Breaking News

ಸುದ್ದಿ

ಒಟ್ಟು 300 ಕಾರು ಭಸ್ಮ, ಏರ್​ ಶೋ ಸ್ಥಳಕ್ಕೆ ಆಯುಕ್ತ ಸುನಿಲ್​ ಕುಮಾರ್ ಭೇಟಿ.

ಬೆಂಗಳೂರು: ಯಲಹಂಕ ವಾಯುನೆಲೆ ಏರ್​ ಶೋ ಗೇಟ್​ ನಂ. 5ರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ150ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್​ ಆಯುಕ್ತ ಟಿ. ಸುನಿಲ್​ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್​​ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್​​​ ಸ್ಥಳಕ್ಕೆ ಭೇಟಿ ನೀಡಿದರು.ಒಟ್ಟು 50×6 ಕಾರು ಭಸ್ಮಏರ್​ಶೋ ಗೇಟ್​ ನಂ. 5 ಕ್ಕೆ ಭೇಟಿ ನೀಡಿದ ಪೊಲೀಸ್​ ಅಧಿಕಾರಿಗಳು ಕಾರು ಮಾಲೀಕರ ಜೊತೆ ಮಾತುಕತೆ ನಡೆಸಿದರು. ಕಾರಿನಲ್ಲಿ …

Read More »

ಅಸ್ಸಾಂ ಕಳ್ಳಭಟ್ಟಿ ದುರಂತ: 80 ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು..

ಗುವಾಹಟಿ: ಗೋಲಾಘಾಟ್ ಮತ್ತು ಜೋರ್ಹತ್ ಜಿಲ್ಲೆಗಳಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳಭಟ್ಟಿ ಮದ್ಯವನ್ನು ಸೇವಿಸಿ ಈವರೆಗೂ 80 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ಇನ್ನೂ ನಿರ್ಣಾಯಕ ಸ್ಥಿತಿಯಲ್ಲಿದ್ದು ಅವರನ್ನು ಜೋರ್ಹತ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಸ್ಸಾಂ ಆರೋಗ್ಯ ಇಲಾಖೆ ಶನಿವಾರ ದೃಢಪಡಿಸಿದೆ.ಈ ದುರಂತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಸುದ್ದಿ ಸಂಸ್ಥೆ ಪಿಟಿಐಗೆ …

Read More »

ಚುನಾವಣಾ ಆಯೋಗದ ಆದೇಶ: ರಾಜ್ಯದಲ್ಲಿ 354 ಇನ್ಸ್​ಪೆಕ್ಟರ್​​ಗಳ ವರ್ಗಾವಣೆ.

ಬೆಂಗಳೂರು,ಫೆ.23- ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಹಿಂದೆಂದೂಕ ಕಾಣದಂತೆ ಪೊಲೀಸ್ ಇನ್‍ಸ್ಪೆಕ್ಟರ್‍ಗಳ ಭಾರೀ ವರ್ಗಾವಣೆ ಪಟ್ಟಿ ಹೊರಬಿದ್ದಿದೆ.ರಾಜ್ಯಾದ್ಯಂತ 354 ಇನ್‍ಸ್ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯಲಾಗಿದೆ ಎಂದು ವರ್ಗಾವಣೆಯ ಆದೇಶದಲ್ಲಿ ತಿಳಿಸಲಾಗಿದೆ.ಪ್ರಮುಖವಾಗಿ ಬೆಂಗಳೂರಿನ ಬಹುತೇಕ ಪೊಲೀಸ್ ಠಾಣೆಗಳ ಇನ್‍ಸ್ಪೆಕ್ಟರ್‍ಗಳು ವರ್ಗಾವಣೆಯಾಗಿದ್ದು, ಕೆಲವರು ಸಿಐಡಿ, ಗುಪ್ತಚರ ಹಾಗೂ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡಿದ್ದಾರೆ.ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗಗಳಲ್ಲೂ ಇನ್‍ಸ್ಪೆಕ್ಟರ್‍ಗಳು ವರ್ಗಾವಣೆಯಾಗಿದ್ದು, ಕೂಡಲೇ …

Read More »

ಜ್ಯೂನಿಯರ್ ವಿಷ್ಣು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಹಸ್ತ

ಹುಬ್ಬಳ್ಳಿ: ಖ್ಯಾತ ಡಾ.ವಿಷ್ಣುವರ್ಧನ್ ಅವರ ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತ ರಾದ ಎಂ.ಡಿ.ಅಲಿ ಅವರ ಹೃದಯ ಶಸ್ತ್ರ ಚಿಕಿತ್ಸೆಯ ಸಹಾಯಕ್ಕಾಗಿ ರಾಜ್ ವಿಷ್ಣು ಸವಿನೆನಪು ಕಾರ್ಯಕ್ರಮವನ್ನು ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್ ನ ಸಾಂಸ್ಕೃತಿಕ ಭವನದಲ್ಲಿ ಫೆ.೨೬ ರಂದು ಸಂಜೆ ೬:೩೦ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹಜರತಲಿ ದೊಡ್ಡಮನಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತರಾದ ಎಂ.ಡಿ.ಅಲಿ ಕಳೆದ ೩೫ ವರ್ಷಗಳಿಂದ ವಿಷ್ಣುವರ್ಧನ್ ಅವರ ವೇಷಭೂಷಣ …

Read More »

ನಾಳೆ ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರಾರಂಭೋತ್ಸವ ..

ಹುಬ್ಬಳ್ಳಿ: ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ನ ಉದ್ಘಾಟನೆಯನ್ನು ನಗರದ ಗೋಕುಲ ರಸ್ತೆಯ ಡೆನಿಸನ್ ಹೋಟೆಲ್ ನ ಮಥುರಾ ಹಾಲ್‌ನಲ್ಲಿ ಇದೇ 24 ರಂದು ಸಂಜೆ. 5.30 ಕ್ಕೆ ಆಯೋಜಿಸಲಾಗಿದೆ ಎಂದು ಡಿ.ಬಿ.ಡಂಬಳ ಅವರು ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಉದ್ಯಮಿ ಸಿದ್ದಾರ್ಥ ಡಂಬಳ ಅವರು ಸ್ಟಾರ್ಟ್ ಅಪ್ ಮಾದರಿಯಲ್ಲಿ ಚಾಂಪಿಯನ್ಸ 11 ಎಂಟರ್ಟೈನ್ಮೆಂಟ್ ಪ್ರೈ. ಲಿಮಿಟೆಡ್‌ ಕಂಪನಿಯನ್ನು 2018 ರಲ್ಲಿ ಪ್ರಾರಂಭಿಸಿದ್ದು,ಉತ್ತರ ಕರ್ನಾಟಕ ಕ್ರಿಕೆಟ್ ಆಟಗಾರರು …

Read More »

ಸುಮಲತಾ ನಮ್ಮ ಸಂಬಂಧಿಕರೇ,ಆದ್ರೆ ನಂಗೆ ಪಕ್ಷವೇ ಮುಖ್ಯ’….

ಮಂಡ್ಯ: ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರದಲ್ಲಿ ಜೆಡಿಎಸ್ ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮ. ಸುಮಲತಾ ಅವರು ನಮ್ಮ ಸಂಬಂಧಿಕರೆ, ಆದ್ರೆ ಸಂಬಂಧ ಮತ್ತು ಪಕ್ಷ ಎಂದು ಬಂದಾಗ ನನಗೆ ಪಕ್ಷವೇ ಮುಖ್ಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.ಮದ್ದೂರಿನ ಕೆ.ಎಂ.ದೊಡ್ಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೊಡ್ಡರಸಿನಕೆರೆ ಗ್ರಾಮದಲ್ಲಿರೊ ಅವರ ಸಂಬಂಧಿಕರ ಮೂಲಕ ಸಿಎಂ ಜೊತೆ ಮಾತಾಡಿ ನಿರ್ಧಾರ ಮಾಡುವ ಬಗ್ಗೆ ಸುಮಲತಾ ಅವರಿಗೆ ತಿಳಿಸಲು ಹೇಳಿದ್ದೆ. ಆದರೆ ಅವರು ಬರಲಿಲ್ಲ. …

Read More »

ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಇಬ್ಬರು ಶಂಕಿತ ಉಗ್ರರ ಬಂಧನ..

ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ.ಲಕ್ನೋ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ಬಳಿಕ ನಡೆಸಲಾದ ಕ್ಷಿಪ್ರ ಕಾರ್ಯಚರನೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ಶುಕ್ರವಾರ ಘೋಷಿಸಿದೆ.ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಸಹರನಪುರ …

Read More »

ವರದಕ್ಷಿಣೆ ಕಿರುಕುಳ: ನಟ ರಾಜೇಶ್​ ಧ್ರುವಗೆ ನಿರೀಕ್ಷಣಾ ಜಾಮೀನು..!

ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿರುವ ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟ ರಾಜೇಶ್ ಧ್ರುವಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ನೊಂದ ಪತ್ನಿ ದೂರು ನೀಡುತ್ತಿದ್ದಂತೆ ಬಂಧನ ಭೀತಿ ಎದುರಿಸಿದ್ದ ರಾಜೇಶ್​ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.ಇನ್ನು ಪ್ರಕರಣ ಸಂಬಂಧ ರಾಜೇಶ್​ ಭಟ್​ ಅಲಿಯಾಸ್ ರಾಜೇಶ್ ಧ್ರುವ ವಿರುದ್ಧ ಕುಮಾರಸ್ವಾಮಿ ಲೇಔಟ್​​ ಹಾಗೂ ಬಸವನಗುಡಿ …

Read More »

ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಅನಾಹುತ; 69 ಮಂದಿ ಸಜೀವ ದಹನ

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 69 ಮಂದಿ ಸಜೀವ ದಹನವಾದ ದಾರುಣ ಘಟನೆ ಬುಧವಾರ ತಡರಾತ್ರಿ ನಡೆದಿದೆ.ಢಾಕಾದ ಚೌಕ್‌ಬಜಾರ್ ಪ್ರದೇಶದ ಮಸೀದಿಯ ಹಿಂಭಾಗವಿರುವ ನಾಲ್ಕು ಅಂತಸ್ತಿನ ಹಾಜಿ ಶಾಹಿದ್ ಮ್ಯಾನ್ಶನ್ ಎಂಬ ಕಟ್ಟಡದಲ್ಲಿ ರಾಸಾಯಕ ಸಂಗ್ರಹಿಸಿಡಲಾಗಿದ್ದು, ನೆಲ ಮಹಡಿಯಲ್ಲಿ ಬುಧವಾರ ರಾತ್ರಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸಮೀಪದ ಜನವಸತಿ ಕಟ್ಟಡಗಳೂ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.ಕಟ್ಟಡದ ಎರಡು, ಮೂರು ಮತ್ತು ನಾಲ್ಕನೇ …

Read More »

ಕಾಶ್ಮೀರ ಕುರಿತು ಪೋಸ್ಟ್​ ಮಾಡಿದ್ದಾಕ್ಕೆಗೆ ಅತ್ಯಾಚಾರದ ಬೆದರಿಕೆ..

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೈನಿಕರು ದಾಳಿಯ ಮಾಸ್ಟರ್​ಮೈಂಡ್​ನನ್ನೇ ಹತ್ಯೆಗೈದಿದ್ದಾರೆ. ಭಯೋತ್ಪಾದಕರ ಹೆಡೆಮುರಿಕಟ್ಟಲು ಇನ್ನೂ ಕಾರ್ಯಾಚರಣೆ ನಡೆಯುತ್ತಲೇ ಇದೆ. ಪಾಕಿಸ್ತಾನದ ಪರ ಪೋಸ್ಟ್​ ಹಾಕಿದವರನ್ನೂ ಕೂಡ ಪೊಲೀಸರು ಬಂಧಿಸುತ್ತಿದ್ದಾರೆ. ಈ ಮಧ್ಯೆ ಕಾಶ್ಮೀರ ಜನರ ಪರವಾಗಿ ಪೋಸ್ಟ್​ ಮಾಡಿದ್ದ ಯುವತಿಯೊಬ್ಬಳಿಗೆ ವ್ಯಕ್ತಿಯೊಬ್ಬ ಫೇಸ್​​ಬುಕ್​ ಮೂಲಕ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಕೊಲ್ಕತ್ತಾದ ಯುವತಿಯೊಬ್ಬಳು ತನ್ನ ಫೇಸ್​​ಬುಕ್​ ಪೇಜ್​ನಲ್ಲಿ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಮೋದಿ ಆಡಳಿತವನ್ನ ಟೀಕಿಸಿ ಪೋಸ್ಟ್​ ಮಾಡಿದ್ದಳು. ಯುವತಿಯ …

Read More »