admin
September 12, 2019
ಕರ್ನಾಟಕ, ಸುದ್ದಿ
ದಾವಣಗೆರೆ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ದಿನಗಣನೆ ಆರಂಭಗೊಂಡಿರುವ ಹಿನ್ನಲೆಯಲ್ಲಿದಾವಣಗೆರೆಯಲ್ಲಿ ಜೆಡಿಎಸ್ ಮುಖಂಡ ಅಮಾನುಲ್ಲ ಖಾನ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಉರುಳು ಸೇವೆ ಮಾಡುವ ಮೂಲಕ ಸರ್ಕಾರವನ್ನು ಉಳಿಸುವಂತೆ ದಾವಣಗೆರೆ ನಗರ ದೇವತೆ ದುರ್ಗಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಸರ್ಕಾರ ಸುಭದ್ರವಾಗಿರಲಿ, ಕುಮಾರಸ್ವಾಮಿಯೆ ಸಿಎಂ ಆಗಿ ಮುಂದುವರಿಯಲು ಎಂದು ಪ್ರಾರ್ಥನೆ ಸಲ್ಲಿಸಿದರು. ಸಮ್ಮಿಶ್ರ ಸರ್ಕಾರಕ್ಕೆ ಬಂದ ಸಂಕಷ್ಟ ದೂರಾಗಲಿ, ವಿರೋಧಿಗಳ ಕುತಂತ್ರ ಫಲಿಸದಂತೆ ಕಾರ್ಯಕರ್ತರು ದೇವಿಗೆ ಬೇಡಿಕೊಂಡರು.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಬಿಜೆಪಿ ನಾಯಕರು ಶಾಸಕರ ಖರೀದಿ ಮಾಡುತ್ತಿದ್ದಾರೆ. ಹಾಗೂ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಆರೋಪಿಸಿಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಕಾರ್ಯಕರ್ತರು ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್:ಬೆಳ್ಳಂಬೆಳ್ಳಿಗೆ ಶಾಲಾ ಬಸ್ ಹಾಗು ಗಾರ್ಮೆಂಟ್ಸ್ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಶಾಲಾ ಮಕ್ಕಳು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗೊಂಡಿರುವಂತಹ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ರಸ್ತೆಯ ಜಂಗಲ್ ಪಾಳ್ಯ ರಸ್ತೆಯಲ್ಲಿ ನಡೆದಿದೆ.ಹೌದು ಇಂದು ಬೆಳಿಗ್ಗೆ 8.30 ರ ಸುಮಾರಿಗೆ ಬನ್ನೇರುಘಟ್ಟ ಜಂಗಲ್ ಪಾಳ್ಯ ರಸ್ತೆಯಲ್ಲಿ ರಾಯಲ್ ಇಂಟರ್ ನ್ಯಾಷನಲ್ ಶಾಲಾ ಬಸ್ ಹಾಗು ಖಾಸಗಿ ಗಾರ್ಮೆಂಟ್ಸ್ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ನಾಲ್ವರು …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ನಿನ್ನೆ ಪಂಪ್ ವೆಲ್ ನಲ್ಲಿ ಗೂಡ್ಸ್ ಟೆಂಪೋ ಚಾಲಕನ ಮೇಲೆ ಹಲ್ಲೆ ಮಾಡಿದ ರೌಡಿ ಶೀಟರ್ ಮೇಲೆ ಪೊಲೀಸ್ ಗುಂಡಿನ ದಾಳಿ ನಡೆಸಿದ್ದಾರೆ.ಹಲ್ಲೆ ಕೇಸಲ್ಲಿ ಭವಿತ್ ರಾಜ್ ಭಾಗಿಯಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಬಂಧಿಸಲು ಹೋದಾಗ ಆರೋಪಿ ಭವಿತ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.ಹೀಗಾಗಿ ಪೊಲೀಸರು ಸ್ವರಕ್ಷಣೆಗಾಗಿ ರೌಡಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಅಲ್ಪಮತ ದೊರೆತಿದ್ದರೂ ಸಹ ರಾಜ್ಯಭಾರ ಮಾಡುವ ಬಂಡತನ ತೋರಿಸುತ್ತಿರುವ ಮೈತ್ರಿ ಸರ್ಕಾರ ವಿರುದ್ದ ಇಂದು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಕ್ಷದ ನಾಯಕರು ಈಗಲಾದರೂ ಎಚ್ಚೆತ್ತು ರಾಜೀನಾಮೆ ನೀಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
Read More »
admin
September 12, 2019
ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ: ರಾಜ್ಯದಲ್ಲಿ ಅಲ್ಪ ಮತಕ್ಕೆ ಕುಸಿದ ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯ ಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಲು ಒತ್ತಾಯಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಂದು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿದರು. ರಾಜ್ಯದಲ್ಲಿ ಜನವಿರೋಧಿ ಸಮ್ಮಿಶ್ರ ಸರಕಾರ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಈ ಸರಕಾರದ ಕಾರ್ಯವೈಖರಿಯಿಂದಾಗಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಶಾಸಕರು, ಸಚಿವರು ರಾಜಿನಾಮೆ ನೀಡುವ …
Read More »
admin
September 12, 2019
ಕರ್ನಾಟಕ, ಸುದ್ದಿ
ರಾಮನಗರ: ಬಹುಮತವಿಲ್ಲದ ಸರ್ಕಾರವನ್ನು ನಡೆಸುತ್ತಿರುವ ಹೆಚ್ಡಿಕೆಗೆ ವಿರುದ್ಧ ಸಿಎಂ ಸ್ವ ಕ್ಷೇತ್ರ ರಾಮನಗರದಲ್ಲಿ ರಾಮನಗರ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.ಬಿಜೆಪಿ ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.೧೪ ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿ ಬಹುಮತ ಕಳೆದುಕೊಂಡ ಸರ್ಕಾರದಸಿಎಂ ಗೆ ನೈತಿಕತೆ ಇದ್ರೆ ರಾಜೀನಾಮೆ ನೀಡಬೇಕೆಂಬ ಒತ್ತಾಯಿಸಿದರು.
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಶಾಸಕರ ರಾಜೀನಾಮೆಯ ಹೈ ಡ್ರಾಮಾ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಕೋಲಾರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ಸರ್ಕಾರ ಅಂತ್ಯ ಸಂಸ್ಕಾರ ಮಾಡಿ ವಿನೂತನ ಪ್ರತಿಭಟನೆ ನಡೆಸಲಾಯಿತು.ರಾಜ್ಯದ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ರಾಜ್ಯದ 224 ಶಾಸಕರುಗಳಿಗೆ ನಗರದ ಮೆಕ್ಕೆ ವೃತ್ತದಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳ ಅಣಕು ಪ್ರದರ್ಶನ ಮಾಡಲಾಯಿತು.ತಮ್ಮ ಕ್ಷೇತ್ರಗಳ ಅಭಿವೃದ್ಧಿ ಮಾಡದೇ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಶಾಸಕರ ವಿರುದ್ಧ ಪ್ರತಿಭಟನಾನಿರತರು …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಎರಡು ಬೈಕುಗಳ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದಮುರಕನಹಳ್ಳಿ ಬಳಿ ಘಟನೆಗ್ರಾಮದ ಮಹದೇವೇಗೌಡರ ಮನೆಯ ಬಳಿ ಕಾಲುವೆ ಏರಿ ಮೇಲೆ ನಡೆದಿದೆ.ಮೃತ ವ್ಯಕ್ತಿ ಮೊಸಳೆಕೊಪ್ಪಲು ಗ್ರಾಮದ ರಂಗೇಗೌಡರ ಪುತ್ರ ಎಂ.ಆರ್.ಮಹೇಂದ್ರ(35) ಮೃತ ದುರ್ದೈವಿ. ಮೃತರು ಪತ್ನಿ ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ..ಸ್ಥಳಕ್ಕೆ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ..ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಉಡುಪಿ: ಬೆಳ್ಳಂಬೆಳ್ಳಿಗ್ಗೆ ಅತೀವೇಗವಾಗಿ ಚಲಾಯಿಸುತ್ತಿದ್ದ ಎಕ್ಸ್ ಪ್ರೆಸ್ ಬಸ್ಸೊಂದು ನಿಯಂತ್ರಣ ತಪ್ಪಿ ಹಾಲಿನ ಡೈರಿಗೆ ನುಗ್ಗಿದ ಘಟನೆ ಉಡುಪಿಯ ಕಡಿಯಾಳಿಯಲ್ಲಿ ನಡೆದಿದೆ.ಕಾರ್ಕಳದಿಂದ ಉಡುಪಿಗೆ ಅಗಮಿಸುತ್ತಿದ್ದ ಗಣೇಶ್ ಟ್ರಾವೆಲ್ಸ್ ಎಕ್ಸ್ ಪ್ರೆಸ್ ಚಾಲಕ ಕಡಿಯಾಳಿ ಒಶಿಯಾನ್ ಪರ್ಲ್ ಹೊಟೇಲ್ ಬಳಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದೆ,ಬಸ್ಸು ನೇರವಾಗಿ ರಸ್ತೆ ಫುಟ್ ಪಾತ್ ಹತ್ತಿ ಅಂಗಡಿಗೆ ಡಿಕ್ಕಿ ಹೊಡೆದಿದೆ.ಫುಟ್ ಪಾತ್ ಎತ್ತರದಲ್ಲಿ ಕಾರಣ ಬಸ್ಸಿನ ವೇಗ ಕಡಿಮೆಯಾಗಿ ನಿಂತಿದೆ. ಹಾಲಿನ ಡೈಲಿಯೊಳಗಡೆ ಇದ್ದ ಇಬ್ಬರು …
Read More »