Shaikh BIG TV NEWS, Hubballi
October 5, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಆಂಕರ್- ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕೊಟ್ಟಿಗೆಯಲ್ಲಿ ಕಟ್ಟಿದ 13 ಜಾನುವಾರುಗಳ ಸಜೀವ ದಹನವಾಗಿರುವ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಅಡಿವಯ್ಯ ಹಿರೇಮಠ್ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆಕಸ್ಮಿಕ ಬೆಂಕಿಗೆ ಜಿವನಾಧಾರವಾಗಿದ್ದ 13 ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಕೊಟ್ಟಿಗೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಜಾನುವಾರುಗಳು ಸುಟ್ಟು ಹೋಗಿವೆ. …
Read More »
Shaikh BIG TV NEWS, Hubballi
October 4, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಬೆಂಡಿಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ. ಗಾಂಜಾ ಮಾರಾಟ ಮಾಡ್ತಿದ್ದ ಜಾಲ ಬೇಧಿಸಿದ ಪೊಲೀಸರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ೨೦ ಕೆಜಿ ಗಾಂಜಾ ಸೀಜ್. ಗಾಂಜಾ ಮಾರಾಟ ಮಾಡ್ತಿದ್ದ ತೌಫೀಖ್ ಸುದರ್ಗಿ ಎಂಬ ಆರೋಪಿ ಅರೆಸ್ಟ್. ಸಗಟು ರೂಪದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ ತೌಫೀಖ್. ವಿಶಾಖಪಟ್ಟಣದಿಂದ ಗಾಂಜಾ ಸಗಟು ರೂಪದಲ್ಲಿ ತಂದು ಮಾರಾಟ ಮಾಡುವಾಗ ಖಾಕಿ ರೇಡ್. ಆಂಧ್ರದ ವಿಶಾಖಪಟ್ಟಣದಿಂದ ರೇಲ್ವೆಯಲ್ಲಿ ಗಾಂಜಾ ಸಾಗಾಟ ಮಾಡ್ತಿರುವ …
Read More »
Shaikh BIG TV NEWS, Hubballi
October 4, 2018
ಕರ್ನಾಟಕ, ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲಿನ ಸೆಸ್ ಅನ್ನು 2 ರೂ.ಗಳಷ್ಟು ಇಳಿಕೆ ಮಾಡಲಾಗಿದೆ. ಹಾಗಾಗಿ ಮತ್ತೆ ವ್ಯಾಟ್ ಕಡಿತ ಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಗುರುವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತೈಲ ಕಂಪನಿಗಳಿಂದ ಒಂದು ರೂಪಾಯಿ ಕಡಿತ ಹಾಗೂ ಕೇಂದ್ರ ಅಬಕಾರಿ ಸುಂಕ 1.50 ರೂ. ಕಡಿತ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಪೆಟ್ರೋಲ್, …
Read More »
Shaikh BIG TV NEWS, Hubballi
October 4, 2018
ಕರ್ನಾಟಕ, ಸುದ್ದಿ
ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆಗೆ 1 ಕೆ.ಜಿ ಚಿನ್ನದ ಖಡ್ಗವನ್ನು ಸಮರ್ಪಣೆ ಮಾಡಲಾಗಿದೆ. ಕೊಲ್ಲೂರು ತಾಯಿಗೆ ಖಡ್ಗ ನೀಡುವ ಹರಕೆ ಹಿನ್ನೆಲೆ ಚಿನ್ನದ ಖಡ್ಗವನ್ನು ನೀಡಿ ಹರಕೆ ಸಮರ್ಪಿಸಲಾಗಿದೆ. ಕೊಯಮತ್ತೂರು ಮೂಲದ ಡಾ. ನಳಿನ್ ವಿಮಲ್ ಕುಮಾರ್ ಎನ್ನುವ ಭಕ್ತರೋರ್ವರು ಈ ಹರಕೆ ಸಲ್ಲಿಸಿದ್ದು ಇವರು ಅಲ್ಲಿನ ವಿದ್ಯಾಸಂಸ್ಥೆಯಲ್ಲಿ ಆಡಳಿತ ನಿರ್ದೇಶಕರಾಗಿದ್ದಾರೆ. ಸುಮಾರು ೨೯ ಲಕ್ಷ ಅಂದಜು ಮೌಲ್ಯದ ಸ್ವರ್ಣ ಖಡ್ಗ ಇದಾಗಿದೆ. ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ …
Read More »
Shaikh BIG TV NEWS, Hubballi
October 4, 2018
ಕರ್ನಾಟಕ, ಸುದ್ದಿ
ಬೆಂಕಿ ದೇಹ ಸುಟ್ರೇ, ಮದ್ಯ ದೇಹ-ಮನಸ್ಸನ್ನೂ ಸುಡುತ್ತೆ ಅಂತ ಮಹಾತ್ಮ ಗಾಂಧೀಜಿ ಹೇಳಿದ್ರೂ ಕುಡಿಯೋರ ಸಂಖ್ಯೆ ಹೆಚ್ತಾನೇ ಇದೆ. ಕುಡಿಯೋದಕ್ಕೆ ಆಳೋ ಸರ್ಕಾರಗಳೇ ಪ್ರೇರೇಪಿಸ್ತವೆ. ಮದ್ಯ ಇರದಿದ್ರೇ ಸರ್ಕಾರ ನಡೆಸೋದೇ ಕಷ್ಟ. ಇಂಥದರಲ್ಲಿ ಕುಡುಕರನ್ನ ಆ ವ್ಯಸನದಿಂದ ಮುಕ್ತಿ ಹಾಡುವಂತೆ ಮಾಡ್ತಿರೋ ಒಂದು ಸಂಸ್ಥೆ ಸದ್ದಿಲ್ಲದೇ ಸಾಧನೆ ಮಾಡ್ತಿದೆ. ಖುಷಿ ಹೆಚ್ಚಿದೆ, ಆ ಖುಷಿ ಹೆಚ್ಚುತ್ತಲೇ ಕಾಲು ಕುಣಿತೀವೆ. ಮೈ-ಮನ ಮರೆತು ಹಾಡ್ತಿದಾರೆ, ನಲೀತಿದಾರೆ. ಲಂಬಾಣಿ ಮಹಿಳೆಯರೇ ಇಷ್ಟೊಂದ್ ಸಂಭ್ರಮಿಸೋಕೆ …
Read More »
Shaikh BIG TV NEWS, Hubballi
October 4, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಆಟೋ ಚಾಲಕರಿಗೆ ಶಾಕ್ ನೀಡಿದ ಅವಳಿನಗರದ ಪೊಲೀಸರು. ದಾಖಲೆಯಿಲ್ಲದ ಆಟೋಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ. ಮೂವತ್ತಕ್ಕೂ ಹೆಚ್ಚು ಆಟೋ ಡ್ರೈವರ್ ಗಳಿಗೆ ದಂಡ ವಿಧಿಸಿದ ಖಾಕಿ ಪಡೆ. ಹತ್ತಕ್ಕೂ ಹೆಚ್ಚು ಆಟೋರಿಕ್ಷಾ ಸೀಜ್ ಮಾಡಿದ ಪೊಲೀಸರು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಸೇರಿ ವಿವಿಧ ಕಡೆ ಆಟೋಗಳ ಮೇಲೆ ಕಾರ್ಯಾಚರಣೆ. ಡಿಸಿಪಿ ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ. ಸಂಚಾರಿ ಪೊಲೀಸರಿಗೂ ಬಿಸಿ ಮುಟ್ಟಿಸಿದ ಡಿಸಿಪಿ ಬಿ.ಎಸ್ ನೇಮಗೌಡ.
Read More »
Shaikh BIG TV NEWS, Hubballi
October 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯ ನೇಮಕಾತಿಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಹತ್ತನೇ ತರಗತಿ ಉತ್ತಿರ್ಣರಾಗಿರುವ ಅಭ್ಯರ್ಥಿಗಳಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಇಲಾಖೆಯು ಕಾರ್ ಚಾಲಕ ಸಿಬ್ಬಂದಿಯನ್ನು ನೇಮಕ ಮಾಡುತ್ತಾರೆ. ಪ್ರಸ್ತುತ ಕೊಚ್ಚಿ ಮತ್ತು ಕೇರಳದಲ್ಲಿ ಈ ಹುದ್ದೆ ಖಾಲಿ ಇದೆ. ಅರ್ಜಿ ಸಲ್ಲಿಸುವ ಮೊದಲು ನೆನಪಿನಲ್ಲಿಡಿ: ಅಭ್ಯರ್ಥಿಯು ಭಾರೀ ವಾಹನ ಚಾಲನೆಯ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಅದೇ ಸಮಯದಲ್ಲಿ, ಅಭ್ಯರ್ಥಿಯು …
Read More »
Shaikh BIG TV NEWS, Hubballi
October 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ನೆಟ್ಫ್ಲಿಕ್ಸ್ ನಿಮ್ಮ ಇಂಟರ್ನೆಟ್ ಬಿಲ್ಗಳನ್ನು ಮಾತ್ರ ಹೆಚ್ಚಿಸುತ್ತದೆ ಎಂದು ನೀವು ಭಾವಿಸಿದರೆ, ಇತ್ತೀಚಿನ ವರದಿಗಳು ಹೇಳುವಂತೆ ವೀಡಿಯೊ ಸ್ಟ್ರೀಮಿಂಗ್ ಸೇವೆ ಜಾಗತಿಕವಾಗಿ ಇಡೀ ಇಂಟರ್ನೆಟ್ ಬ್ಯಾಂಡ್ವಿಡ್ತ್ನಲ್ಲಿ ಗಮನಾರ್ಹ ಪ್ರಮಾಣವನ್ನು ಬಳಕೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಸ್ಯಾಂಡ್ವೀನ್ನ ಗ್ಲೋಬಲ್ ಇಂಟರ್ನೆಟ್ ಫಿನೊಮಿನ ವರದಿ ಪ್ರಕಾರ, ವಿಶ್ವಾದ್ಯಂತ ಇಂಟರ್ನೆಟ್ ಟ್ರಾಫಿಕ್ನಲ್ಲಿ ಸುಮಾರು 15 ಪ್ರತಿಶತದಷ್ಟು ನೆಟ್ಫ್ಲಿಕ್ಸ್ ನದ್ದೇ ಇದೆ. ಅಮೆರಿಕಾ ಒಟ್ಟು ಟ್ರಾಫಿಕ್ ನಲ್ಲಿ ಶೇ 19.1 ರಷ್ಟು ಪಾಲನ್ನು ಹೊಂದಿದೆ, …
Read More »
Shaikh BIG TV NEWS, Hubballi
October 3, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಪತ್ನಿಯಿಂದ ಜೀವಬೆದರಿಕೆ ಇದೆ ಎಂದು ಆರೋಪಿಸಿ ನಗರದ ಖ್ಯಾತ ವೈದ್ಯ ಹಾಗೂ ರಾಜಕಾರಣಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಖ್ಯಾತ ನ್ಯೂರೋಲಜಿಸ್ಟ್ ಡಾ.ಕ್ರಾಂತಿಕಿರಣ್ ಎಂಬುವವರೇ ತನ್ನ ಪತ್ನಿಯ ವಿರುದ್ದ ದೂರು ನೀಡಿದವರು. ವಿದ್ಯಾನಗರ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ದ ದೂರು ಡಾ. ಕ್ರಾಂತಿಕಿರಣ ದೂರು ದಾಖಲಿಸಿದ್ದಾರೆ. ಐಪಿಸಿ ಸೆ.506,504,323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಪತ್ನಿ ಶೋಭಾ ಹಾಗೂ ಪ್ರಿಯಕರನಿಂದ ಜೀವಬೆದರಿಕೆ ಇದೆ …
Read More »
Shaikh BIG TV NEWS, Hubballi
October 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ ಕುಸಿದಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯ ಹೊತ್ತಲ್ಲೇ ಅಮೆರಿಕನ್ ಕರೆನ್ಸಿಗೆ ಬೇಡಿಕೆ ಹೆಚ್ಚಿದ್ದು, ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿದೆ. ಒಂದು ಡಾಲರ್ಗೆ ₹73.34ಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 73ರ ಗಡಿ ದಾಟಿದೆ. ಸೋಮವಾರದಂದು ₹72.91 ಇತ್ತು. ಇದರ ಪರಿಣಾಮ ಶೇರು ಮಾರುಕಟ್ಟೆಲ್ಲಿ ಭಾರೀ ಏರಿಳಿತವಾಗುವ ಸಾಧ್ಯತೆ ಇದೆ.
Read More »