BigTv News
March 30, 2025
Breaking News, ಬಾಗಲಕೋಟೆ
ಮಹಾಲಿಂಗಪುರ-ಮುಧೋಳ್ ಮಾರ್ಗದ ಮಳಲಿ ಬಳಿ ಅಪಘಾತದ ನಡೆದಿದೆ. ಮುಗಳಖೋಡದಿಂದ ಮಳಲಿ ಕಡೆಗೆ ಬೈಕ್‌ನಲ್ಲಿ ದಂಪತಿ ಹೊರಟಿದ್ದರು. ಇದೇ ವೇಳೆ ಕೊಲ್ಹಾಪುರದಿಂದ ಯಾದಗಿರಿ ಕಡೆಗೆ ಬಸ್ ಹೊಗುತ್ತಿತ್ತು. ಈ ವೇಳೆ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಇನ್ನು ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ವಾಗತ ಕಮಾನು ನೆಲಕ್ಕುರುಳಿದ್ದು, ಬಸ್‌ನಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿಕ್ಕೋಡಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿದ್ದು, ಸ್ಥಳಕ್ಕೆ ಮುಧೋಳ್ ಪೊಲೀಸರು ಭೇಟಿ ನೀಡಿ …
Read More »
BigTv News
March 30, 2025
Breaking News, Crime, ಬೆಂಗಳೂರು
ತಂದೆಯ ಜತೆ ಬಾಲಕ ಬೈಕ್‌ನಲ್ಲಿ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ನಗರದ ಥಣಿಸಂದ್ರ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದೆ. ಅಪ್ಪನ ಜತೆ ಬೈಕ್‌ನಲ್ಲಿ ಐಮಾನ್ ತೆರಳುತ್ತಿದ್ದಾಗ ಬಿಬಿಎಂಪಿಯ ಕಸದ ಲಾರಿ ಡಿಕ್ಕಿ ಹೊಡೆದಿದ್ದು, ಇದರಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
March 30, 2025
Breaking News, Crime, ಬೀದರ್
ನಿರಗೂಡಿ ಗ್ರಾಮದಲ್ಲಿ ಪ್ರಶಾಂತ್ ಹಾಗೂ ಯುವತಿ ಸಹೋದರರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಪ್ರಶಾಂತ್ ತಲೆ ಮೇಲೆ ಯುವತಿಯ ಸಹೋದರರು ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ಸ್ಥಳಕ್ಕೆ ಡಿವೈಎಸ್‌ಪಿ ನ್ಯಾಮೇಗೌಡ, ಸಿಪಿಐ ಅಲಿಸಾಬ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
March 30, 2025
Breaking News, ಕರ್ನಾಟಕ
ಅಮವಾಸ್ಯೆ ಪೂಜೆಗೆಂದು ಬೈಕ್ ನಲ್ಲಿ ಜಮೀನಿಗೆ ತೆರಳಿದ್ದ ದಂಪತಿ ಮರಳಿ ತಮ್ಮ ಸ್ವಗ್ರಾಮಕ್ಕೆ ತೆರಳುವಾಗ ರಸ್ತೆ ದಾಟುತ್ತಿರುವಾಗ ಈಚಲಕರಂಜಿಯಿಂದ ಯಾದಗಿರಿಗೆ ತೆರಳುತ್ತಿದ್ದ ಚಿಕ್ಕೋಡಿಗೆ ಘಟಕಕ್ಕೆ ಸೇರಿದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಶಂಕರಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶ್ರೀದೇವಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Read More »
BigTv News
March 28, 2025
Breaking News, ರಾಜಕೀಯ ಸುದ್ದಿ, ವಿಜಯಪುರ
ಯತ್ನಾಳ್ ಉಚ್ಚಾನೆಯಿಂದ ಮನನೊಂದಿದ್ದ ಸಂತೋಷ್ ತಟಗಾರ ನಿನ್ನೆಯಷ್ಟೇ ರಾಜೀನಾಮೆಯ ಕುರಿತು ಮಾತನಾಡಿದ್ದರು. ಇಂದು ಕಾರು ಮರಕ್ಕೆ ಗುದ್ದಿ ಸಾವಿಗೀಡಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಈ ಸುದ್ದಿ ತಿಳಿದು ತಮ್ಮ ಎಕ್ಸ್ ಖಾತೆಯಲ್ಲಿ ಶ್ರದ್ಧಾಂಜಲಿ ತಿಳಿಸಿ, ಅವರ ಕುಟುಂಬದ ಜೊತೆ ನಿಲ್ಲುವುದಾಗಿ ಬರೆದುಕೊಂಡಿದ್ದಾರೆ.ಇಂದು ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ ಬೆಂಬಲಿಗರು, ಅಭಿಮಾನಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Read More »
BigTv News
March 28, 2025
Breaking News, ರಾಯಚೂರು
ಹೌದು ಪ್ರಾಣಿ ಪ್ರಿಯರೇ ಎಚ್ಚರ ಕೊರೋನ ವೈರಸ್ಹ,ಹಕ್ಕಿ ಜ್ವರ ಹೀಗೆ ಅನೇಕ ರೋಗಗಳ ನಡುವೆ, ಇದೀಗ ಹೊಸ ವೈರಸ್ ಪತ್ತೆ.! ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಇದೀಗ ಮಾರಣಾಂತಕ “ಎಫ್‌ಪಿವಿ” ವೈರಸ್ ಬೆಕ್ಕುಗಳಲ್ಲಿ ಕಂಡು ಬಂದಿದೆ. ಇದೀಗ ನೂರಕ್ಕೂ ಹೆಚ್ಚು ಬೆಕ್ಕುಗಳು ವೈರಸ್‌ಗೆ ಬಲಿಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
Read More »
BigTv News
March 28, 2025
Breaking News
ಜಮ್ಮು ಕಾಶ್ಮೀರದ ಸಾಂಬಾದಲ್ಲಿರುವ ಸೇನಾ ವಸತಿ ಗೃಹದಲ್ಲಿ ದಂಪತಿ ದಂಪತಿ ವಿಷ ಸೇವಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ಮಂಗಳವಾರ ರಿನ್ಷಾ ನಿಧನರಾಗಿದ್ದು, ನಿನ್ನೆಯಷ್ಟೇ ಅವರ ಅಂತ್ಯಸಂಸ್ಕಾರವನ್ನು ಕೇರಳದ ಇರಂಬುನ್ಕುಡುವಿನಲ್ಲಿ ನಡೆಸಲಾಗಿತ್ತು. ಆದರೆ ಪತ್ನಿಯ ಅಂತ್ಯಸಂಸ್ಕಾರ ನಡೆದ ಸ್ವಲ್ಪ ಹೊತ್ತಿನಲ್ಲೇ ಪತಿ ನಿಧೀಶ್ ಕೂಡ ಗುರುವಾರ ಸಾವನ್ನಪ್ಪಿದ್ದಾರೆ.
Read More »
BigTv News
March 28, 2025
Breaking News, Crime, ಹೈದರಾಬಾದ್
ಇಬ್ಬರೂ ಕೆಲಕಾಲ ವಿವಾಹೇತರ ಸಂಬಂಧದಲ್ಲಿ ತೊಡಗಿದ್ದರು. ಆದರೆ, ಅಪ್ಸರ ಮದುವೆಯಾಗುವಂತೆ ಒತ್ತಾಯಿಸಿದಾಗ, ಸಾಯಿ ಕೃಷ್ಣ ಅವಳನ್ನು ಕೊಲೆ ಮಾಡಲು ಯೋಜನೆ ರೂಪಿಸಿದ. 2023ರ ಜೂನ್ 3 ರಂದು, ಅಪ್ಸರಳನ್ನು ಕೊಯಿಮತ್ತೂರು ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಮನವೊಲಿಸಿದ್ದ. ಆ ರಾತ್ರಿ ಅವರು ರಲ್ಲಗೂಡದಲ್ಲಿ ಊಟ ಮಾಡಿ, ಸುಲ್ತಾನ್‌ಪಲ್ಲಿ ಗೋಶಾಲೆಗೆ ಭೇಟಿ ನೀಡಿದರು. ಆದರೆ, ಜೂನ್ 4ರ ರಾತ್ರಿ ಅಪ್ಸರಳನ್ನು ಶಂಶಾಬಾದ್ ಬಳಿಯ ನರ್ಖೋಡ ಗ್ರಾಮದ ಒಂಟಿ ಪ್ರದೇಶಕ್ಕೆ ಕರೆದೊಯ್ದು, ಕಲ್ಲಿನಿಂದ ಹೊಡೆದು …
Read More »
BigTv News
March 28, 2025
Breaking News, Crime, ತಿರುವನಂತಪುರಂ
ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‍ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಶಾಲೆಗೆ ಬಂದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಶಿಕ್ಷಕರು ವಿದ್ಯಾರ್ಥಿಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಮದ್ಯದ ಬಾಟಲಿ ಮತ್ತು ಸುಮಾರು 10,000 ರೂಪಾಯಿಗಳು ಇರುವುದು ಪತ್ತೆಯಾಗಿದೆ. ಕೌನ್ಸೆಲಿಂಗ್ ವೇಳೆ ಮನೆಯಿಂದ ಹಣವನ್ನು ಕದ್ದು ಮದ್ಯದ ಬಾಟಲಿಗಳನ್ನು ಪಡೆದಿದ್ದೇನೆ ಎಂದು ಬಾಲಕ ಒಪ್ಪಿಕೊಂಡಿದ್ದಾನೆ. ಹೀಗಾಗಿ ಶಾಲಾ ಆಡಳಿತ ಮಂಡಳಿಯು ಶಿಸ್ತು ಕ್ರಮವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣಪತ್ರಗಳನ್ನು ನೀಡಿತ್ತು. ಅಪ್ರಾಪ್ತ ವಯಸ್ಕರಿಗೆ …
Read More »
BigTv News
March 28, 2025
Breaking News, Crime, ಕರ್ನಾಟಕ
ಹಾಲುಮಾದೇನಹಳ್ಳಿ ಗ್ರಾಮದಲ್ಲಿ ಪೋಷಕರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಹುಣಸೆ ಮರದಡಿಯಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಅದೇ ಗ್ರಾಮದ ರಮೇಶ್ ಎಂಬಾತ ಅತ್ಯಾಚಾರವೆಸಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನ ವಿರುದ್ಧ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »