Breaking News

ಸುದ್ದಿ

ಮಲಪ್ರಭೆಯ ಮುನಿಸಿನಲ್ಲಿ ಗಮನಾರ್ಹ ಇಳಿಕೆ,ಘಟಪ್ರಭಾ ಏರಿಳಿಕೆ

ಬೆಳಗಾವಿ :ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದ್ದು ಹೊರಹರಿವು 85 ಸಾವಿರ ಕ್ಯೂಸೆಕ್ಸದಿಂದ ಹತ್ತು ಸಾವಿರಕ್ಕೆ ಇಳಿದಿದೆ.ಖಾನಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು 45 ಸಾವಿರ ಕ್ಯೂಸೆಕ್ಸಕ್ಕೆ ಇಳಿದಿದೆ.37.7 ಟಿ ಎಮ್ ಸಿ ಸಾಮರ್ಥ್ಯದ ಡ್ಯಾಮಿನಲ್ಲಿ ಈಗ 35 ಟಿ ಎಮ್ ಸಿ ನೀರು ಸಂಗ್ರಹವಾಗಿದೆ. ಹೊರಹರಿವು 85 ಸಾವಿರದಿಂದ ಒಂದು ಲಕ್ಷದವರೆಗೂ ತಲುಪಿದ್ದರಿಂದ ಮುನವಳ್ಳಿ,ಬಸರಗಿ,ಶಿಂಧೋಗಿ,ಅರಟಗಲ್,ತೊರಗಲ್ಲ,ಹಾಲೊಳ್ಳಿ,ಸುನ್ನಾಳ,ತೊರಗಲ್ಲ,ರಾಮದುರ್ಗ ನಗರದ …

Read More »

ಹಾಲಿನ ಪ್ಯಾಕೆಟ್ ಗಳಲ್ಲಿ ನೀರು ಪೂರೈಕೆ- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಬೆಳಗಾವಿ: ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರಿಗೆ ಆಹಾರ ಪೊಟ್ಟಣಗಳ ಜತೆ ಬಾಟಲ್ ಗಳ ಬದಲಿಗೆ ನಂದಿನಿ ಹಾಲಿನ ಖಾಲಿ ಪ್ಯಾಕೆಟ್ ಗಳಲ್ಲಿ ಕುಡಿಯುವ ಶುದ್ಧ ನೀರು ತುಂಬಿಸಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳ ಜತೆ ನೀರಿನ ಬಾಟಲ್ ಗಳನ್ನು ವಿತರಿಸಲಾಗುತ್ತಿತ್ತು. ಬಾಟಲ್ ಭಾರವಾಗಿರುವುದರಿಂದ ಮೇಲಿನಿಂದ ಎಸೆದಾಗ ಜನರಿಗೆ ಗಾಯಗಳಾಗುವ ಸಾಧ್ಯತೆಗಳು ಕಂಡುಬಂದವು. ಆದ್ದರಿಂದ ಬಾಟಲ್ ಗಳ ಬದಲು ಪ್ಯಾಕೆಟ್ ಗಳಲ್ಲಿ ನೀರು ಪೂರೈಸಲಾಗುತ್ತಿದೆ.ಪ್ರವಾಹದಲ್ಲಿ ಸಿಲುಕಿರುವ ಜನರಿಗೆ …

Read More »

ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕುಮಾರಧಾರ – ನೇತ್ರಾವತಿಗಳ ಸಂಗಮ

ಮಂಗಳೂರು: ಕಳೆದ ಹಲವಾರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಗಯಾಪದ ಕ್ಷೇತ್ರ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕುಮಾರಧಾರ – ನೇತ್ರಾವತಿಗಳ ಸಂಗಮವಾಗಿದೆ. ಉಪ್ಪಿನಂಗಡಿ ದೇಗುಲದಲ್ಲಿ ನದಿಗಳ ಸಂಗಮವಾಗಿದ್ದು, ನೆರೆದ ಸಹಸ್ರಾರು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮವಾಗಿದ್ದು, ಸಂಗಮದ ಬಳಿಕ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಲಾಯಿತು ಗಂಗಾಪೂಜೆ ಬಳಿಕ ಸಹಸ್ರಲಿಂಗೇಶ್ವರ ದೇವರಿಗೆ ಸಂಗಮ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರದಿಂದ ಇದ್ದಕ್ಕಿದ್ದಂತೆ ನೇತ್ರಾವತಿ ನೀರಿನ ಮಟ್ಟ ಹೆಚ್ಚಳವಾಗಿದೆ.ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀ. ಆಗಿದೆ.ಬೆಳಗ್ಗೆ 10ರ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 8.7 ಮೀಟರ್ ಇತ್ತು. ಸದ್ಯ ನೇತ್ರಾವತಿ ನದಿ10.0 ಮೀ. ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.‌ ಉಪ್ಪಿನಂಗಡಿ ನೇತ್ರಾವತಿ 31.5 MTR, ಉಪ್ಪಿನಂಗಡಿ 26.5 ಮೀ, ಕುಮಾರಧಾರ ನದಿ ಹಾಗೂ ಗುಂಡ್ಯ ನದಿಗಳು 5.0 ಮೀ. ಅಪಾಯ …

Read More »

ಮಳೆ ಸಂತ್ರಸ್ಥರನ್ನು ಸಂತೈಸಿದ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ

ಕೂಡ್ಲಿಗಿ: ಬಳ್ಳಾರಿ ಸಂಸದರಾದ ವೈ. ದೇವೇಂದ್ರಪ್ಪನವರು ತುಂಗಭದ್ರಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಾದ ಹಡಗಲಿ ತಾಲ್ಲೂಕಿನ ಮಾಗಳ,ಅಂಗುರು,ಕೋಟಿಹಾಳ,ಮಕರಬ್ಬಿ,ಕಾಂತೆ ಬೆನ್ನೂರು, ಮೈಲಾರ, ಹರವಿ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ನೆರೆ ಸಂತ್ರಸ್ಥರನ್ನು ಸಂತೈಸಿದರು.ಸ್ಥಳದಲ್ಲಿಯೇ ಅಗತ್ಯ ಪರಿಹಾರ ವದಗಿಸುವಲ್ಲಿ ಮುತುವಜಿ೯ವಹಿಸಿದರು.ನೆರೆ ನಿರಾಶ್ರಿತ ರಿಗೆ ಸೂಕ್ತಸೌಕಯ೯ಗಳನ್ನು ಸಮಪ೯ಕವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆದು ಆಹಾರ ಆರೋಗ್ಯ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚಿಸಿದರು.ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಆದೇಶಿಸಿದರು.ಹಡಗಲಿ …

Read More »

ಮಳೆಯ ರಭಸಕ್ಕೆ ನೀರು ಪಾಲಾದ ವಳಾಲು ತೂಗು ಸೇತುವೆ

ಮಂಗಳೂರು: ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಪ್ರಮಾಣ ಹೆಚ್ಚುತ್ತಿರುವಂತೆಯೇ, ನದಿ ತೀರದ ಪ್ರದೇಶಗಳು ಮುಳುಗಡೆಗೊಳ್ಳುತ್ತಿದ್ದು, ನೀರಿನ ರಭಸಕ್ಕೆ ವಳಾಲು ತೂಗುಸೇತುವೆ ನೀರುಪಾಲಾಗಿದೆ. ಶುಕ್ರವಾರ ಸಂಜೆಯ ವೇಳೆಗಾಗಲೇ ತೂಗುಸೇತುವೆಯ ಮೇಲಕ್ಕೆ ನೀರು ಬಂದಿದ್ದು, ಮರಗಳು ಬಡಿದು ಹಾನಿ ಸಂಭವಿಸಿತ್ತು. ರಾತ್ರಿಯಾಗುತ್ತಿದ್ದಂತೆ ಸೇತುವೆಯ ಮಧ್ಯ ಭಾಗ ಮುರಿದು ಬಿದ್ದಿದ್ದು, ನೀರುಪಾಲಾಗಿದೆ.ನೇತ್ರಾವತಿ ನದಿ ಬಂಟ್ವಾಳ್ ದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಮಣಿಹಳ್ಳ ಬಂಟ್ವಾಳ್ ಮುಂತಾದ ಕಡೆಗಳಲ್ಲಿ ನದಿ ನೀರು ರಸ್ತೆ ಗೆ ಬಂದಿರುವ …

Read More »

ಮಂಡ್ಯ ಜಿಲ್ಲೆಯ ಹೇಮಗಿರಿ, ಬಂಡಿಹೊಳೆ ಬಳಿ ಹೇಮಾವತಿ ನದಿಯ ರುದ್ರನರ್ತನ.

ಮಂಡ್ಯ: ಬಂಡಿಹೊಳೆ ಬಳಿ ತ್ರಿಶೂಲ್ ಜಲ ವಿದ್ಯುದಾಗಾರದೊಳಕ್ಕೆ ನುಗ್ಗಿದ ನೀರು ಕೋಟ್ಯಂತರ ರೂಪಾಯಿ ನಷ್ಠವಾಗಿದೆ.ಮಂಡ್ಯ ಹೇಮಗಿರಿ ಬಳಿ ತೆಪ್ಪೋತ್ಸವ ನಡೆಯುವ ಬೆಟ್ಟದ ಪಾದದವರೆಗೆ ಪ್ರವಾಹದ ನೀರು ಬಂದಿದ್ದು,.ತಗ್ಗು ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ತೆಂಗು, ಬಾಳೆ, ಅಡಿಕೆ, ಕಬ್ಬು ಭಾಗಷಃ ಮುಳುಗಡೆಯಾಗಿವೆ.ಮಧ್ಯಾಹ್ನದ ವೇಳೆಗೆ ಒಂದು ಲಕ್ಷ ಕ್ಯೂಸೆಕ್ಸ್ ನೀರು ಹರಿಸುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗಲಿರುವ ಆತಂಕ ಎದುರಾಗಿದೆ. ಬಂಡಿಹೊಳೆಯ ತ್ರಿಶೂಲ್ ಜಲವಿದ್ಯುತ್ ಘಟಕದೊಳಕ್ಕೆ ನೀರು ನುಗ್ಗಿ ಎರಡು …

Read More »

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಾಸಪಪೂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಅದ್ವಿತೀಯ ಸಾಧನೆ

ಮಂಡ್ಯ: ತಾಂತ್ರಿಕ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯುಷ್ಮಾನ್ ಭಾರತ್.. ಆರೋಗ್ಯ ಕನಾ೯ಟಕ ಮತ್ತು ರಾಷ್ಟ್ರೀಯ ಕಾಯ೯ಕ್ರಮಗಳು/ ಯೋಜನೆಗಳು ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಮಂಡ್ಯ ಯವರಿಂದ ಆಯೋಜಿಸಲಾಗಿತ್ತು. ‌ಸ್ಪರ್ದೆಯಲ್ಲಿ ಬಾಸಪಪೂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅರ್ಪಿತ ಪ್ರಥಮ ಬಹುಮಾನ,ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನ ಸಪಪೂ ಕಾಲೇಜಿನ ವಿದ್ಯಾರ್ಥಿನಿಯರಾದ ಪೂಜಾ ಮತ್ತು ದಿವ್ಯ ಪಡೆದುಕೊಂಡಿದ್ದಾರೆ.ಕಾರ್ಯಕ್ರಮದಲ್ಲಿ ತಾ ಆರೋಗ್ಯಾಧಿಕಾರಿ ಹರೀಶ್,ಸಪಪೂ ಕಾಲೇಜಿನ ಪ್ರಾಂಶುಪಾಲರಾದ ಲಿಂಗಣ್ಣಸ್ವಾಮಿ,ಉಪನ್ಯಾಸಕರಾದ …

Read More »

ಕೃಷ್ಣಾ ನದಿಗೆ ಬಾಗೀನ ಅರ್ಪಿಸಿ ಅಬ್ಬರ ತಗ್ಗಿಸಲು ಪ್ರಾರ್ಥನೆ

ಚಿಕ್ಕೋಡಿ:ಕೃಷ್ಣ ನದಿಯ ಅಬ್ಬರ ತಗ್ಗುವಂತೆ ಪ್ರಾರ್ಥಿಸಿ ಸಂತ್ರಸ್ಥರು ದೇವರ ಮೊರೆ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ‌ ಗ್ರಾಮಸ್ಥರು ತುಂಬಿದ ಕೃಷ್ಣೆಗೆ ಬಾಗೀನ ಅರ್ಪಿಸುವ ಮೂಲಕ ದೇವರಲ್ಲಿ ಮೊರೆಯಿಟ್ಟರು. ಮುತ್ತೈದೆಯರಿಂದ ಕೃಷ್ಣ ನದಿಗೆ ಬಾಗಿನ ಅರ್ಪಿಸಿ ಜೀವಗಳನ್ನು ಉಳಿಸುವಂತೆ,ಸಾವು ನೋವು ಸಂಭವಿಸದಂತೆ ಕೃಷ್ಣ ನದಿಗೆ ಪ್ರಾರ್ಥಿಸಿದರು. ಈ ಹಿಂದೆಯೂ ಮಹಾಪೂರ ಬಂದಾಗ ಗ್ರಾಮಸ್ಥರು ಹರಕೆ ಹೊತ್ತ ಕೆಲದಿನಗಳಲ್ಲಿ ಕೃಷ್ಣಾ ನದಿ ಅಬ್ಬರ ತಗ್ಗಿತ್ತು.

Read More »

ಶಾಂತಿ ಭಾವೈಕ್ಯತೆಯಿಂದ ಬಕ್ರೀದ್ ಆಚರಣೆಗೆ ಮನವಿ

ಮಂಡ್ಯ: ಮಂಡ್ಯ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಅವರ ಪಟ್ಟಣದ ಕಛೇರಿಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಮತ್ತು ಹಿಂದೂ ಬಂಧುಗಳ ಶಾಂತಿ ಸಮಿತಿ ಸಭೆಯು ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಕೋಮುಸೌಹಾರ್ಧತೆ ಹಾಗೂ ಭಾವೈಕ್ಯತೆಯ ಜೀವನಕ್ಕೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ರಾಜ್ಯದಲ್ಲಿಯೇ ಮಾದರಿಯಾಗಿದೆ. ಆದ್ದರಿಂದ ಮುಸ್ಲಿಂ ಬಂಧುಗಳು ಪ್ರೀತಿ ವಿಶ್ವಾಸದಿಂದ ಬಕ್ರೀದ್ ಹಬ್ಬವನ್ನು ಆಚರಿಸಬೇಕು.ವದಂತಿಗಳಿಗೆ ಕಿವಿಗೊಡದೇ ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕು.ಬಕ್ರೀದ್ ಹಬ್ಬಕ್ಕೆ ಹಿಂದೂ ಬಾಂಧವರನ್ನು …

Read More »