Breaking News

Breaking News

ಗೌಹಾಟಿ :3 ಕೋಟಿ ಮೌಲ್ಯದ ಡ್ರಗ್ಸ್ ಹೊಂದಿದ್ದ ಪೆಡ್ಲರ್ ಬಂಧನ!!

ಅಸ್ಸಾ ನ ಕಚಾರ್ ಜಿಲ್ಲೆಯಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳೊಂದಿಗೆ ಶಂಕಿತ ಪೆಡ್ಲರ್ ನನ್ನು ಬಂಧಿಸಲಾಗಿದೆ. ಡ್ರಗ್ಸ್ ಪೆಡ್ಲ‌ರ್ ಬಂಧನವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ಸಿಲ್ದುಬಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದರು.ಪ್ರಮುಖ ಮಾದಕವಸ್ತು ದಾಳಿ 3 ಕೋಟಿ ರೂ.ಗಳ ಮೌಲ್ಯದ 10,000 ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿದೆ. ಒಬ್ಬ ಪೆಡ್ಲರ್ ನನ್ನು ಬಂಧಿಸಲಾಗಿದೆ ಎಂದು ಶರ್ಮಾ ಎಕ್ಸ್ ನಲ್ಲಿ …

Read More »

ಕಲಬುರಗಿ :ಕಾರು ಅಪಘಾತ, ಮಗು ಸೇರಿ ಮೂವರು ದುರ್ಮರಣ!!

ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿರುವ ಹೈದ್ರಾ ದರ್ಗಾದಲ್ಲಿ ಆಯಿಷಾ ಸಂಬಂಧಿಕರ ಮಗುವಿನ ಕೇಶ ಮುಂಡನ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಬೀದಿನಾಯಿಯನ್ನು ಉಳಿಸಲು ಹೋಗಿ ಕಾರು ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಅಫಜಲಪುರ ತಾಲೂಕಿನ ಗೊಬ್ಬೂರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಮೃತರನ್ನು ಕಲಬುರಗಿಯ ಮಿಲ್ಲತ್‌ ನಗರದ ನಿವಾಸಿಗಳಾದ ಆಯಿಷಾ ಅಜ್ಮೇರಾ ಹಾಗೂ ಜೈನಬ್‌ ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ದೇವಲ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ …

Read More »

ಬೆಂಗಳೂರು :ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಎನ್‌ಎಂಸಿಗೆ ಸಚಿವರ ಆಗ್ರಹ…

ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ ಒಂದು ಲಕ್ಷ ವೈದ್ಯಕೀಯ ಸೀಟುಗಳು ಮಾತ್ರ ಲಭ್ಯವಿದೆ. ಇದರಿಂದ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಹೇಳಿದರು.ಅಸಮಾನತೆಯನ್ನು ತಕ್ಷಣ ನಿವಾರಿಸಬೇಕು. ಭಾರತೀಯ ವೈದ್ಯರಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ. ಜಾಗತಿಕವಾಗಿ ಭಾರತೀಯ ವೈದ್ಯಕೀಯ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಮತ್ತು ಲಭ್ಯತೆಯ ಅಂತರ ಕಡಿಮೆ ಮಾಡಲು ಎನ್‌ಎಂಸಿ ಮಧ್ಯಪ್ರವೇಶಿಸಬೇಕು ಎಂದರು.ಮುಖ್ಯಮಂತ್ರಿಗಳು …

Read More »

ಗಂಗೊಳ್ಳಿ: ಅನಾಮದೇಯ ಮೃತದೇಹ ಪತ್ತೆ!!

ಹೊಸಾಡು ಗ್ರಾಮದ ಹೋಲಿ ಕ್ರಾಸ್‌ ಬಳಿಯ ತ್ರಾಸಿ ಚರ್ಚ್‌ ಕ್ರೈಸ್ತ ಕಿಂಗ್‌ಗೆ ಸಂಬಂಧಿಸಿದ ಜಾಗದ ಒಳಗೆ ಅಪರಿಚಿತ ಗಂಡಸಿನ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. 50ರಿಂದ 55 ವರ್ಷದ ಮೃತನು ಯಾವುದೋ ಕಾಯಿಲೆಯಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತ ಪಟ್ಟಿರಬಹುದೆಂದು ಭಾವಿಸಲಾಗಿದೆ. ಪ್ರಕರಣ ದಾಖಲಾಗಿದೆ.

Read More »

ಕುಂದಾಪುರ :ಮನೆಯೊಳಗೆ ನುಗ್ಗಿ ಹಲ್ಲೆ, ಕೊಲೆಗೆ ಯತ್ನ,ಕೊಲ್ಲುತ್ತೇವೆ ಎಂದು ಬೆದರಿಕೆ!!!

ಬಸ್ರೂರು ಗ್ರಾಮದ ಕೊಳ್ಕೆರೆ ಸುರೇಂದ್ರ ಅವರು ಮನೆಯಲ್ಲಿದ್ದಾಗ, ವನಜಾ, ರಾಜ, ರಕ್ಷತ ಅವರು ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಹಿಗ್ಗಾ ಮುಗ್ಗಾ ಥಳಿಸಿ ಕೊಲ್ಲಬೇಕು ಎಂದು ಪಂಚಾಯತ್‌ ಸದಸ್ಯ ನಾಗರಾಜ್‌ ಹೇಳಿದ ಕಾರಣ, ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇವೆ ಎಂದವರು ಬೆದರಿಕೆ ಹಾಕಿದ್ದಾರೆ.ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬುಕ್ಕಾಪಟ್ಟಣ: ಪಾನಿಪುರಿ ತಿಂದು 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ.!

ಬುಕ್ಕಾಪಟ್ಟಣದ ಪಾನಿಪೂರಿ ಅಂಗಡಿಯೊಂದರಲ್ಲಿ ಪಾನಿಪುರಿ ತಿಂದ 25ಕ್ಕೂ ಹೆಚ್ಚು ಮಂದಿಗೆ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿಕೊಂಡಿದೆ. ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.ಜಿಲ್ಲಾ ಆಹಾರ ಗುಣಮಟ್ಟ ಸುರಕ್ಷತೆ ಅಧಿಕಾರಿ ಚಂದ್ರಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕನನ್ನು ಕರೆಸಿ ನೋಟಿಸ್ ನೀಡಿದ್ದಾರೆ.ಹಿಂದೆ ಒಂದು ಬಾರಿ ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿ ನೋಟಿಸ್ ನೀಡಿದ್ದರೂ ಈತ ಸ್ವಚ್ಛತೆ ಹಾಗೂ …

Read More »

ಕುಂದಾಪುರ : ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಸಾವು.!!

ಅರುಣ್‌ ಅವರು ಸಂಬಂಧಿ ಸುಧಾಕರ ಅವರನ್ನು ಸಹ ಸವಾರರನ್ನಾಗಿ ಕರೆದುಕೊಂಡು ಬೀಜಾಡಿಗೆ ಬಂದು, ವಾಪಸ್‌ ಕೋಟೇಶ್ವರದ ಕಡೆಗೆ ಸಂಚರಿಸುತ್ತಿದ್ದ ವೇಳೆ ಕೋಟೇಶ್ವರದ ನಾಗಬನ ಬಳಿಯ ರಸ್ತೆಯಲ್ಲಿ ನಿಯಂತ್ರಣ ತಪ್ಪಿ, ಬೈಕ್‌ ಸ್ಕಿಡ್‌ ಆಗಿ ಬಿದ್ದಿದ್ದಾರೆ. ಪರಿಣಾಮ ಎದೆ, ಕಾಲಿಗೆ ಗಂಭೀರ ಗಾಯಗೊಂಡ ಅರುಣ್‌ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗ್ಗೆ 8.45 ರ ಸುಮಾರಿಗೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ಸಹ ಸವಾರ ಸುಧಾಕರ ಗಾಯಗೊಂಡಿದ್ದು, ಚಿಕಿತ್ಸೆ …

Read More »

ಮಣಿಪಾಲ :ವಿದ್ಯುತ್ ಕಂಬಕ್ಕೆ ಸ್ಕೂಟರ್ ಢಿಕ್ಕಿ, ಸಹಸವಾರ ಮೃತ್ಯು!

ಮಣಿಪಾಲ ಕಡೆಯಿಂದ ಹಿರೇಬೆಟ್ಟು ಕಡೆಗೆ ಹೋಗುತ್ತಿದ್ದ ಸ್ಕೂಟರ್, ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ಇಬ್ಬರು ಸವಾರರು ರಸ್ತೆಗೆ ಬಿದ್ದು ಗಾಯ ಗೊಂಡರು. ಇವರ ಪೈಕಿ ಗಂಭೀರವಾಗಿ ಗಾಯಗೊಂಡ ಅಬೂಬಕ್ಕರ್ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರನ್ನು ಸಹಸವಾರ ಪರ್ಕಳ ನಿವಾಸಿ ಅಬೂಬಕ್ಕರ್ ಎಂದು ಗುರುತಿಸ ಲಾಗಿದೆ.

Read More »

ಬೈಕ್‌ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ, ಸವಾರ ದುರ್ಮರಣ!!

ದ್ವಿಚಕ್ರ ವಾಹನದಲ್ಲಿ ಹೊರವರ್ತುಲ ರಸ್ತೆಯ ಕೂಲಿನಗರ ಸೇತುವೆ ಬಳಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆಯ ಎಡಭಾಗದ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸವಾರ ನಿತಿನ್‌ ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಹೃದಯ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು …

Read More »

CM ಸಿದ್ದರಾಮಯ್ಯ ಎದುರು ಉಗ್ರರ ಕ್ರೌರ್ಯ ಬಿಚ್ಚಿಟ್ಟ ಭರತ್ ಭೂಷಣ್ ಪತ್ನಿ.!

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಮಗು ಇದೆ ಅಂದ್ರೂ ಶೂಟ್ ಮಾಡಿದ್ರು , ಕೈ ಮುಗಿದು ಕೇಳಿದರೂ ಬಿಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಎದುರು ಭರತ್ ಭೂಷಣ್ ಪತ್ನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಉಗ್ರರು ತನ್ನ ಪತಿಯ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ನಾನು ತಲೆ ಎತ್ತಲಿಲ್ಲ. ನನ್ನ 3 ವರ್ಷದ ಮಗುವನ್ನು ಉಳಿಸಿಕೊಳ್ಳಬೇಕಾಗಿದ್ದರಿಂದ ನಾನು ಓಡಿದೆ. ಅಲ್ಲಿ ಹೆಣ್ಣದ ರಾಶಿ ಬಿದ್ದಿತ್ತು. ಕೊನೆಗೆ …

Read More »