ಉಡುಪಿ: ಬೆಳ್ಳಂಬೆಳ್ಳಿಗ್ಗೆ ಅತೀವೇಗವಾಗಿ ಚಲಾಯಿಸುತ್ತಿದ್ದ ಎಕ್ಸ್ ಪ್ರೆಸ್ ಬಸ್ಸೊಂದು ನಿಯಂತ್ರಣ ತಪ್ಪಿ ಹಾಲಿನ ಡೈರಿಗೆ ನುಗ್ಗಿದ ಘಟನೆ ಉಡುಪಿಯ ಕಡಿಯಾಳಿಯಲ್ಲಿ ನಡೆದಿದೆ.ಕಾರ್ಕಳದಿಂದ ಉಡುಪಿಗೆ ಅಗಮಿಸುತ್ತಿದ್ದ ಗಣೇಶ್ ಟ್ರಾವೆಲ್ಸ್ ಎಕ್ಸ್ ಪ್ರೆಸ್ ಚಾಲಕ ಕಡಿಯಾಳಿ ಒಶಿಯಾನ್ ಪರ್ಲ್ ಹೊಟೇಲ್ ಬಳಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದೆ,ಬಸ್ಸು ನೇರವಾಗಿ ರಸ್ತೆ ಫುಟ್ ಪಾತ್ ಹತ್ತಿ ಅಂಗಡಿಗೆ ಡಿಕ್ಕಿ ಹೊಡೆದಿದೆ.ಫುಟ್ ಪಾತ್ ಎತ್ತರದಲ್ಲಿ ಕಾರಣ ಬಸ್ಸಿನ ವೇಗ ಕಡಿಮೆಯಾಗಿ ನಿಂತಿದೆ. ಹಾಲಿನ ಡೈಲಿಯೊಳಗಡೆ ಇದ್ದ ಇಬ್ಬರು ಯುವಕರು ಅದೃಷ್ಟವಾಶತ್ ಪಾರಾಗಿದ್ದಾರೆ .ಅಂಗಡಿ ಸಂಪೂರ್ಣವಾಗಿ ಝಕಂ ಅಗಿ ಮೂರು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಇತ್ತೀಚೆಗಷ್ಟೇ ಅಂಗಡಿ ಮಾಲೀಕ ಹೊಸದಾಗಿ ನವೀಕರಣ ಮಾಡಿಸಿದ್ದರು.ಅಫಘಾತ ನಡೆದ ಸಂಧರ್ಭ ಅಂಗಡಿಯಲ್ಲಿ ಹಾಲು ಖರೀದಿಸಲು ಗಿರಾಕಿಗಳು ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿ ಹೋಗಿದೆ.ವೀಪರೀತ ಮಳೆಯಿದ್ದ ಕಾರಣ ಬಸ್ಸಿನ ನಿಯಂತ್ರಣ ತಪ್ಪಿದೆ ಎಂದು ಬಸ್ಸು ಚಾಲಕ ತಿಳಿಸಿದ್ದಾನೆ.ಸ್ಥಳಕ್ಕೆ ಉಡುಪಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





