Breaking News

ಜೀವದ ಜತೆ ರೈಲ್ವೆ ವೈದ್ಯನ ಚೆಲ್ಲಾಟ

ಜೀವ ಉಳಿಯಲಿ ಅಂತ ವೈದ್ಯರ ಬಳಿ ಹೋಗ್ತಾರೆ. ಆದ್ರೇ, ವೈದ್ಯರೇ ಒಮ್ಮೊಮ್ಮೆ ಯಮಕಿಂಕರನಂತಾಗಿಬಿಟ್ರೇ ಹೇಗೆ ಹೇಳಿ? ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಯ ಪ್ರಾಣದ ಜತೆಗೇ ಚೆಲ್ಲಾಟವಾಡಿದ ಆರೋಪ ಎದುರಿಸ್ತಿದಾರೆ. ಇರೋ ಸಮಸ್ಯೆ ನಿವಾರಣೆ ಆಗೋ ಬದಲು ಇನ್ನೊಂದು ಆರೋಗ್ಯ ಸಮಸ್ಯೆ ಎದುರಾಗಿ ರೋಗಿ ಸಾವು ಬದುಕಿನ ಮಧ್ಯೆ ಹೋರಾಡ್ತಿದಾರೆ.
ರೈಲ್ವೆ ಸಿಬ್ಬಂದಿ ಇವತ್ತು ಬೀದಿಗಿಳಿದಿದ್ರು. ಇವರು ಹೀಗೆ ಬೀದಿಗಿಳಿದು ಪ್ರತಿಭಟಿಸೋಕೆ ಕಾರಣ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಆಸ್ಪತ್ರೆಯ ವೈದ್ಯ.
ಬೆಳಗಾವಿಯ ರೈಲ್ವೆ ಉದ್ಯೋಗಿ ಸತೀಶ್ ಎಂಬಾತ ತಮ್ಮ ಪತ್ನಿ ಪದ್ಮಾವತಿಯನ್ನ ಇದೇ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಡ್ಮಿಟ್ ಮಾಡಿದ್ರು. ಪದ್ಮಾವತಿಗೆ ಕಿಡ್ನಿ ಸ್ಟೋನ್ ಸಮಸ್ಯೆಯಿತ್ತು. ಇದನ್ನ ಇದೇ ರೈಲ್ವೆ ಆಸ್ಪತ್ರೆಯ ವೈದ್ಯರೇ ಸ್ಪಷ್ಟಪಡಿಸಿದ್ರು. ಜತೆಗೆ ಆಪರೇಷನ್ ಮಾಡ್ಬೇಕೆಂದು ಹೇಳಿದ್ರು. ನಿನ್ನೆ ಬೆಳಗ್ಗೆಯೇ ಕಿಡ್ನಿ ಸ್ಟೋನ್ ತೆಗೆಯಲು ಡಾ. ಕನಗರಾಯ ಎಂಬ ಸರ್ಜನ್ ಆಪರೇಷನ್ ಕೂಡ ನಡೆಸಿದಾರೆ. ಆದ್ರೇ, ರೋಗಿ ಪದ್ಮಾವತಿ ಬಿಪಿ ಇದ್ದಕ್ಕಿದ್ದಂತೆಯೇ ಲೋ ಆಗಿದೆ. ಇದನ್ನ ಬೆಳಗ್ಗೆ ಆಪರೇಷನ್ ಮಾಡಿದ್ದ ವೈದ್ಯ ಪೇಶಂಟ್ ಕಂಡೀಷನ್ ಬಗ್ಗೆ ಸರಿಯಾಗಿ ಏನೂ ಹೇಳಿಲ್ಲ. ರಾತ್ರಿ ಮಾತ್ರ ಪದ್ಮಾವತಿಗೆ ಹಾರ್ಟ್ ಪ್ರಾಬ್ಲಂ ಅಂತ ಹೇಳಿದಾರೆ. ಆಪರೇಷನ್ ಬಳಿಕ ಸಂಜೆವರೆಗೂ ಏನೂ ಹೇಳದೇ ರಾತ್ರಿ ಮಾತ್ರ ಇದ್ದಕ್ಕಿದ್ದಂತೆಯೇ ರೋಗಿಯನ್ನ ತತ್ವದರ್ಶಿ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದಾರೆ. ಕಿಡ್ನಿಸ್ಟೋನ್ ಸಮಸ್ಯೆ ಹೊಂದಿದ್ದ ಪದ್ಮಾವತಿಗೆ ಇದ್ದಕ್ಕಿದ್ದಂತೆಯೇ ಹಾರ್ಟ್ ಪ್ರಾಬ್ಲಂ ಆಗಿದ್ಹೇಗೆ.? ಇದಕ್ಕೆ ರೈಲ್ವೆ ಆಸ್ಪತ್ರೆ ಸರ್ಜನ್ ಡಾ. ಕನಗರಾಯ ನಿರ್ಲಕ್ಷ್ಯವೇ ಕಾರಣ ಅಂತ ಸಂಬಂಧಿಕರು ಆರೋಪಿಸಿದಾರೆ. ಅಷ್ಟೇ ಅಲ್ಲ, ರಾತ್ರೋರಾತ್ರಿಯೇ ಪದ್ಮಾವತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿರುಪಾಕ್ಷ ಚಾರ್ಕಾನೆ, ಮುಖಂಡ, ನೈರುತ್ಯ ರೈಲ್ವೆ ಮಜ್ದೂರ್ ಸಂಘ
ವೈದ್ಯರ ನಿರ್ಲಕ್ಷತೆಯಿಂದಾಗಿ ಈಗ ಪದ್ಮಾವತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದಾರೆ. ಇದಕ್ಕೆಲ್ಲ ರೈಲ್ವೆ ಆಸ್ಪತ್ರೆಯ ಡಾ. ಕನಗರಾಯ ವೈದ್ಯಕೀಯ ನಿರ್ಲಕ್ಷ್ಯತೆಯೇ ಕಾರಣ ಅಂತ ಆರೋಪಿಸಿ ನೈರುತ್ಯ ರೈಲ್ವೆ ಮಜ್ದೂರ್ ಸಂಘ ಇವತ್ತು ರೈಲ್ವೆ ಆಸ್ಪತ್ರೆಯ ಎದುರಿಗೆ ಪ್ರತಿಭಟನೆ ನಡೆಸಿದ್ರು. ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಡಾ. ಕನಗರಾಯ ಈ ರೀತಿ ನಿರ್ಲಕ್ಷ್ಯತೆ ತೋರಿರೋದು ಇದೇ ಮೊದಲೇನಲ್ವಂತೆ. ಇಂಥ ಸಾಕಷ್ಟು ಪ್ರಕರಣಗಳು ನಡೆದಿವೆಯಂತೆ. ಮೊನ್ನೆತಾನೇ ರೈಲ್ವೆ ಜ್ಯೂನಿಯರ್ ಎಂಜಿನಿಯರೊಬ್ಬರಿಗೆ ಆಪರೇಷನ್ ಮಾಡಿದಾಗ ಸಹ ಆತ ಬದುಕುಳಿಯಲಿಲ್ವಂತೆ. ಡಾ.ಕನಗರಾಯ ಮಾಡಿದ ಬಹುತೇಕ ಆಪರೇಷನ್ ಗಳು ಫೇಲಾಗಿವೆ ಅನ್ನೋದು ರೈಲ್ವೆ ಸಿಬ್ಬಂದಿ ಆರೋಪ. ಹಾಗಾಗಿ ತಕ್ಷಣವೇ ಡಾ. ಕನಗರಾಯನನ್ನ ಬೇರೆ ಕಡೆ ಟ್ರಾನ್ಸಫರ್ ಮಾಡ್ಬೇಕು ಅಂತ ರೈಲ್ವೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ರು. ಕಿಡ್ನಿ ಸಮಸ್ಯೆ ಹಾರ್ಟ್ ಗೂ ಹೇಗೆ ಏಕಾಏಕಿ ಆಗುತ್ತೆ ಅನ್ನೋದು ಪ್ರತಿಭಟನಾಕಾರರ ಪ್ರಶ್ನೆ. ಡಿಕ್ರೂಜ್, ಜಿಎಸ್, ನೈರುತ್ಯ ರೈಲ್ವೆ ಮಜ್ದೂರ್ ಸಂಘ
ಆದ್ರೇ, ರೈಲ್ವೆ ಆಸ್ಪತ್ರೆಯ ವೈದ್ಯರನ್ನ ಈ ಬಗ್ಗೆ ಪ್ರಶ್ನಿಸಿದ್ರೇ ಯಾವುದೇ ಪ್ರತಿಕ್ರಿಯೆ ನೀಡ್ತಿಲ್ಲ. ವೈದ್ಯರು ಪ್ರಾಣ ಉಳಿಸ್ಬೇಕು, ಅವರೇ ಪ್ರಾಣದ ಜತೆಗೇ ಚೆಲ್ಲಾಟ ಆಡಬಾರದು ಅಂತಿದಾರೆ ಪ್ರತಿಭಟನೆ ನಡೆಸ್ತಿರೋ ರೈಲ್ವೆ ಸಿಬ್ಬಂದಿ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿರೋ ಪದ್ಮಾವತಿ ಗುಣಮುಖವಾಗಲಿ, ವೈದ್ಯರು ಇಲ್ಲಿ ತಪ್ಪು ಮಾಡಿದ್ರೇ ಅದು ನಿಜಕ್ಕೂ ಶಿಕ್ಷಾರ್ಹ ಅಲ್ವೇ..
Share News

About Shaikh BIG TV NEWS, Hubballi

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *