Breaking News

ಸುದ್ದಿ

ಗುರುವರ್ಯ ಸವಾಯಿ ಗಂಧರ್ವರ ೭೧ ನೇ ಪುಣ್ಯತಿಥಿಯ ನಿಮಿತ್ತವಾಗಿ ‘ಸಂಗೀತೋತ್ಸವ’ ಕಾರ್ಯಕ್ರಮ…

ಹುಬ್ಬಳ್ಳಿ:ದಿ.ಗುರುವರ್ಯ ಸವಾಯಿ ಗಂಧರ್ವರ ೭೧ ನೇ ಪುಣ್ಯತಿಥಿಯ ನಿಮಿತ್ತವಾಗಿ ‘ಸಂಗೀತೋತ್ಸವ’ ಕಾರ್ಯಕ್ರಮವನ್ನು ಶ್ರೀ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ವತಿಯಿಂದ ಅಕ್ಟೋಬರ್ ೭ ಹಾಗೂ ೮ ರಂದು ಸಂಜೆ ೮ ಗಂಟೆಗೆ ಕುಂದಗೋಳ ಪಟ್ಟಣದ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಿ‌.ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಚೇರ್ಮನ್ ಅರವಿಂದ್ ಕಟಗಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳವರೆಗೆ ಆಹೋರಾತ್ರಿ …

Read More »

ದಿ 21 ಹಾಗೂ 22 ರಂದು ಸ್ವಾಭಿಮಾನಿ ಕಲ್ಯಾಣ ಪರ್ವ…

ಧಾರವಾಡ: ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿರುವ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಇದೇ ತಿಂಗಳ ದಿ 21 ಹಾಗೂ 22 ರಂದು ಸ್ವಾಭಿಮಾನಿ ಕಲ್ಯಾಣ ಪರ್ವವನ್ನು ಆಯೋಜಿಸಲಾಗಿದೆ ಎಂದು ಕಲ್ಯಾಣ ಪರ್ವ ಉತ್ಸವ ಸಮಿತಿಯ ಅಧ್ಯಕ್ಷರಾದ ಕುಂಬಳಗೂಡಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಜಗದ್ಗುರು ಪೂಜ್ಯ ಡಾ||ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 12 ನೇ ಶತಮಾನದಲ್ಲಿ ಗುರು ಬಸವಣ್ಣರವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಯಾವುದೇ ಜಾತಿ, ಮತ, ಪಂಥ ಹಾಗೂ …

Read More »

ಕ್ರಿಕೆಟಿಗ ಶಿಖರ್ ಧವನ್ ಕೊನೆಗೂ ತಮ್ಮ ಪತ್ನಿ ಆಯೇಷಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ….

ಕ್ರಿಕೆಟಿಗ ಶಿಖರ್ ಧವನ್ ಕೊನೆಗೂ ತಮ್ಮ ಪತ್ನಿ ಆಯೇಷಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ದೆಹಲಿಯ ಪಟಿಯಾಲ ನ್ಯಾಯಾಲಯ ಬುಧವಾರ ವಿಚ್ಛೇದನವನ್ನು ಅನುಮೋದಿಸಿದ್ದು, ಆಯೇಷಾ ತಮ್ಮ ಪತಿ ಶಿಖರ್ ಧವನ್ ಅವರಿಗೆ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ತನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಶಿಖರ್ ಧವನ್ ಪತ್ನಿ ಆಯೇಷಾ ಮೇಲೆ ಆರೋಪ ಮಾಡಿದ್ದರು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಅವರು ಧವನ್ ಅವರ ಪತ್ನಿಯ ಮೇಲಿನ ಆರೋಪಗಳನ್ನು …

Read More »

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುಳ್ಳು ಸುದ್ದಿ ಹರಡುವವರ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲಿದೆ: ಪ್ರಿಯಾಂಕ್ ಖರ್ಗೆ.

ಬೆಂಗಳೂರು: ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕೈಗೊಳ್ಳಲು ಕಾನೂನು ಮಾರ್ಗ ಅನುಸರಿಸಲು ಮುಂದಾಗಿರುವ ಸರ್ಕಾರವು ಫ್ಯಾಕ್ಟ್‌ ಚೆಕ್‌ ವಿಭಾಗ ಆರಂಭಿಸಲು ಏಜೆನ್ಸಿಗಳಿಗೆ ಆಹ್ವಾನ ನೀಡಿದೆ. ಕರ್ನಾಟಕ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಇಲಾಖೆಯು ‘ಮಾಹಿತಿ ಅಸ್ವಸ್ಥತೆ ಟ್ರ್ಯಾಕಿಂಗ್ ಘಟಕ’ (ಐಡಿಟಿಯು) ಸ್ಥಾಪಿಸಲು ಏಜೆನ್ಸಿಗಳಿಂದ ಆಸಕ್ತ ಏಜೆನ್ಸಿಗಳಿಗೆ (ಇಒಐ) ಆಹ್ವಾನ ನೀಡಿದೆ. ನೇಮಕಗೊಂಡ ಏಜೆನ್ಸಿಗಳು ನಕಲಿ ಸುದ್ದಿಗಳನ್ನು ತಡೆಯಲು ಸರ್ಕಾರಕ್ಕಾಗಿ ಕೆಲಸ ಮಾಡುತ್ತವೆ. ಈ ಸಂಬಂಧ ಐಟಿ-ಬಿಟಿ …

Read More »

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ…

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನಗರದ ಜನರ ಮೊದಲ ಬೇಡಿಕೆಯೇ ಟ್ರಾಫಿಕ್‌ ನಿಯಂತ್ರಿಸಿ ಎಂದಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಎರಡು ವಿನೂತನ ಕ್ರಮಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮತ್ತೆ ಮತ್ತೆ ಸಂಕಷ್ಟಗಳನ್ನು ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಸಮಸ್ಯೆಯನ್ನು ನಿಭಾಯಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಟ್ರಾಫಿಕ್ ಜಾಮ್ ನಿವಾರಿಸಲು ನಗರದಲ್ಲಿ ಶಾಲಾ ಸಮಯದಲ್ಲಿ ಬದಲಾವಣೆ …

Read More »

ಎಸ್‌ಕೌಂಟರ್ ಮಾಡಬೇಕು ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ…

ದಾವಣಗೆರೆ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎಸ್‌ಕೌಂಟರ್ ಮಾಡಬೇಕು ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣವನ್ನು ಹಾಲಿ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು‌. ಗಾಗೆಯೇ ಹಿಂದೂಗಳ ಮನೆಗಳು ಜಖಂ ಆಗಿದ್ದು, ಕೂಡಲೇ ಅವರಿಗೆ ಪರಿಹಾರ ನೀಡಿ ಅವರ ನೆರವಿಗೆ ಧಾವಿಸಬೇಕು. ರಾಜ್ಯ …

Read More »

ಕರ್ತವ್ಯ ನಿರತ ಪೊಲೀಸರ ಮೇಲೆ ಕಲ್ಲು ತೂರಾಟ….

ಇತ್ತೀಚೆಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ತಿಳಿಸಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ವಿಮರ್ಶಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಅಂದಿನ ಘಟನೆ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ …

Read More »

ಬರಿಗಾಲಲ್ಲಿ ಬಂದ ನಟ ರಾಮಚಾರಣ್….

ಈ ಮೊದಲು ಜಂಜೀರ್ ಸಿನಿಮಾ ಮೂಲಕ ಬಾಲಿವುಡ್‌ ಗಮನ ಸೆಳೆದಿದ್ದ ನಟ ರಾಮ್ ಚರಣ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವುದು ಆರ್‌ಆರ್‌ಆರ್ ಸಿನಿಮಾ ಬಳಿಕ. ಈ ಚಿತ್ರದ ಮೂಲಕ ದೇಶದ ಹಲವೆಡೆ ರಾಮ್ ಚರಣ್ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸದ್ಯ ಮುಂಬೈಗೆ ಭೇಟಿ ನೀಡಿದ್ದಾರೆ. ಅದು ವಿಶೇಷ ಕಾರಣಕ್ಕೆ. ನಟ ರಾಮ್ ಚರಣ್ ಪ್ರತಿ ವರ್ಷ ತಮ್ಮ 48 ದಿನಗಳ ಅಯ್ಯಪ್ಪ ದೀಕ್ಷೆಯನ್ನು ಅನುಸರಿಸುತ್ತಾರೆ. ಇದೇ ಕಾರಣಕ್ಕೆ ಅಕ್ಟೋಬರ್ 3 …

Read More »

ಗಾನವಿ ಹೊಸ ಫೋಟೋಶೂಟ್….

ನಟಿ ಗಾನವಿ ಲಕ್ಷ್ಮಣ್ ಇದೀಗ ಬಹಳ ಗ್ಲಾಮರ್ ಆಗಿ ಕಾಣಿಸಿಕೊಂಡು ಇದ್ದಾರೆ. ಮಗಳು ಜಾನಕಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ತನ್ನದೇ ಆದ ಛಾಪು ಮೂಡಿಸಿದವರು ಗಾನವಿ. ತಮ್ಮ ಸಹಜ ಅಭಿನಯದಿಂದ ಜನರ ಮನಗೆದ್ದಿದ್ದ ನಟಿ ನೋಡಲು ಕೂಡ ಬಹಳ ಸುಂದರವಾಗಿ ಇದ್ದಾರೆ. ಇದೀಗ ಗಾನವಿ ಹೋಸ ಫೋಟೋಶೂಟ್ ಮಾಡಿಸಿಕೊಂಡು ಎಲ್ಲರ ಮನ ಗೆದ್ದಿದ್ದಾರೆ. ಏಷ್ಟು ಸುಂದರವಾಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಗಾನವಿ ಲಕ್ಷ್ಮಣ್ ಅವರ ಫೋಟೋ ನೋಡಿದ …

Read More »

ಧಾರವಾಡ ಜಿಲ್ಲೆ ಉಗ್ರರ ಅಡಗುತಾಣವಾಗುತ್ತಿದೆಯಾ….?

ಧಾರವಾಡ: ಧಾರವಾಡ ಜಿಲ್ಲೆ ಸಾಮಾನ್ಯವಾಗಿ ಅರೆಮಲೆನಾಡು ಪ್ರದೇಶ. ಒಂದೆಡೆ ಬಯಲುಸೀಮೆ ಮತ್ತೊಂದೆಡೆ ದಟ್ಟವಾದ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಪ್ರದೇಶ. ಈ ಪ್ರದೇಶ ಇದೀಗ ಉಗ್ರರ ಅಡಗುತಾಣವಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ. ದೆಹಲಿ ಎನ್‌ಐಎ ತಂಡ ಇತ್ತೀಚಿಗಷ್ಟೇ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ. ಈ ಮೂವರಲ್ಲಿ ಶಹನವಾಜ್ ಎಂಬ ಶಂಕಿತ ಉಗ್ರ ಹುಬ್ಬಳ್ಳಿ, ಧಾರವಾಡದ ಪಶ್ಚಿಮ ಘಟ್ಟದ ಕಾಡಿನಲ್ಲಿ ತರಬೇತಿ ಪಡೆದಿರುವ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ಇದೀಗ …

Read More »