BigTv News
March 23, 2025
Breaking News, Crime, ಬಾಗಲಕೋಟೆ
ಬಾಗಲಕೋಟೆಯ ಜಮಖಂಡಿ ನಗರದಲ್ಲಿರುವ ಹೊಸ ಬಬಲಾದಿ ಮಠಕ್ಕೆ ಆಗಮಿಸಿದ ಸಿಐಡಿ ಅಧಿಕಾರಿಗಳ ತಂಡ ಸದಾಶಿವ ಮುತ್ಯಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುತ್ಯಾ ಅವರು ಇತ್ತೀಚೆಗೆ ಕೆಲವು ವರ್ಷಗಳಿಂದ ಕಾಲಜ್ಞಾನ ಹೇಳುತ್ತಾ ಬಂದಿದ್ದು, ಭಕ್ತರು ಕೂಡ ಅವರು ಹೇಳುವ ಕಾಲಜ್ಞಾನ ನಿಜವಾಗುತ್ತೆ ಎಂದು ನಂಬಿದ್ದಾರೆ. ಬೆಳಗಾವಿಯ ಗೋಕಾಕ್ ನ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ನಲ್ಲಿದ್ದ ಗ್ರಾಹಕರ ಹಣವನ್ನು ವಂಚಿಸಿದ ಆರೋಪದಡಿ ಬಂಧಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ರೂ.60 ಲಕ್ಷಕ್ಕೂ ಅಧಿಕ ಹಣ ವಂಚನೆ ನಡೆದಿದೆ …
Read More »
BigTv News
March 23, 2025
Breaking News, Crime, ದೇಶ-ವಿದೇಶ
ಮಹಿಳೆಯನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಆಟೋರಿಕ್ಷಾ ಚಾಲಕನನ್ನು ಲಕ್ನೋ ಪೊಲೀಸರು ಶುಕ್ರವಾರ ಗುಂಡಿಕ್ಕಿ ಕೊಂದಿದ್ದಾರೆ. ಆರೋಪಿ ಅವಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿರಬಹುದು ಮತ್ತು ಅವಳು ಪ್ರತಿರೋಧಿಸಿದಾಗ ಅವಳನ್ನು ಕೊಂದಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಅಜಯ್ ಕುಮಾರ್ ವಿರುದ್ಧ 23 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು.ಪೊಲೀಸರು ದಿನೇಶ್ ಬಳಿಯಿಂದ ಸಂತ್ರಸ್ತೆಯ ಶೈಕ್ಷಣಿಕ …
Read More »
BigTv News
March 23, 2025
Breaking News, Crime, ಚಿಕ್ಕಮಗಳೂರು
ಅಪಘಾತದಲ್ಲಿ 17 ಹಲ್ಲುಗಳನ್ನ ಕಳೆದುಕೊಂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಭುವನಕೋಟೆ ಸಮೀಪದ ಸಾಲುಮರ ಗ್ರಾಮದಲ್ಲಿ ನಡೆದಿದೆ. ಮೃತನನ್ನ ವಿಘ್ನೇಶ್ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Read More »
BigTv News
March 23, 2025
Breaking News, Crime, ಹಾಸನ
ಮಹಿಳೆಯೊಬ್ಬರು ಕೈಯಲ್ಲಿ ಲಾಂಗ್ ಹಿಡಿದು ಓಡಾಡಿದ ಘಟನೆ ಹಾಸನದಲ್ಲಿ ನಡೆದಿದೆ.ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮಹಿಳೆ ಲಾಂಗ್ ಹಿಡಿದು ಓಡಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.ಇನ್ನು ಹೀಗೆ ಲಾಂಗ್ ಹಿಡಿದು ಓಡಾಡಿರುವ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಈ ಆರೋಪಿಗಳ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.
Read More »
BigTv News
March 23, 2025
Breaking News, Crime, ಜೈಪುರ
ಜೈಪುರದ ಮಹಾರಾಜ ಕಾಲೇಜಿನ ಗೋಖಲೆ ಹಾಸ್ಟೆಲ್‌ನಲ್ಲಿ ಆತಂಕಕಾರಿ ಪರಿಸ್ಥಿತಿ ಉಂಟಾಗಿದ್ದು, ಕಾಲೇಜಿನ ಆಡಳಿತ ಮತ್ತು ಹಾಸ್ಟೆಲ್ ಮೇಲ್ವಿಚಾರಣೆಯ ಬಗ್ಗೆ ಗಂಭೀರ ಕಾಳಜಿಗಳನ್ನು ಹುಟ್ಟುಹಾಕಿದೆ. ಮಹಿಳಾ ವಿದ್ಯಾರ್ಥಿನಿಯೊಬ್ಬಳು ಬಾಲಕರ ಹಾಸ್ಟೆಲ್‌ನಲ್ಲಿ ರಾತ್ರಿ ಕಳೆದಿದ್ದಾಳೆ ಎಂದು ವರದಿಯಾಗಿದೆ. ಆಕೆ ಮುಂಜಾನೆ ಆವರಣದಿಂದ ಹೊರಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಈ ಸತ್ಯ ಬಹಿರಂಗವಾಗಿದೆ. ಸುಮಾರು ಒಂದು ವಾರದ ಹಿಂದೆ ವೈರಲ್ ಆದ ಈ ವಿಡಿಯೋ ಈಗ ಕಾಲೇಜು ಅಧಿಕಾರಿಗಳನ್ನು ತಲುಪಿದೆ. ಆದಾಗ್ಯೂ, …
Read More »
BigTv News
March 23, 2025
Breaking News, Crime, ಭೋಪಾಲ್
ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳಾ ವೈದ್ಯೆಯೊಬ್ಬಳ ಮೃ*ತದೇಹ ಭೋಪಾಲ್ ನಲ್ಲಿರುವ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು ಆಕೆಯ ತೋಳಿನ ಮೇಲೆ ಸೂಜಿ ಚುಚ್ಚಿದ ಗುರುತು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ರಿಚಾ ಅವರ ಕೈಯಲ್ಲಿ ಚುಚ್ಚುಮದ್ದಿನ ಗುರುತುಗಳು ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ಕಾರಣವನ್ನು ಖಚಿತಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಿಚಾ ಅವರು ಮೃತಪಟ್ಟಿರುವ ವಿಚಾರವನ್ನು ಅವರ ಕುಟುಂಬಕ್ಕೆ ತಿಳಿಸಲಾಗಿದ್ದು, ಕುಟುಂಬಸ್ಥರು ಬಂದ ಬಳಿಕ ಮರಣೋತ್ತರ ಪರೀಕ್ಷೆ …
Read More »
BigTv News
March 22, 2025
Breaking News, ಕರ್ನಾಟಕ
ಮಾದಪ್ಪ ಜೀವನೋಪಾಯಕ್ಕಾಗಿ ನಾಡ ಹಸುಗಳನ್ನು ಹಾಕಿಕೊಂಡಿದ್ದು ಪ್ರತಿದಿನ ಜಾನುವಾರುಗಳನ್ನು ಅರಣ್ಯದಲ್ಲಿ ಮೇವು ಮೇಯಲು ಬಿಟ್ಟು ವಾಪಸ್ ಬರುತಿದ್ದರು.ಹನೂರು ತಾಲೂಕಿನ ಚಿಕ್ಕಲತ್ತೂರು ಗ್ರಾಮದ ಮಾದಪ್ಪ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸುಮಾರು ಹತ್ತು ದಿನಗಳ ನಂತರ ಬೆಳಕಿಗೆ ಬಂದಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Read More »
BigTv News
March 22, 2025
Breaking News, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಗೋಕುಲ್ ರಸ್ತೆ ಕೆ ಎಸ್ ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾಸಂಸ್ಥೆಯಲ್ಲಿ ನಾಳೆ ಮಾರ್ಚ್ 23ರಂದು 12 ಗಂಟೆಗೆ ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ಏರ್ಪಡಿಸಲಾಗಿದೆ. ಪ್ರಕೃತಿ ಚಿಕಿತ್ಸೆ ಮಹತ್ವ ಕುರಿತು ಉಪನ್ಯಾಸರಿಂದ ವಿಶೇಷ ಉಪನ್ಯಾಸ ನಡೆಯುವುದು. ನಂತರ ಆರೋಗ್ಯದ ಸಮಸ್ಯೆಗಳಿಗೆ ಉಚಿತ ಸಲಹೆ ನೀಡಲಾಗುವುದು. ಯಾವುದೇ ಕಾಯಿಲೆ ಇರುವ ವ್ಯಕ್ತಿಯು ಬಂದು ಉಚಿತ ಚಿಕಿಸ್ತ ಸಲಹಾ ಪಡೆಯಬಹುದೆಂದು ಡಾಕ್ಟರ್ ಶರ್ಮಾ ತಿಳಿಸಿದ್ದಾರೆ.
Read More »
BigTv News
March 22, 2025
Breaking News, Dharwad, ಹುಬ್ಬಳ್ಳಿ-ಧಾರವಾಡ
ಧಾರವಾಡ ರಂಗಾಯಣವು ಚಿನ್ನರ ಮೇಳ 2025ರ ಅಂಗವಾಗಿ ಬೇಸಿಗೆ ಮಕ್ಕಳ ರಂಗ ತರಬೇತಿ ಶಿಬಿರ ಏಪ್ರಿಲ್ 10 ರಿಂದ ಮೇ 4ರವರೆಗೆ ಆಯೋಜಿಸಿದೆ. ಏಪ್ರಿಲ್ 9ಕ್ಕೆ 7 ವರ್ಷ ಪೂರ್ಣಗೊಂಡ 15 ವರ್ಷ ಒಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಏಪ್ರಿಲ್ 9ರ ಒಳಗೆ ಪಾಲಕರೆ ಖುದ್ದಾಗಿ ಮಕ್ಕಳೊಡನೆ ಬಂದು ಶಿಬಿರದಲ್ಲಿ ಹೆಸರನ್ನು ನೋಂದಾಯಿಸಬೇಕು. ಮಾಹಿತಿಯನ್ನು ರಂಗಾಯಣ ಕಚೇರಿಗೆ ತಲುಪಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Read More »
BigTv News
March 22, 2025
Breaking News, ಕರ್ನಾಟಕ
ಕರ್ನಾಟಕ ಲೋಕಸೇವಾ ಆಯೋಗ ಸೂಚಿಸಿದ್ದ 2023-24ನೇ ಸಾಲಿನ ಗೆಜೆಟೆಡ್ ಪ್ರಬೆಷ್ಯನ ಗ್ರೂಪ್ ಎ ಗ್ರೂಪ್ ಬಿ ವೃಂದದ ವಟ್ಟು 384 ಹುದ್ದೆಗಳಿಗೆ ಸಂಬಂಧಿಸಿದ ನಿಗದಿಪಡಿಸಿದ್ದ ಮುಖ್ಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕಾಣುತ್ತಾದಿಂದ ಪರೀಕ್ಷೆ ಸಮಯವನ್ನು ಮುಂದೂಡಲಾಗಿದ್ದು ಹೊಸ ದಿನಾಂಕವನ್ನು ಶೀಘ್ರವಾಗಿ ನಿಗದಿಪಡಿಸಲಾಗುತ್ತದ ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.
Read More »