, ವಾಯು ಸೇನೆ ಮತ್ತು ಸಶಸ್ತ್ರ ಸೇನೆಯ ಮುಖ್ಯಸ್ಥರನ್ನು ಭೇಟಿಯಾಗಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಅವಲೋಕಿಸಿದರು.ಇನ್ನು ಜಮ್ಮು ಕಾಶ್ಮೀರದಲ್ಲಿ ವಿಮಾನ ಸಂಚಾರ ವ್ಯತ್ಯಯ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಕಾಶ್ಮೀರದ …

Read More »

ದೇಶಾದ್ಯಂತ 32 ವಿಮಾನ ನಿಲ್ದಾಣಗಳು ತಾತ್ಕಾಲಿಕ ಸ್ಥಗಿತ – ಪ್ರಯಾಣಿಕರಿಗೆ ವಾರ್ನಿಂಗ್‌!

ಪಾಕಿಸ್ತಾನ ಹಾಗೂ ಭಾರತದ ನಡುವಿನ ಘರ್ಷಣೆಯಿಂದ ದೇಶದ 32 ಏರ್​ಪೋರ್ಟ್​ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಈ ಮೊದಲು ಹೇಳಿತ್ತು.ಭಾರತ ಹಾಗೂ ಪಾಕಿಸ್ತಾನ ನಡುವಿನ ಘರ್ಷಣೆ ಮತ್ತಷ್ಟು ತೀವ್ರಗೊಂಡಿದ್ದು, ಉದ್ವಿಗ್ನತೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಏರ್​ಪೋರ್ಟ್​ಗಳನ್ನು ಬಂದ್ ಮಾಡಲಾಗಿದೆ.ಚಂಡೀಗಢ, ಶ್ರೀನಗರ, ಲೂದಿಯಾನ, ಅಮೃತಸರ, ಪಟಿಯಾಲಾ,ಶಿಮ್ಲ, ಧರ್ಮಶಾಲಾ ಸೇರಿದಂತೆ 32ಕ್ಕೂ ಹೆಚ್ಚು ಏರ್ಪೋರ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ವಿಮಾನ ಪ್ರಯಾಣ ಮಾಡುವಂತಹ ಪ್ರಯಾಣಿಕರು 3 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಬರುವಂತೆ ಈಗಾಗಲೇ ಸೂಚಿಸಲಾಗಿದೆ. ದೇಶದ್ಯಾಂತ …

Read More »

ಶ್ರೀನಗರ ಬಳಿ ಪಾಕಿಸ್ತಾನದ 2 ಫೈಟರ್ ಜೆಟ್ ಹೊಡೆದುರುಳಿಸಿದ ಭಾರತ!!

ಪಾಕಿಸ್ತಾನದ 2 ಜೆಟ್‌ಗಳನ್ನು ಶನಿವಾರ ಹೊಡೆದುರುಳಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಮೂಲಗಳ ಪ್ರಕಾರ, 2 ಪಾಕಿಸ್ತಾನಿ ಜೆಟ್‌ಗಳ ಪೈಕಿ ಒಂದನ್ನು ಶ್ರೀನಗರದ ಲಾಸ್ಜನ್ ಬಳಿ ಹೊಡೆದುರುಳಿಸಲಾಗಿದೆ ಮತ್ತು ಇನ್ನೊಂದನ್ನು ಉತ್ತರ ಕಾಶ್ಮೀರದಲ್ಲಿ ಹೊಡೆದುರುಳಿಸಲಾಗಿದೆ.ಘಟನೆಯ ಬಗ್ಗೆ ರಕ್ಷಣಾ ಇಲಾಖೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಭಾರತೀಯ ಸೇನೆ ಹೊಡೆದುರುಳಿಸಿರುವುದು F-16 ಜೆಟ್‌ಗಳು ಎಂದು ವರದಿಯಾಗಿದೆ. ಏತನ್ಮಧ್ಯೆ, ಉಭಯ ರಾಷ್ಟ್ರಗಳ ವಾಯುಪಡೆಗಳ ನಡುವಣ ದಾಳಿ, …

Read More »

ಬೆಂಗಳೂರು: ಬಂಧಿತ ಆರೋಪಿಗಳಿಗೆ ಬೆದರಿಸಿ ಹಣ ವಸೂಲಿ ಆರೋಪ, ಮೂವರು ಪೊಲೀಸರು ವಶಕ್ಕೆ!

ಚಿಕ್ಕಜಾಲ ಠಾಣೆಯ ಇಬ್ಬರು ಹೆಡ್‍ಕಾನ್‍ಸ್ಟೇಬಲ್ ಹಾಗೂ ಒಬ್ಬರು ಕಾನ್‍ಸ್ಟೇಬಲ್ ಸೇರಿ ಮೂವರನ್ನು ವಶಕ್ಕೆ ಪಡೆದಿರುವ ಬಾಗಲೂರು ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿರುವುದಾಗಿ ತಿಳಿದುಬಂದಿದೆ.ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ದ್ವಿಗುಣಗೊಳಿಸುವ ದಂಧೆಗೆ ಸಂಬಂಧಪಟ್ಟಂತೆ ಖಚಿತ ಮಾಹಿತಿ ಪಡೆದು ಪ್ರತಿಷ್ಠಿತ ಹೋಟೆಲ್‍ವೊಂದಕ್ಕೆ ದಾಳಿ ನಡೆಸಿದ ಚಿಕ್ಕಜಾಲ ಠಾಣೆಯ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ, ಅನಂತರ ಅವರನ್ನು ಬೆದರಿಸಿ ಆರು ಲಕ್ಷ ರೂ. ಪಡೆದುಕೊಂಡು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ …

Read More »

ನೆಲ್ಯಾಡಿ: ಚಾಕುವಿನಿಂದ ಇರಿದು ಯುವಕನ ಕೊಲೆ!!

ಚಾಕುವಿನಿಂದ ಇರಿದು ಯುವಕನೋರ್ವನನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ.ಮನೆಯ ಅಂಗಳದಲ್ಲಿ ಶರತ್ ನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದ್ದು, ಕೌಟುಂಬಿಕ ಕಲಹ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ.

Read More »

ಬೆಂಗಳೂರು : ತಾಜ್ ಹೋಟೆಲ್‌ನಲ್ಲಿ ಕಳ್ಳತನ!!

ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ನುಗ್ಗಿದ ಕಳ್ಳ ಅಡುಗೆ ಮನೆಯಲ್ಲಿ ಲ್ಯಾಪ್‌ಟಾಪ್ ಮತ್ತು ಮೇಕಪ್ ಕಿಟ್‌ನ್ನು ಕದ್ದು ಪರಾರಿಯಾಗಿದ್ದಾನೆ.ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ಸೆಕ್ಯೂರಿಟಿ ವ್ಯವಸ್ಥಾಪಕ ತಿಮ್ಮೇಗೌಡ, ಈ ಕುರಿತು ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಈಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೇ 4ರ ಬೆಳಗ್ಗೆ 8.15ರಲ್ಲಿ ಅಪರಿಚಿತ ವ್ಯಕ್ತಿ, ಹೋಟೆಲ್‌ನ ಮುಖ್ಯದ್ವಾರದಿಂದ ಒಳ ಪ್ರವೇಶ ಮಾಡಿ ಕೇಟರಿಂಗ್ ಸೇಲ್ಸ್ ವಿಭಾಗಕ್ಕೆ ಹೋಗಿ …

Read More »