Breaking News

ಏಯ್ ನಿಲ್ಸೋ ನಿಲ್ಸೋ.. ತೆಗೀ ಎಲ್ಲಿ ಡಾಕ್ಯುಮೆಂಟ್ಸ್ ತೆಗೀ ತೆಗೀ..

ಸುಧಾರಿಸಿಕೊಳ್ರಪ್ಪಾ.. ರೂಲ್ಸ್ ಫಾಲೋ ಮಾಡ್ರಯ್ಯ. ಎಲ್ಲ ದಾಖಲೆಗಳನ್ನೂ ಸರಿಯಾಗಿ ಇಟ್ಕೊಂಡ್ರಯ್ಯ. ಸರಿಯಿಲ್ಲ ಅಂದ್ರೇ ಟೈಮ್ ಕೂಡ ಕೊಡ್ತೀವಿ, ಎಲ್ಲ ಕರೆಕ್ಟಾಗಿ ರೂಲ್ಸ್ ಫಾಲೋ ಮಾಡಿ ಅಂತ ಹುಬ್ಬಳ್ಳಿ-ಧಾರವಾಡ ಪೊಲೀಸರು ಮತ್ತು ಆರ್ ಟಿಒಗಳು ಆಟೋಚಾಲಕರು ಹಾಗೂ ಕ್ಯಾಬ್ ಡ್ರೈವರ್ ಗಳಿಗೆ ಎಚ್ಚರಿಕೆ ನೀಡಿದ್ರು. ಆದ್ರೇ, ಇದಕ್ಕೂ ತಮಗೂ ಸಂಬಂಧವೇ ಇಲ್ಲ ಅಂತಿದ್ದವರಿಗೇ ಖಾಕಿ ಪಡೆ ಸರಿಯಾಗಿ ಬಿಸಿ ಮುಟ್ಟಿಸಿದೆ.
ಏಯ್ ನಿಲ್ಸೋ ನಿಲ್ಸೋ.. ತೆಗೀ ಎಲ್ಲಿ ಡಾಕ್ಯುಮೆಂಟ್ಸ್ ತೆಗೀ ತೆಗೀ.. ಸರ್ ಸರ್ ಸರ್.. ಏಯ್ ಲೈಸೆನ್ಸ್ ತೆಗೀಯೋ ಅಂದ್ರೇ ಮತ್.. ಕೊಡ್ತೇನ್ರೀ ಸರಾ, ಸರಾ, ಸರಾ… ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಇವತ್ತು ಬೆಳ್ಳಬೆಳಗ್ಗೆ ಕಂಡ ಸೀನ್ ಇದು. ಸಾರಿಗೆ ಇಲಾಖೆ ಪ್ರಾದೇಶಿಕ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರ ಜತೆ ಸೇರಿ ನಗರದಲ್ಲಿ ಇದ್ದಕ್ಕಿದಂತೆಯೇ ಕಾರ್ಯಾಚರಣೆಗಿಳಿದಿದ್ರು. ಏಕಾಏಕಿ, ಪೊಲೀಸರು, ಆರ್ ಟಿಒ ಈ ರೀತಿ ರೇಡ್ ಮಾಡಿದ್ರಿಂದ ಆಟೋ ಚಾಲಕರಿಗೆ ಸರಿಯಾಗೇ ಬಿಸಿ ತಟ್ಟಿತ್ತು. ಡ್ರೈವಿಂಗ್ ಲೆಸೈನ್ಸ್, ಆರ್ ಸಿ ಬುಕ್ ಒಂದಾ ಎರಡಾ ಆಟೋಚಾಲಕರಿಂದ ದಾಖಲೆ ಪತ್ರಗಳನ್ನ ಕೇಳ್ತಿದ್ರು. ಆದ್ರೇ, ಕೆಲವರು ಇದ್ದಿದ್ ಇದ್ದಂಗೇ ಅಂದ್ಕೊಂಡು ತಮ್ಮ ಬಳಿಯ ದಾಖಲೆಗಳನ್ನ ತೋರಿಸಿ ಕೈಮುಗಿದು ಹೋಗ್ತಿದ್ರು. ಆದ್ರೇ, ಪೊಲೀಸರು ಕೇಳಿದ ದಾಖಳೆಗಳು ಯಾರ ಬಳಿ ಇಲ್ವೋ ಅವರಿಗೇ ಸರಿಯಾಗೇ ಫೈನ್ ಬೀಳ್ತಿತ್ತು. ಲೈಸೆನ್ಸ್ ಇಲ್ಲ ಅಂದ್ರೇ, 500 ರೂ. ದಂಡ. ಪರ್ಮಿಟ್ ಡಿವ್, ಆರ್ ಸಿ ಬುಕ್ ಡಿವ್ ಇದ್ದವರ ವಾಹನಗಳನ್ನ ಸೀಜ್ ಮಾಡಿದ್ರು. ಜತೆಗೆ ಆಟೋ ಓಡಿಸ್ತಿದ್ರೂ ಖಾಕಿ ಬಿಟ್ಟು ಟೀಶರ್ಟ್ ಹಾಕ್ಕೊಂಡಿದ್ದವರಿಗೂ ಒಂದಿಷ್ಟು ಬುದ್ಧಿ ಕಲಿಸೋ ಯತ್ನ ನಡೀತು. ಲೈಸೆನ್ಸ್ ಇಲ್ಲದಿದ್ರೇ 100 ರೂ. ದಂಡ ಹಾಕಲಿ, ಆಟೋ ಪರ್ಮಿಟ್, ಆರ್ ಬುಕ್ ಇಲ್ಲದವರಿಂದ 1000 ರೂ. ಫೈನ್ ಕೂಡ ಕಟ್ಟಿಸಿಕೊಂಡ್ರೂ ತಪ್ಪೇನಿಲ್ಲ. ಆದ್ರೇ, ಆಟೋಗಳನ್ನ ಸೀಜ್ ಮಾಡಿದ್ರಿಂದ ಚಾಲಕರ ದಿನದ ದುಡಿಮೆಗೆನೇ ಕೊಕ್ಕೆ ಬಿತ್ತು.
ಮಂಜುನಾಥ ಉಳ್ಳಾಗಡ್ಡಿ, ಆಟೋ ಸಂಘದ ಮುಖಂಡ
ಸಾವಿರಾರು ಚಾಲಕರು ಈಗಲೂ ಬಾಡಿಗೆ ಆಟೋಗಳನ್ನ ಓಡಿಸಿಯೇ ನಿತ್ಯ ಜೀವನ ದೂಡ್ತಿರೋದು. ಇವತ್ತು ದುಡಿಯದಿದ್ರೇ ಮನೆಯವರೂ ಸೇರಿ ಡ್ರೈವರ್ ಹೊಟ್ಟೆ ಮೇಲೆ ತಣ್ಣೀರ್ ಬಟ್ಟೆನೇ ಗತಿ. ಹೀಗೆ ದಾಳಿ ಮಾಡಿ ಆಟೋಗಳನ್ನ ಸೀಜ್ ಮಾಡಿದ್ರೇ, ಸ್ವಾಮಿ.. ಬದುಕೋದ್ ಹೇಗೆ ಅಂತ ಪ್ರಶ್ನಿಸ್ತಿದಾರೆ ಆಟೋಚಾಲಕರು. ಆದ್ರೇ, ಹೀಗೆ ದಾಳಿ ಮಾಡೋದಕ್ಕೂ ಮೊದಲೇ ಪೊಲೀಸರು ಹಾಗೂ ಆರ್ ಟಿಒ, ದಾಖಲೆಗಳನ್ನ ಹೊಂದಲು ಒಂದೂವರೆ ತಿಂಗಳು ಡೆಡ್ ಲೈನ್ ನೀಡಿದ್ರೂ ಆಟೋ ಚಾಲಕರು ಎಚ್ಚೆತ್ತುಕೊಂಡಿರಲಿಲ್ಲ. ಇವತ್ತು ದಾಳಿ ಮಾಡಿ ಆಟೋಗಳನ್ನ ಸೀಜ್ ಮಾಡಿದ್ರಿಂದ ಅಲ್ಲಿಂದಿಲ್ಲೀಗೆ ಇಲ್ಲಿಂದಲ್ಲೀಗೆ ಓಡಾಡ್ತಿದ್ರು.. ಒಂದೇ ದಿನದಲ್ಲಿ 70ಕ್ಕೂ ಹೆಚ್ಚು ಆಟೋಗಳನ್ನ ಸೀಜ್ ಮಾಡಿದ್ರು. ಸೀಜಾದ ಎಲ್ಲ ಆಟೋಗಳನ್ನ ಕಾರವಾರ ರಸ್ತೆಯ ಸಿಎಆರ್ ಗ್ರೌಂಡ್ ನಲ್ಲಿರಿಸಲಾಗಿತ್ತು. ಆರ್ ಟಿಒ ಗ್ರೌಂಡ್ ನಲ್ಲಿಯೇ ದಾಖಲೆಗಳನ್ನ ಪರಿಶೀಲಿಸ್ತಿದ್ರು. ದಾಖಲೆ ನೀಡಿ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಫೈನ್ ಕಟ್ಟಿದವರ ಆಟೋಗಳನ್ನ ರಿಲೀಸ್ ಮಾಡೋದಾಗಿ ಆರ್ ಟಿಒ ಸ್ಪಷ್ಟಪಡಿಸಿದ್ರು. ಮಲ್ಲಿಕಾರ್ಜುನ ಕಪ್ಪರದ, ಆರ್ ಟಿಒ
ಆಟೋ ಚಾಲಕರ ಬಗ್ಗೆ ಒಂದಿಷ್ಟು ಕಂಪ್ಲೇಂಟ್ ಗಳಿವೆ. ಅದಕ್ಕಾಗಿ ರೂಲ್ಸ್ ಬ್ರೇಕ್ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು. ಸ್ಟೇಷನ್ ಗೆ ಬಂದು ಎಲ್ಲ ದಾಖಲೆಗಳನ್ನ ಪಡೆಯೋಕೆ ಸಂಚಾರ ಪೊಲೀಸಕರೇ ಅವಕಾಶ ನೀಡಿದ್ರು. ಆದ್ರೇ, ಆ ಬಗ್ಗೆ ಕ್ಯಾರೇ ಎನ್ನದ ಆಟೋರಿಕ್ಷಾಗಳು ಗ್ರೌಂಡ್ ನಲ್ಲಿ ಹೀಗೆ ಸಾಲಾಗಿ ನಿಲ್ಬೇಕಾಯಿತು. ಒಂದಂತೂ ನಿಜ. ಪೊಲೀಸರಾಗಲಿ ಆರ್ ಟಿಒ ಆಗಲಿ ರಿಕ್ಷಾ ಚಾಲಕರ ಹಾಗೂ ಜನರ ಹಿತಕ್ಕಾಗಿಯೇ ರೂಲ್ಸ್ ಫಾಲೋ ಮಾಡ್ತಿದಾರೆ ಅಲ್ವಾ..

Share News

About Shaikh BIG TV NEWS, Hubballi

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *