Breaking News

ಮಳೆ ಸಂತ್ರಸ್ಥರನ್ನು ಸಂತೈಸಿದ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ

ಕೂಡ್ಲಿಗಿ: ಬಳ್ಳಾರಿ ಸಂಸದರಾದ ವೈ. ದೇವೇಂದ್ರಪ್ಪನವರು ತುಂಗಭದ್ರಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಾದ ಹಡಗಲಿ ತಾಲ್ಲೂಕಿನ ಮಾಗಳ,ಅಂಗುರು,ಕೋಟಿಹಾಳ,ಮಕರಬ್ಬಿ,ಕಾಂತೆ ಬೆನ್ನೂರು, ಮೈಲಾರ, ಹರವಿ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ನೆರೆ ಸಂತ್ರಸ್ಥರನ್ನು ಸಂತೈಸಿದರು.ಸ್ಥಳದಲ್ಲಿಯೇ ಅಗತ್ಯ ಪರಿಹಾರ ವದಗಿಸುವಲ್ಲಿ ಮುತುವಜಿ೯ವಹಿಸಿದರು.ನೆರೆ ನಿರಾಶ್ರಿತ ರಿಗೆ ಸೂಕ್ತಸೌಕಯ೯ಗಳನ್ನು ಸಮಪ೯ಕವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆದು ಆಹಾರ ಆರೋಗ್ಯ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚಿಸಿದರು.ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಆದೇಶಿಸಿದರು.ಹಡಗಲಿ ಮಾಜಿ ಶಾಸಕ ಚಂದ್ರನಾಯ್ಕ.ಬಿಜೆಪಿ ಮಂಡಲ ಅದ್ಯಕ್ಷರಾದ ಎಂ.ವಿ ಬಸವರಾಜ ಸೋಗಿ, ಮುಖಂಡರಾದ ಪೂಜಪ್ಪ,ಒದೊ ಗಂಗಪ್ಪ,ಕೋಟ್ರೆಶ್ ನಾಯಕ, ಆನಂದಪ್ಪ ಅರಸಿಕೇರೆ, ಹಡಗಲಿ ತಹಶಿಲ್ದಾರ ರಾಘವೇಂದ್ರ, ಇ.ಒ.ಸೋಮಶೇಖರ್ ಮುಂತಾದವರು ಹಾಜರಿದ್ದರು. ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *