Breaking News

ಸುದ್ದಿ

ಶಾಸಕ ಶ್ರೀಮಂತ ಅವರ ವಿಚಾರಣೆ ಕೈಗೊಂಡ ಪೋಲಿಸರು

ಚಿಕ್ಕೋಡಿ: ಡಿ ಕೆ ಶಿವಕುಮಾರ್ ಅವರಿಂದ ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಕಾಗವಾಡ ಶಾಸಕರನ್ನು ಅಕ್ರಮವಾಗಿ ಬಂಧಿಸಿರುವ ಆರೋಪದ ಹಿನ್ನೆಲೆಯಲ್ಲಿ ಹಾಗೂ ಸ್ಪೀಕರ್ ರಮೇಶ್ ಕುಮಾರ ಆದೇಶದ ಹಿನ್ನಲೆಯಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅಪಹರಣ ಆರೋಪದ ಕುರಿತು ಪೊಲೀಸರಿಂದ ತನಿಖೆ ಆರಂಭಗೊಂಡಿದೆ. ‌ ಮಹಾರಾಷ್ಟ್ರದ ಸಾಂಗಲಿ ಪಟ್ಟಣದಲ್ಲಿರುವ ಮನೆಗೆ ತೆರಳಿದ ಅಥಣಿ ಡಿ.ವೈ.ಎಸ್.ಪಿ ರಾಮಣ್ಣ ಬಸರಗಿ ಸಿ ಪಿ ಐ ಎಚ್ ಶೆಖರಪ್ಪ ನೇತೃತ್ವದಲ್ಲಿ ಪೊಲೀಸರ ತಂಡ …

Read More »

ಆನೇಕಲ್ ತಾಲ್ಲೂಕಿನಲ್ಲಿ ನೀರಿಗಾಗಿ ಜನರ ಪರದಾಟ ಗಮನ ಹರಿಸಬೇಕಾದ ಶಾಸಕರು ರೆಸಾರ್ಟ್ನಲ್ಲಿ ವಾಸ

ಆನೇಕಲ್:ಈ ಬಾರಿ ಅದೇಕೋ ಮುಂಗಾರು ಮಳೆ ಕೈಕೊಟ್ಟಿದ್ದು ನೀರಿಗಾಗಿ ಜನರು ಪರಿತಪಿಸುವಂತಾಗಿದೆ,ಹೌದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಾದ್ಯಂತ ಜನತೆ ಕುಡಿಯುವ ನೀರು ಹಾಗು ದಿನನಿತ್ಯದ ಬಳಕೆಗೆ ಬೇಕಾದ ನೀರಿಗಾಗಿ ಕಂಗೆಟ್ಟು ಹೋಗಿದ್ದಾರೆ,ಆನೇಕಲ್ ಪಟ್ಟಣದಲ್ಲಿ ಮೊದಲು ಒಂದು ವಾರಕ್ಕೆ ಒಮ್ಮೆ ನೀರು ಸರಬರಾಜು ಆಗುತ್ತಿತ್ತು ಇದೀಗ ಒಂದು ತಿಂಗಳಾದರೂ ಸಹ ನೀರು ಸರಬರಾಜು ಮಾಡದೆ ಜನರು ನೀರಿಲ್ಲದೆ ಬಿಂದಿಗೆಗಳನ್ನು ಹಿಡಿದು ಕಿಲೋಮೀಟರ್ ಗಟ್ಟಲೇ ನಡೆದು ಹೋಗಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು …

Read More »

ಪುನಃ ಆರಂಭಗೊಂಡ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ಬಸ್‍ಗಳ ಓಡಾಟ

ಹುಬ್ಬಳ್ಳಿ: ಅವಳಿನಗರದ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ಬಸ್‍ಗಳ ಓಡಾಟ ಮತ್ತೆ ಆರಂಭಗೊಂಡಿದೆ. ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣ (ಕೆಎಸ್‍ಟಿಎಟಿ) ಸೋಮವಾರ ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿರುವುದರಿಂದ ಇಂದಿನಿಂದ ಮತ್ತೆ 41 ಬೇಂದ್ರೆ ಸಾರಿಗೆ ಸಂಸ್ಥೆಯ ಬಸ್​​ಗಳು ರೋಡಿಗೆ ಇಳಿದಿದ್ದು, ಬೇಂದ್ರೆ ಬಸ್ ಮಾಲೀಕರಿಗೆ ತಾತ್ಕಾಲಿಕ ನ್ಯಾಯ ಸಿಕ್ಕಂತಾಗಿದೆ.ಅವಳಿನಗರದ ಮಧ್ಯೆ ಬೇಂದ್ರೆ ಬಸ್‍ಗಳ ಸಂಚಾರಕ್ಕೆ ಪರವಾನಗಿ ನವೀಕರಣ ಕೋರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಹಾಗೂ …

Read More »

ಬಹುಮಹಡಿ ಕಟ್ಟಡ ಕುಸಿತ ಪ್ರಕರಣದ ಮಾಲೀಕರಿಗೆ ಷರತ್ತುಬದ್ಧ ಜಾಮೀನು

ಧಾರವಾಡ: ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ನಾಲ್ವರು ಮಾಲೀಕರಿಗೆ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.ಕಟ್ಟಡದ ಎಂಜಿನಿಯರ್ ಹೊರತುಪಡಿಸಿ ಮಾಲೀಕರಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಮಾ. 19ರಂದು ಕುಸಿದುಬಿದ್ದ ಕಟ್ಟಡದಡಿ ಸಿಲುಕಿ 19 ಜನ ಮೃತಪಟ್ಟಿದ್ದರು.ಕಟ್ಟಡ ಕುಸಿದ ಎರಡು ದಿನಗಳ ನಂತರ ಮಾಲೀಕರು ಪೊಲೀಸರಿಗೆ ಶರಣಾಗಿದ್ದರು. ಗಂಗಣ್ಣ ಶಿಂತ್ರಿ, ಬಸವರಾಜ ನಿಗದಿ, ಮಹಾಬಲೇಶ್ವರ ಪುರದನಗುಡಿ, ರವಿ ಸಬರದ ಜಾಮೀನು ಪಡೆದ ಮಾಲೀಕರಾಗಿದ್ದಾರೆ. ಕಟ್ಟಡದ ನಾಲ್ವರು …

Read More »

ಪಾರಿವಾಳದ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

ಹುಬ್ಬಳ್ಳಿ : ಪಾರಿವಾಳ ಶಾಂತಿಯ ಸಂಕೇತ. ಆದ್ರೆ, ಅದೇ ಪಾರಿವಾಳವೊಂದು ಕುಟುಂಬದ ಶಾಂತಿಗೆ ಭಂಗ ತಂದಿದ್ದು, ಸಹೋದರರಂತಿದ್ದ ಎರಡು ಕುಟುಂಬಗಳು ಇದೀಗ ಶತ್ರುಗಳಾಗಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರ ಸಂಗತಿ.ಹೌದು, ದುಡಿದು ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆಯ ಬೆಡ್ ಮೇಲೆ ಯುವಕನೊಬ್ಬ ಮಲಗಿದ್ರೆ, ಮತ್ತೊಂದೆಡೆ ಆತನ ಕುಟುಂಬದವರು ಭಯದಿಂದ ಬದುಕು ಕಟ್ಟಿಕೊಂಡಿದ್ದ ಮನೆಯನ್ನೇ ಬಿಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿಗೆ …

Read More »

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 21 ರಂದು ಜಾಥಾ

ಹುಬ್ಬಳ್ಳಿ: ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 21ರಂದು ಬೆಂಗಳೂರಿನಲ್ಲಿ ರೈತ ಜಾಥಾ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಮಟ್ಟದ ಪದಾಧಿಕಾರಿ ಸಿದ್ಧನಗೌಡ ಪಾಟೀಲ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಶೀಘ್ರವಾಗಿ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳ …

Read More »

ಈಡೇರದ ಸಾಲ ಮನ್ನಾ ಭರವಸೆ.

ಧಾರವಾಡ: ಸತತ 4 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದ ರೈತರಿಗೆ ಸಾಲಮನ್ನಾ ಯೋಜನೆ ವರದಾನವಾಗುತ್ತೆ ಎಂದು ನಂಬಿರುವ ರೈತರಿಗೆ ಸಂಕಷ್ಟ ಎದುರಾಗಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಯು ಜನರಿಗೆ ಮಾತ್ರ ನಿಲುಕದ ನಕ್ಷತ್ರವಾಗಿ ಪರಿಣಮಿಸಿದೆ.ಇತ್ತ ಸಾಲ ಮನ್ನಾ ಯೋಜನೆಯನ್ನು ಘೋಷಣೆ ಮಾಡಿದ ಸಮ್ಮಿಶ್ರ ಸರ್ಕಾರ ಮುಳುಗುವ ದೋಣಿಯಾಗಿದ್ದರೆ, ಅವರ ಸಾಲಮನ್ನಾ ಯೋಜನೆ ಮಣ್ಣುಪಾಲಾದಂತೆ ಕಾಣುತ್ತಿದೆ. ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ ಧಾರವಾಡ ಜಿಲ್ಲೆಗೆ ಬರಬೇಕಾದ 95 ಕೋಟಿ ರೂಪಾಯಿ …

Read More »

ಕಾರ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

ಚಿತ್ರದುರ್ಗ: ಅಪಘಾತವಾಗಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಸಾವು, ಮೂರು ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಚಿತ್ರದುರ್ಗ ಹೊರವಲಯದ ಕುಂಚಿಗನಾಳ್ ಬಳಿ ಘಟನೆ ನಡೆದಿದೆ. ಇದೇ ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾಗಿ 4 ಮಂದಿ ಮೃತ ಪಟ್ಟಿದ್ದರು.ಲಾರಿ ಸ್ಥಳಾಂತರಿಸದೇ ಇದಿದ್ದರಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಹುಬ್ಬಳ್ಳಿ ನಿವಾಸಿ ಅರುಣ್, (19) ಮೃತ ದುರ್ಧೈವಿ. ಶಿರಿಶಾ, ಪವನ್, ಸದಾನಂದ ಗಂಭೀರ ಗಾಯಾಳುಗಳು.ಗಾಯಾಳುಗಳಿಗೆ ಚಿತ್ರದುರ್ಗ ಜಿಲ್ಲಾ …

Read More »

ಮಂಗಳೂರಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ

ಮಂಗಳೂರು: ಮಂಗಳೂರಿನಲ್ಲಿ ಮತ್ತೆಮಳೆ ಚುರುಕುಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ಇಂದು ದಿನವಿಡೀ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರು ನಗರದಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವ ಹಿನ್ನೆಲೆ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಉಂಟಾಯ್ತು. ಇನ್ನೂ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಯ್ತು. ನೇತ್ರಾವತಿ, ಕುಮಾರಧಾರ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ನದಿ ಪ್ರದೇಶದಲ್ಲಿ ವಾಸಿಸುವ ಜನರ್ರಿಗೆ ಹಾಗೂ …

Read More »

ಆಕಸ್ಮಿಕ ಅಗ್ನಿ ಅವಘಡ ಹೊತ್ತಿ ಉರಿದ ಡೀಸೆಲ್‌ ಟ್ಯಾಂಕರ್

ಮಂಡ್ಯ: ಜಿಲ್ಲೆಯ ಚಿಕ್ಕೋಸಹಳ್ಳಿ ಗ್ರಾಮದ ಹೊರವಲಯದ ಶ್ರವಣಬೆಳಗೊಳ ರಸ್ತೆಯಲ್ಲಿ ಭಾರತೀಪುರ ಬಳಿಯ ಉಪ್ಪಾರ್ ಕ್ಯಾಂಪ್ ಗೆ ಡೀಸೆಲ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಗೆ ಆಕಸ್ಮಿಕ ಬೆಂಕಿ ಹೊತ್ತುಕೊಂಡು ಉರಿದಿದೆ.ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಗ್ನಿಶಾಮಕ ಠಾಣಾಧಿಕಾರಿ ಶ್ರೀನಿವಾಸರಾವ್ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿಬೆಂಕಿ ನಂಧಿಸಿ ಅಪಾರ ಹಾನಿ ತಪ್ಪಿಸಿದ್ದಾರೆ. ಇದ್ದಕ್ಕಿದ್ದಂತೆ ಲಾರಿಯ ಕ್ಯಾಬಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಾಗ ಲಾರಿಯ ಚಾಲಕ ಸಂಗಣ್ಣ ಅವರು ಕೆ.ಆರ್.ಪೇಟೆ …

Read More »