Breaking News

ಸುದ್ದಿ

ಏಯ್ ನಿಲ್ಸೋ ನಿಲ್ಸೋ.. ತೆಗೀ ಎಲ್ಲಿ ಡಾಕ್ಯುಮೆಂಟ್ಸ್ ತೆಗೀ ತೆಗೀ..

ಸುಧಾರಿಸಿಕೊಳ್ರಪ್ಪಾ.. ರೂಲ್ಸ್ ಫಾಲೋ ಮಾಡ್ರಯ್ಯ. ಎಲ್ಲ ದಾಖಲೆಗಳನ್ನೂ ಸರಿಯಾಗಿ ಇಟ್ಕೊಂಡ್ರಯ್ಯ. ಸರಿಯಿಲ್ಲ ಅಂದ್ರೇ ಟೈಮ್ ಕೂಡ ಕೊಡ್ತೀವಿ, ಎಲ್ಲ ಕರೆಕ್ಟಾಗಿ ರೂಲ್ಸ್ ಫಾಲೋ ಮಾಡಿ ಅಂತ ಹುಬ್ಬಳ್ಳಿ-ಧಾರವಾಡ ಪೊಲೀಸರು ಮತ್ತು ಆರ್ ಟಿಒಗಳು ಆಟೋಚಾಲಕರು ಹಾಗೂ ಕ್ಯಾಬ್ ಡ್ರೈವರ್ ಗಳಿಗೆ ಎಚ್ಚರಿಕೆ ನೀಡಿದ್ರು. ಆದ್ರೇ, ಇದಕ್ಕೂ ತಮಗೂ ಸಂಬಂಧವೇ ಇಲ್ಲ ಅಂತಿದ್ದವರಿಗೇ ಖಾಕಿ ಪಡೆ ಸರಿಯಾಗಿ ಬಿಸಿ ಮುಟ್ಟಿಸಿದೆ. ಏಯ್ ನಿಲ್ಸೋ ನಿಲ್ಸೋ.. ತೆಗೀ ಎಲ್ಲಿ ಡಾಕ್ಯುಮೆಂಟ್ಸ್ ತೆಗೀ ತೆಗೀ.. …

Read More »

ಎಚ್‍ಡಿಕೆ ಬಜೆಟ್‍ನ ಹೊರೆ – ಯಾವುದು ಎಷ್ಟೆಷ್ಟು ಏರಿಕೆಯಾಗುತ್ತೆ?

ಶನಿವಾರದಿಂದ ಎಚ್‍ಡಿಕೆ ಬಜೆಟ್‍ನ ಹೊರೆ – ಯಾವುದು ಎಷ್ಟೆಷ್ಟು ಏರಿಕೆಯಾಗುತ್ತೆ? ಬೆಂಗಳೂರು: ಶನಿವಾರದಿಂದಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ ಜಾರಿಯಾಗಲಿದ್ದು, ಜನಸಾಮಾನ್ಯರ ಜೇಬು ಮತ್ತಷ್ಟು ಖಾಲಿಯಾಗಲಿದೆ. ಪೆಟ್ರೋಲ್- ಡೀಸೆಲ್: ಬಜೆಟ್‍ನಲ್ಲಿ ತೈಲ ದರದ ಮೇಲೆ ವಿಧಿಸಲಾಗುತ್ತಿದ್ದ ಸೆಸ್ ದರವನ್ನು 30% ದಿಂದ 32%ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಶನಿವಾರದಿಂದ ಪೆಟ್ರೋಲ್ ಪ್ರತಿ ಲೀಟರ್ ಗೆ 1.14 ರೂ. ಮತ್ತು ಡೀಸೆಲ್ ಲೀಟರ್ ಗೆ 1.12 ರೂ. ದುಬಾರಿಯಾಗಲಿದೆ. ಪ್ರತಿ ತಿಂಗಳು ನೀವು …

Read More »

ಹುಬ್ಬಳ್ಳಿ ಶಹರ ಠಾಣೆ ಪೊಲೀಸರ ಕಾರ್ಯಾಚರಣೆ ಕುಖ್ಯಾತ ಮೂರು ಜನ ಅಂತರ್ ರಾಜ್ಯ ಕಳ್ಳರ ಬಂಧನ

ಹುಬ್ಬಳ್ಳಿ ಶಹರ ಠಾಣೆ ಪೊಲೀಸರ ಕಾರ್ಯಾಚರಣೆ ಕುಖ್ಯಾತ ಮೂರು ಜನ ಅಂತರ್ ರಾಜ್ಯ ಕಳ್ಳರ ಬಂಧನ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಾರಿನಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರು ಸತ್ಯಮೂರ್ತಿ, ಕುಮಾರೇಶ , ಭಾರತೀರಾಜ್ ಬಂಧಿತ ಆರೋಪಿಗಳು ಎರೆಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳರನ್ನು ಬಂಧಿಸಿದ ಪೊಲೀಸರು ಬಂಧಿತರು ತಮಿಳುನಾಡಿನ ತಿರುಚನಾಪಳ್ಳಿ ನಿವಾಸಿಗಳು ನಗರದಲ್ಲಿ ಠಿಕಾಣೆ ಹೂಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರು ಬಂಧಿತರಿಂದ ಒಂದು ಆ್ಯಪಲ್ ಲ್ಯಾಪ್ ಟಾಪ್ ಸೇರಿದಂತೆ ಒಂದು …

Read More »

ಜೀವದ ಜತೆ ರೈಲ್ವೆ ವೈದ್ಯನ ಚೆಲ್ಲಾಟ

ಜೀವ ಉಳಿಯಲಿ ಅಂತ ವೈದ್ಯರ ಬಳಿ ಹೋಗ್ತಾರೆ. ಆದ್ರೇ, ವೈದ್ಯರೇ ಒಮ್ಮೊಮ್ಮೆ ಯಮಕಿಂಕರನಂತಾಗಿಬಿಟ್ರೇ ಹೇಗೆ ಹೇಳಿ? ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಯ ಪ್ರಾಣದ ಜತೆಗೇ ಚೆಲ್ಲಾಟವಾಡಿದ ಆರೋಪ ಎದುರಿಸ್ತಿದಾರೆ. ಇರೋ ಸಮಸ್ಯೆ ನಿವಾರಣೆ ಆಗೋ ಬದಲು ಇನ್ನೊಂದು ಆರೋಗ್ಯ ಸಮಸ್ಯೆ ಎದುರಾಗಿ ರೋಗಿ ಸಾವು ಬದುಕಿನ ಮಧ್ಯೆ ಹೋರಾಡ್ತಿದಾರೆ. ರೈಲ್ವೆ ಸಿಬ್ಬಂದಿ ಇವತ್ತು ಬೀದಿಗಿಳಿದಿದ್ರು. ಇವರು ಹೀಗೆ ಬೀದಿಗಿಳಿದು ಪ್ರತಿಭಟಿಸೋಕೆ ಕಾರಣ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಆಸ್ಪತ್ರೆಯ ವೈದ್ಯ. …

Read More »

ಹುಬ್ಬಳ್ಳಿ. ಮಹದಾಯಿ‌ ಮತ್ತು ಕಳಸಾ- ಬಂಡೂರಿ ಹೋರಾಟಗಾರರಿಂದ ಬೆಂಗಳೂರು ಚಲೋ‌. ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು.

ಹುಬ್ಬಳ್ಳಿ. ಮಹದಾಯಿ‌ ಮತ್ತು ಕಳಸಾ- ಬಂಡೂರಿ ಹೋರಾಟಗಾರರಿಂದ ಬೆಂಗಳೂರು ಚಲೋ‌. ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಮಹದಾಯಿ ವಿವಾದ ಕೂಡಲೆ ಇತ್ಯರ್ಥ ಪಡಿಸಬೇಕೆಂದು ಒತ್ತಾಯ. ಹುಬ್ಬಳ್ಳಿಯ ಸಂಗೊಳ್ಳಿರಾಯಣ್ಣ ವೃತ್ತದಿಂದ ರೈಲು ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ. ರೈಲಿನಲ್ಲಿ ಬೆಂಗಳೂರಿನತ್ತ ರೈತರ ಪ್ರಯಾಣ. ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿರುವ ರೈತರು. ನಾಲ್ಕು ಜಿಲ್ಲೆಗಳ ಒಂಭತ್ತು ತಾಲ್ಲೂಕಿನ ನೂರಾರು ರೈತರು ಬೆಂಗಳೂರು ಚಲೋ ಹೋರಾಟದಲ್ಲಿ ಭಾಗಿ.

Read More »

ಜಿಲ್ಲೆಗೊಂದು ಷರಿಯತ್ ನ್ಯಾಯಾಲಯ ಆರಂಭ?

ನವದೆಹಲಿ: ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರತಿ ಜಿಲ್ಲೆಯಲ್ಲೂ ಷರಿಯತ್ (ಮುಸ್ಲಿಂ ವೈಯಕ್ತಿಕ ಕಾನೂನು) ಕೋರ್ಟ್​ಗಳನ್ನು ಸ್ಥಾಪಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್​ಬಿ) ಚಿಂತನೆ ನಡೆಸಿದೆ. ‘ದರುಲ್-ಖ್ವಾಜಾ’ ಎಂದು ಕರೆಯಲಾಗುವ ಈ ಸಾಂಪ್ರದಾಯಿಕ ಕೋರ್ಟ್​ಗಳು ಮುಸ್ಲಿಂ ವೈಯಕ್ತಿಕ ಕಾನೂನಿನಡಿ ತಕರಾರುಗಳನ್ನು ಬಗೆಹರಿಸಲಿವೆ. ಜುಲೈ 15ರಂದು ದೆಹಲಿಯಲ್ಲಿ ನಡೆಯಲಿರುವ ಎಐಎಂಪಿಎಲ್​ಬಿ ಸಭೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಷರಿಯತ್ ಕೋರ್ಟ್ ತೆರೆಯುವ ಬಗ್ಗೆ …

Read More »

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಮೇಲೆ ಫೈರಿಂಗ್‌: ಬಾಲಕಿ ಸೇರಿ ಮೂವರು ಸಾವು

ಶ್ರೀನಗರ: ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ 16 ವರ್ಷದ ಬಾಲಕಿ ಸೇರಿ ಮೂವರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ರೆಡ್ವಾನಿ ಪ್ರದೇಶದಲ್ಲಿ ಸೇನಾ ಗಸ್ತಿನ ಮೇಲೆ ಪ್ರತಿಭಟನಾಕಾರರು ದಾಳಿಗೆ ಮುಂದಾದಾಗ ಭದ್ರತಾ ಪಡೆಗಳು ಗುಂಡು ಹಾರಿಸಿವೆ ಎಂದು ವರದಿಗಳು ತಿಳಿಸಿವೆ. ಈ ವೇಳೆ ಕುಲ್ಗಾಮ್‌ನ ಹಾವೂರಾದ ನಿವಾಸಿಗಳಾದ ಶಕೀರ್‌ ಅಹ್ಮದ್‌(22), ಇರ್ಶಾದ್‌ ಮಜೀದ್‌(20) ಮತ್ತು 16 ವರ್ಷದ …

Read More »