Breaking News

ಬೃಹತ್‌ ಜಾಹೀರಾತು ಫಲಕ ನೆಲಕ್ಕೆ ಉರುಳಿದ ಪರಿಣಾಮ, ನಾಲ್ವರಿಗೆ ಗಾಯ!

ಸರ್ಜಾಪುರ ಬೆಂಗಳೂರು ರಸ್ತೆಯ ಉದ್ದಕ್ಕೂ ಖಾಸಗಿ ನಿವೇಶನ ಮತ್ತು ಕಟ್ಟಡಗಳ ಮೇಲೆ ಅನಧಿಕೃತವಾದ ಜಾಹೀರಾತು ಫಲಕಗಳು ನೂರಾರು ಸಂಖ್ಯೆಯಲ್ಲಿ ಇದ್ದು, ಇವು ಜನರ ಜೀವಗಳಿಗೆ ಕಂಟಕವಾಗಿದೆ.ಇಂದು ಧರೆಗುರುಳಿದ ಜಾಹೀರಾತು ನಾಮಫಲಕವು ಹಿಂಬದಿಗೆ ಬಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಂದು ವೇಳೆ ಮುಂಭಾಗಕ್ಕೆ ಉರುಳಿದ್ದರೆ ರಸ್ತೆಯಲ್ಲಿ ಹಾದು ಹೋಗುವ ವಾಹನ ಸವಾರರ ಮೇಲೆ ಬೀಳುವ ಸಾಧ್ಯತೆಗಳಿತ್ತು. ಹಿಂಭಾಗ ಬಿದ್ದ ಪರಿಣಾಮವಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಈಗಾಗಲೇ ಸರ್ಜಾಪುರ ಬೆಂಗಳೂರು ಮುಖ್ಯ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬೃಹತ್ ಗಾತ್ರದ ಜಾಹೀರಾತು ಫಲಕಗಳನ್ನು ಅಳವಾಡಿಸಿದ್ದು, ಸರ್ಜಾಪುರದ ಬಾಬಯ್ ಟಿಫನ್ ಹೊಟೇಲ್ ಮತ್ತು ಡಿಮಾರ್ಟ್ ಪಕ್ಕದಲ್ಲಿ ಅತ್ಯಂತ ದೊಡ್ಡಗಾತ್ರದಲ್ಲಿ ಜಾಹೀರಾತು ಫಲಕವನ್ನು ಅಳವಾಡಿಸಿದ್ದಾರೆ. ಒಂದು ವೇಳೆ ಈ ಎರಡು ನಾಮಫಲಕಗಳು ಧರೆಗುರುಳಿದರೆ ಸಾವು ನೋವುಗಳು ಸಂಭವಿಸಬಹುದಾಗಿದೆ. ಹೀಗಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *