ನವದೆಹಲಿ: ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ ಕುಸಿದಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯ ಹೊತ್ತಲ್ಲೇ ಅಮೆರಿಕನ್ ಕರೆನ್ಸಿಗೆ ಬೇಡಿಕೆ ಹೆಚ್ಚಿದ್ದು, ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿದೆ. ಒಂದು ಡಾಲರ್ಗೆ ₹73.34ಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 73ರ ಗಡಿ ದಾಟಿದೆ. ಸೋಮವಾರದಂದು ₹72.91 ಇತ್ತು. ಇದರ ಪರಿಣಾಮ ಶೇರು ಮಾರುಕಟ್ಟೆಲ್ಲಿ ಭಾರೀ ಏರಿಳಿತವಾಗುವ ಸಾಧ್ಯತೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





