Breaking News

Breaking News

ಜಲಾಶಯದ ನೀರಿನಲ್ಲಿ ಈಜಲು ಹೋದ ಯುವಕ ಸಾವು!!!

ಕಾಮಗರೆ ಸಮೀಪ ಗುಂಡಾಲ್ ಜಲಾಶಯದಲ್ಲಿ ಯುವಕನೋರ್ವ ನೀರಿನಲ್ಲಿ ಈಜಲು ಹೋಗಿ ಮುಳುಗಿ ಸಾವನಪ್ಪಿರುವ ಘಟನೆ ಜರುಗಿದೆ.ಯುವಕನೋರ್ವ ಮುಳುಗಿರುವ ಬಗ್ಗೆ ಗಮನಿಸಿದ ಸ್ಥಳೀಯರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ದಡದಲ್ಲಿದ್ದ ಬಟ್ಟೆ ಫೋನ್ ಮುಖಾಂತರ ಆತನ ವಿಳಾಸ ಪತ್ತೆ ಮಾಡಿ ಆತನ ಪೋಷಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.ಹನೂರು ತಾಲೂಕಿನ ಬಿ. ಗುಂಡಾಪುರ ಗ್ರಾಮದ ಶಿವಯ್ಯ ಎಂಬುವರ ಪುತ್ರ ಮಲ್ಲೇಶ್ ಗುಂಡಾಲ್ ಜಲಾಶಯದಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

Read More »

ಗರ್ಭ ಧರಿಸಿದ್ದ ಹಸು ಕಡಿದು ಮಾಂಸ ಕದ್ದ ಆರೋಪಿ ಅರೆಸ್ಟ್!!

ಇಬ್ರಾಹಿಂ ಮಹಮದ್ ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕುಕನೀರ್ ನದಿ ದಂಡೆಯ ಮೇಲೆ ಹಸು ಕಡಿದು ಗೋವಿನ ಹೊಟ್ಟೆಯೊಳಗೆ ಇದ್ದ ಕರುವನ್ನು ಚೀಲದಲ್ಲಿ ಸುತ್ತಿ ಬಿಸಾಡಲಾಗಿತ್ತು.ಗರ್ಭ ಧರಿಸಿದ್ದ ಹಸು ಕೊಂದು ಮಾಂಸ ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Read More »

ಬೃಹತ್‌ ಜಾಹೀರಾತು ಫಲಕ ನೆಲಕ್ಕೆ ಉರುಳಿದ ಪರಿಣಾಮ, ನಾಲ್ವರಿಗೆ ಗಾಯ!

ಸರ್ಜಾಪುರ ಬೆಂಗಳೂರು ರಸ್ತೆಯ ಉದ್ದಕ್ಕೂ ಖಾಸಗಿ ನಿವೇಶನ ಮತ್ತು ಕಟ್ಟಡಗಳ ಮೇಲೆ ಅನಧಿಕೃತವಾದ ಜಾಹೀರಾತು ಫಲಕಗಳು ನೂರಾರು ಸಂಖ್ಯೆಯಲ್ಲಿ ಇದ್ದು, ಇವು ಜನರ ಜೀವಗಳಿಗೆ ಕಂಟಕವಾಗಿದೆ.ಇಂದು ಧರೆಗುರುಳಿದ ಜಾಹೀರಾತು ನಾಮಫಲಕವು ಹಿಂಬದಿಗೆ ಬಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಂದು ವೇಳೆ ಮುಂಭಾಗಕ್ಕೆ ಉರುಳಿದ್ದರೆ ರಸ್ತೆಯಲ್ಲಿ ಹಾದು ಹೋಗುವ ವಾಹನ ಸವಾರರ ಮೇಲೆ ಬೀಳುವ ಸಾಧ್ಯತೆಗಳಿತ್ತು. ಹಿಂಭಾಗ ಬಿದ್ದ ಪರಿಣಾಮವಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಈಗಾಗಲೇ ಸರ್ಜಾಪುರ ಬೆಂಗಳೂರು ಮುಖ್ಯ ರಸ್ತೆಯಲ್ಲಿ …

Read More »

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಅಪಘಾತ: ನಿಂತಿದ್ದ ವಿಮಾನಕ್ಕೆ ಗುದ್ದಿದ ಟಿಟಿ ವಾಹನ!!

ಡ್ರೈವರ್ ನಿದ್ರೆಯ ಮಂಪರಿನಲ್ಲಿದ್ದ ಕಾರಣ, ತನ್ನ ನಿಯಂತ್ರಣ ತಪ್ಪಿ, ನಿಂತಿದ್ದ ಇಂಡಿಗೋ ಏರ್‌ಲೈನ್ಸ್‌ನ A320 ವಿಮಾನದ ಕೆಳಭಾಗಕ್ಕೆ ಗುದ್ದಿದೆ. ಡಿಕ್ಕಿ ಹೊಡೆದ ತಕ್ಷಣ ಚಾಲಕ ಎಚ್ಚೆತ್ತುಕೊಂಡಿದ್ದು, ತಕ್ಷಣವೇ ವಾಹನವನ್ನು ನಿಲ್ಲಿಸಿದ್ದಾನೆ.ಟೆಂಪೋ ಟ್ರಾವೆಲರ್‌ಗಳನ್ನು ಸಾಮಾನ್ಯವಾಗಿ ಏರ್‌ಪೋರ್ಟ್ ಸಿಬ್ಬಂದಿಯನ್ನು ಅವರ ಕಚೇರಿ ಮತ್ತು ವಿಮಾನಗಳ ಬಳಿ ಇರುವ ಸೇವಾ ಪ್ರದೇಶಗಳಿಗೆ ಡ್ರಾಪ್ ಹಾಗೂ ಪಿಕ್‌ಅಪ್ ಮಾಡಲು ಬಳಸಲಾಗುತ್ತದೆ. ಘಟನೆಯಲ್ಲಿ ಯಾವುದೇ ಸಿಬ್ಬಂದಿ ಅಥವಾ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಹಾನಿಯಾಗಿಲ್ಲ. ವಿಮಾನಕ್ಕೆ ಸ್ವಲ್ಪ …

Read More »

ಚಾಲಕನ ನಿಯಂತ್ರಣ ತಪ್ಪಿ ಬೇಕರಿಗೆ ನುಗ್ಗಿದ BMTC ಬಸ್!!

ಚಾಲಕನ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್ ಏಕಾಏಕಿ ಬೇಕರಿಗೆ ನುಗ್ಗಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.ಆನೇಕಲ್ ನ ಜಿಗಣಿ ಬಳಿ ಈ ಘಟನೆ ನಡೆದಿದೆ. ಏಕಾಏಕಿ ಬಸ್ ಬೇಕರಿಗೆ ನುಗ್ಗಿದೆ. ಬೇಕರಿಯಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ತಾಲೂಕನ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆಂಗಳೂರು: ಚಾಕುವಿನಿಂದ ಇರಿದು ಮಗನಿಂದಲೇ ತಂದೆಯ ಬರ್ಬರ ಹತ್ಯೆ.!

ವಿವೇಕಾನಗರದ ಬಸ್ ನಿಲ್ದಾಣ ಹಿಂಭಾಗ ತಡರಾತ್ರಿ ಘಟನೆ ನಡೆದಿದೆ.ಮಗನಿಂದಲೇ ನಿವೃತ್ತ ಯೋಧತಂದೆ ಕೊಲೆಯಾಗಿದೆ. ಮನೆಯಲ್ಲಿ ಸ್ಟ್ರಿಕ್ಟ್ ಮಾಡುತ್ತಿದ್ದರು ಎಂಬ ಕಾರಣಕ್ಕೆ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ವಿವೇಕನಗರ ಪೊಲೀಸರು ಆರೋಪಿ ಬೋಲು ಅರಬ್ ನನ್ನು ಬಂಧಿಸಿದ್ದಾರೆ.ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Read More »

ವಾಯು ವಿಹಾರಕ್ಕೆ ಹೋಗಿದ್ದ ನಗರಸಭೆ ಮಾಜಿ ಸದಸ್ಯನ ಬರ್ಬರ ಹತ್ಯೆ!!

ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಚಾಕು ಇರಿಯಲಾಗಿದ್ದು, ತಕ್ಷಣ ಸತೀಶ್​ರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದ ಎಸ್.ಪಿ ಎಂ ನಾರಾಯಣ್ , ಕೊಲೆಯಾದ ವ್ಯಕ್ತಿ ಒಬ್ಬ ರೌಡಿ ಶೀಟರ್ ಆಗಿದ್ದ. ಮಾಜಿ ನಗರಸಭಾ ಸದಸ್ಯ ಕೂಡ ಹೌದು. ಈತನ …

Read More »

ಲಿವಿಂಗ್ ಟುಗೆದರ್ ಗೆ ಮನೆಯವರ ವಿರೋಧ:ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ.!

ಕಲಬುರಗಿಯ ನಾಗನಹಳ್ಳಿ ಬಳಿ ರೈಲಿ ಸಿಲುಕಿ ಶಿವಕುಮಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ತಾಲೂಕಿನ ಕುಮಸಿ ಗ್ರಾಮದ ಯುವಕ ಶಿವಕುಮಾರ್ ಆತ್ಮಹತ್ಯೆಗೂ ಮುನ್ನ ಲಿವಿಂಗ್ ಟುಗೆದರ್ ನಲ್ಲಿದ್ದ ಮಹಿಳೆಗೆ ಕರೆ ಮಾಡಿದ್ದ. ಈ ವೇಳೆ ರಕ್ಷಣೆಗೆ ಮುಮದಾಗಿ ಮಹಿಳೆಗೂ ಗಾಯ. ಗಾಯಾಳು ಮಹಿಳೆಗೆ ಕಲಬರುಗಿ ಜೇಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೈಕ್ ಮೇಲೆ ಕಂಟೇನರ್​ ಬಿದ್ದು ತಂದೆ-ಮಗಳು ಸ್ಥಳದಲ್ಲೇ ಸಾವು!!

ಚಿಕ್ಕಬಳ್ಳಾಪುರ ತಾಲೂಕಿ ಲಿಂಗಶೆಟ್ಟಪುರ ಗೇಟ್ ಬಳಿಯ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಬೈಕ್ ಬರುತ್ತಿತ್ತು. ಬೈಕ್​ ಪಕ್ಕದಲ್ಲಿ ಕಂಟೇನರ್ ಸಹ ಬರುತ್ತಿತ್ತು. ಆದರೆ, ಲಿಂಗಶೆಟ್ಟಪುರ ಗೇಟ್ ಬಳಿ ಈಶಾ ಪೌಂಡೇಷನ್ ಕಡೆಯಿಂದ ಬಂದ ಕಾರೊಂದು ರಭಸವಾಗಿ ಹೆದ್ದಾರಿಗೆ ಬಂದಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಂಟೇನರ್ ಚಾಲಕ ಸಡನ್​ ಆಗಿ ಬ್ರೇಕ್ ತುಳಿದು, ಕಂಟೇನರ್ ಅನ್ನು ಎಡಕ್ಕೆ ಎಳೆದಿದ್ದಾರೆ. ಕಂಟೇನರ್ ಪಕ್ಕದಲ್ಲೇ ಚಲಿಸುತ್ತಿದ್ದ ಬೈಕ್ ಸವಾರರ …

Read More »

ಮುಂಬೈ : ವಧುವಿನ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ವರ!

ಸುರೇಶ್ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದರೆ ಮಾತ್ರ ಮದುವೆಯಾಗುವುದಾಗಿ ಹರೇರಾಮ್ ಮೋಹಿನಿಯನ್ನು ಹೇಳಿದಾಗ, ಅವಳು ನಿರಾಕರಿಸಿದಳು ಮತ್ತು ಅವನ ಮತ್ತು ಅವನ ಕುಟುಂಬದ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಹರೇರಾಮ್ ಗೆ ಬೆದರಿಕೆ ಹಾಕಿದಳು ಎಂದು ಆರೋಪಿಸಲಾಗಿದೆ.ಈ ನಿರಂತರ ಕಿರುಕುಳವು ಸಾಮಾಜಿಕ ಅವಮಾನದ ಬಗ್ಗೆ ಚಿಂತಿತರಾಗಿದ್ದ ಹರೇರಾಮ್ ಮಾನಸಿಕ ಯಾತನೆಯನ್ನು ಅನುಭವಿಸಲು ಕಾರಣವಾಯಿತು, ಇದು ಅಂತಿಮವಾಗಿ ಆತ್ಮಹತ್ಯೆಗೆ ಕಾರಣವಾಯಿತು.ಹರೇರಾಮ್ ಅವರ ನಿವಾಸದ ಹೊರಗೆ 3-4 ದಿನಗಳ ಹಳೆಯ ಹಾಲಿನ ಚೀಲಗಳನ್ನು ನೆರೆಹೊರೆಯವರು …

Read More »