BigTv News
March 24, 2025
Breaking News, ರಾಮನಗರ
ತೋಟದಲ್ಲಿ ಸುಮಾರು 3,500 ಕೋಳಿಗಳನ್ನು ಸಾಕುತ್ತಿದ್ದೇನೆ. ಚಿರತೆ ದಾಳಿಯಿಂದಾಗಿ ಹೆಚ್ಚಿನ ನಷ್ಟವಾಗಿದೆ. ಅರಣ್ಯ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕು. ಅವ್ವೇರಹಳ್ಳಿ ಗ್ರಾಮದ ನಾಟಿಕೋಳಿ ಫಾರಂಗೆ ನುಗ್ಗಿದ ಚಿರತೆಯೊಂದು 900ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಿದೆ. ರೇವಣ್ಣ ಎಂಬುವರು ತಮ್ಮ ತೋಟದಲ್ಲಿ ಮಾಡಿರುವ ಕೋಳಿಫಾರಂ ಗ್ಯಾಲರಿ ಮುರಿದು ಒಳ ನುಗ್ಗಿರುವ ಚಿರತೆ ಹಲವು ಕೋಳಿಗಳನ್ನು ಕೊಂದು ತಿಂದಿದೆ.ಬೆಳಿಗ್ಗೆ ರೇವಣ್ಣ ಅವರು ಕೋಳಿಫಾರಂಗೆ ಹೋಗಿ ನೋಡಿದಾಗ ಘಟನೆ ಗೊತ್ತಾಗಿದೆ.
Read More »
BigTv News
March 24, 2025
Breaking News, Crime, ಮಧ್ಯಪ್ರದೇಶ
ಮದುವೆಗೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಅಪ್ರಾಪ್ತ ಪ್ರೇಮಿಗಳು ಉತ್ತರ ಪ್ರದೇಶದಿಂದ ಬಂದು ಜಬಲ್ಪುರದ ಪನಗರ ಬ್ಲಾಕ್ ಬರೋಡಾ ಗ್ರಾಮದಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದ ಜಬಲ್ಪುರದಿಂದ ಆಘಾತಕಾರಿ ಘಟನೆಯೊಂದು ನಡೆದಿದ್ದು, ಅಪ್ರಾಪ್ತ ಪ್ರೇಮಿಗಳು ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿ ತನ್ನ ಸಹೋದರನಿಗೆ ಕರೆ ಮಾಡಿ ಸಹಾಯ ಕೇಳಿದ್ದಳು ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರು ಈ ಬಗ್ಗೆ ತನಿಖೆ ನಡೆಸುವಲ್ಲಿ ನಿರತರಾಗಿದ್ದಾರೆ.
Read More »
BigTv News
March 24, 2025
Breaking News, Crime, ಬೆಂಗಳೂರು, ರಾಜಕೀಯ ಸುದ್ದಿ
ಕರ್ನಾಟಕದ ಹನಿ ಟ್ರ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರು ಮತ್ತು ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರು ಸಿಲುಕಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.ಕರ್ನಾಟಕ ವಿಧಾನಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿರುವ ಹನಿಟ್ರ್ಯಾಪ್ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹನಿ ಟ್ರ್ಯಾಪ್ ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರು ಹನಿಟ್ರ್ಯಾಪ್ನಲ್ಲಿ ತಮ್ಮನ್ನು …
Read More »
BigTv News
March 24, 2025
Breaking News, ಬೆಂಗಳೂರು
ಜಾತ್ರೆಯ ದುರಂತದಿಂದ 6ನೇ ತರಗತಿಯ ಮೃತ ಜ್ಯೋತಿ ಎಂಬ ಬಾಲಕಿಯ ತಾಯಿ ಗಂಗಮ್ಮ ತಮ್ಮ ನೋವನ್ನು ತೋಡಿಕೊಂಡಿದ್ದು, ಜಾತ್ರೆಗಳಲ್ಲಿ ಗೊಂಬೆಗಳ ವ್ಯಾಪಾರ ಮಾಡುತ್ತೇವೆ. ಕೆಂಗೇರಿಯಿಂದ ಗೊಂಬೆಗಳ ಮಾರಾಟ ಮಾಡಲು ಜಾತ್ರೆಗೆ ಬಂದಾಗ ಈ ಅನಾಹುತ ನಡೆದಿದೆ. ಶಾಲೆ ರಜೆ ಇರುವ ಕಾರಣ ಮನೆಯಲ್ಲಿ ಮಗಳು ಒಬ್ಬಳೇ ಇರುತ್ತಾಳೆಂದು ಜಾತ್ರೆಗೆ ಕರೆದುಕೊಂಡು ಬಂದಿದ್ದೆ. ಜಾತ್ರೆಯಲ್ಲಿ ಅಂಗಡಿ ಹಾಕಿದ್ದಾಗ ಜೋರು ಮಳೆ ಬಂತು. ಆಗ ಮಗಳ ಮೇಲೆ ತೇರುಬಿದ್ದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು …
Read More »
BigTv News
March 24, 2025
Breaking News, ಕರ್ನಾಟಕ
ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ರಸ್ತೆಗೆ ರೈತನೋರ್ವ ಬೇಲಿ ಹಾಕಿ ಮೃತನ ಅಂತ್ಯಕ್ರಿಯೆಗೂ ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಸ್ಮಶಾನ ರಸ್ತೆಯಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಅಮಾನವೀಯ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿದೆ. ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ರಸ್ತೆಗೆ ರೈತನೋರ್ವ ಬೇಲಿ ಹಾಕಿ ಮೃತನ ಅಂತ್ಯಕ್ರಿಯೆಗೂ ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಸ್ಮಶಾನ ರಸ್ತೆಯಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಅಮಾನವೀಯ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ …
Read More »
BigTv News
March 24, 2025
Breaking News, ಬೆಂಗಳೂರು
ಒಂದೇ ದಿನ ಇಬ್ಬರು ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನಾಗನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ, ನಾಗನಾಯಕನಹಳ್ಳಿ ಗ್ರಾಮದ ನಾಗರಾಜು ಮತ್ತೊಬ್ಬ ರೈತ ಮುನಿವೆಂಟಪ್ಪ ಮೃತಪಟ್ಟ ದುರ್ದೈವಿಗಳು… ನೆನ್ನೆ ಕೆಎಸ್‌ಆರ್ಟಿಸಿ ಇಲಾಖೆಯ ಲ್ಲಿ ಕೆಲಸ ಮಾಡುತ್ತಿದ್ದ ಡ್ರೈವರ್ ನಾಗರಾಜು ಎಂಬಾತ ಅನಾರೋಗ್ಯದ ಹಿನ್ನೆಲೆಯಲ್ಲಿ ಚಂದಾಪುರದಲ್ಲಿ ಮೃತಪಟ್ಟಿದ್ದರು, ಮೃತ ನಾಗರಾಜನನ್ನು ಅಂತ್ಯಸಂಸ್ಕಾರಕ್ಕಾಗಿ ಚಂದಾಪುರದಿಂದ ನಾಗನಾಯಕನಹಳ್ಳಿಗೆ ಕರೆ ತರಲಾಗಿತ್ತು.. ರಾತ್ರಿ ಮೃತ ನಾಗರಾಜ್ ಮನೆಯಲ್ಲಿ ಭಜನೆ ಸಹ ಮಾಡಲಾಗಿತ್ತು ಆ ಮನೆಯಲ್ಲಿ ಮೃತ …
Read More »
BigTv News
March 24, 2025
Breaking News, Crime, ಹೈದರಾಬಾದ್
ಕೆಲಸ ಮುಗಿಸಿ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಹೋಗಿ, ಮೆಡ್ಚಲ್‌ಗೆ ಸಾಮಾನ್ಯ ಟಿಕೆಟ್ ಖರೀದಿಸಿ, ಸಂಜೆ 7.15 ಕ್ಕೆ ಎಂಎಂಟಿಎಸ್ ರೈಲಿನ ಮಹಿಳಾ ಕೋಚ್‌ನಲ್ಲಿ ಹತ್ತಿದ್ದರು.ಅಪರಿಚಿತ ವ್ಯಕ್ತಿ ತನ್ನ ಬಳಿಗೆ ಕೆಟ್ಟದಾಗಿ ವರ್ತಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆಕೆಯ ನಿರಾಕರಣೆಯ ಹೊರತಾಗಿಯೂ, ಅವನು ತನ್ನ ಮೇಲೆ ಬಲವಂತವಾಗಿ ದಾಳಿ ಮಾಡಲು ಪ್ರಯತ್ನಿಸಿದ್ದ. ತಪ್ಪಿಸಿಕೊಳ್ಳಲು, ಆಕೆ ಚಲಿಸುವ ರೈಲಿನಿಂದ ಹಾರಿದ ಪರಿಣಾಮ , ತಲೆ, ಗಲ್ಲ, ಬಲಗೈ ಮತ್ತು ಸೊಂಟಕ್ಕೆ ಪೆಟ್ಟುಬಿದ್ದು ತೀವ್ರ …
Read More »
BigTv News
March 24, 2025
Breaking News, Crime, ಬೆಂಗಳೂರು
ರಮೇಶ್ ಬಳಿ ಇಬ್ಬರು ಕೆಲಸಗಾರರು 6 ಲಕ್ಷ ರೂ ಅಡ್ವಾನ್ಸ್ ಪಡೆದಿದ್ದರು. ಆದರೆ ಸರಿಯಾಗಿ ಕೆಲಸಕ್ಕೆ ಬಾರದೆ ಸತಾಯಿಸುತ್ತಿದ್ದರು. ಇಬ್ಬರು ಕೂಡ ಕೆಲಸ ಮಾಡದೆ ರಮೇಶ್ನಿಗೆ ಬೆದರಿಕೆ ಹಾಕುತ್ತಿದ್ದರು. ಇಂದು ಮಧ್ಯಾಹ್ನ ಮಾಲೀಕ ರಮೇಶ್ ಜೊತೆಗೆ ಗಲಾಟೆಯಾಗಿದೆ. ಈ ವೇಳೆ ತಂದೆ-ಮಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
March 24, 2025
Breaking News, Crime, ಯಾದಗಿರಿ
ಸಾದ್ಯಾಪುರ ಗ್ರಾಮದ ಬಳಿ ಎರಡು ಪ್ರತ್ಯೇಕ ಗ್ಯಾಂಗ್ನಿಂದ ದಲಿತ ಮುಖಂಡ ಹಾಗೂ ಆತನ ಸಹಚರನನ್ನು ಹತ್ಯೆ ಮಾಡಲಾಗಿತ್ತು. 11 ವರ್ಷಗಳ ಹಿಂದೆ ಹೆಣ್ಣಿನ ವಿಚಾರಕ್ಕೆ ಶುರುವಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.ಮಾರ್ಚ್ 16 ರಂದು ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರ ಕ್ರಾಸ್ ಬಳಿ ಡಬಲ್ ಮರ್ಡರ್ ನಡೆದಿತ್ತು. ಕಟಿಂಗ್ ಮಾಡಿಸಿಕೊಂಡು ಹೋಗ್ತಿದ್ದಾಗ ಮಾಪಣ್ಣನನ್ನು ಸುಪಾರಿ ಪಡೆದಿದ್ದ ಗ್ಯಾಂಗ್ನಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Read More »
BigTv News
March 24, 2025
Breaking News, ಚಿಕ್ಕಮಗಳೂರು
ಮಡಿಕೇರಿ ಕುಶಾಲನಗರ ಮೂಲದ ಪ್ರವಾಸಿ ನಿಶಾಂತ್ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ಈಜುಕೊಳದಲ್ಲಿ ಬಿದ್ದು ದುರ್ಮರಣ ಹೊಂದಿದ್ದಾರೆ. ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲೇ ಅವರು ಸಾವಿಗೀಡಾಗಿದ್ದಾರೆ.ನೀರಿಗೆ ಹಾರಿದ ನಂತರ ನಿಶಾಂತ್ ಕೈ ಕಾಲು ಆಡಿಸದ ಕಾರಣ ಸ್ನೇಹಿತ ಹಾಗೂ ಇತರರು ಮೇಲಕ್ಕೆತ್ತಿದ್ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ
Read More »