Breaking News

ಸುದ್ದಿ

ಜೋಡಿಕೊಲೆಯ ಪ್ರಮುಖ ಆರೋಪಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯ: ರಾಯಸಮುದ್ರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದು ಇದರಲ್ಲಿ ಇನ್ನೂ ನಾಲ್ಕಾರು ಜನ ಭಾಗಿಯಾಗಿದ್ದು ಅವರನ್ನು ಸಹ ಬಂಧಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಗ್ರಾಮದ ಸಮುದಾಯ ಭವನದ ಮುಂದೆ ಪ್ರತಿಭಟನೆ ನಡೆಸಿದರು.ಕೂಲಿ ಮಾಡಿಕೊಂಡು ಜೀವನ ನೆಡೆಸುತ್ತಿದ್ದ ಗುಂಡೇಗೌಡ ಮತ್ತು ಲಲಿತಮ್ಮ ದಂಪತಿಗಳಿಬ್ಬರನ್ನು ಓರ್ವ ವ್ಯಕ್ತಿ ಕಟ್ಟಿಗೆಯಿಂದ ಹೊಡೆದು ಸಾಧಿಸಲು ಸಾಧ್ಯವಿಲ್ಲ ಹಾಗಾಗಿ ಪ್ರಕರಣವನ್ನು ಸಮಗ್ರ ತನಿಖೆಗೆ ಒಳ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಎಲ್ಲಾ ಆರೋಪಿಗಳನ್ನು …

Read More »

ಕೆರೆಗಳಿಗೆ ನದಿನೀರು ತುಂಬಿಸುವಂತೆ ಸಂಸತ್ತಿನಲ್ಲಿ ಸಂಸದರ ಮನವಿ

ಕೂಡ್ಲಿಗಿ: ಬಳ್ಳಾರಿ ಜಿಲ್ಲೆಯ 158 ಕೆರೆಗಳಿಗೆ ತುಂಗಭದ್ರಾ ಜಲಾಶಯದ ನೀರನಿಂದ ತುಂಬಿಸಲು ಕ್ರಮಕ್ಕಾಗಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸದನದಲ್ಲಿ ಸಕಾ೯ರಕ್ಕೆಮನವ ಮಾಡಿದ್ದಾರೆ.ಅವರು ಸದನದಲ್ಲಿ ಶೂನ್ಯವೇಳೆಯಲ್ಲಿ ಸಭಾಧ್ಯಕ್ಷರನ್ನುದ್ಧೇಶಿಸಿ ಮಾತನಾಡದರು.ಬಳ್ಳಾರಿ ಜಿಲ್ಲೆಯು ತೀರ ಹಿಂದುಳಿದಿದ್ದು ಹದಿನೈದು ವಷ೯ಗಳಿಂದಲೂ ಸತತ ಬರಗಾಲದ ಬೇಗೆಯಿಂದ ಬೆಂದಿದ್ದು.ಜಿಲ್ಲೆಯ ಬಹುತೇಕ ರೈತರ ಜೀವನ ತುಂಬಾ ಹದಗೆಟ್ಟಿದೆ. ಜಿಲ್ಲೆಯ ರೈತರ ಜನಸಾಮಾನ್ಯರ ಜೀವನ ಸುಧಾರಣೆಗೆ ಶೀಘ೯ವೇ ಸಕಾ೯ರ ಜಿಲ್ಲೆಯ ಒಟ್ಟು158 ಕರೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರನ್ನು ಹರಿಸುವ ಮೂಲಕ ಅನ್ನದಾತನ …

Read More »

ಕುಂಬದ್ರೋಣ ಮಳೆಗೆ ಚಿಕ್ಕೋಡಿಯ ಎಂಟು ತಾಲೂಕಿನ ಗ್ರಾಮಗಳು ಸಂಪೂರ್ಣ ಜಲಾವೃತ

ಚಿಕ್ಕೋಡಿ : ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೇಯು ಇಗಾ ರುದ್ರತಾಂಡವವಾಡುತ್ತಿದ್ದಾಳೆ ಕೆಲವೆ ತಿಂಗಳ ಹಿಂದೆ ಸಂಪೂರ್ಣ ಬತ್ತಿದ ಕೃಷ್ಣಾ ನದಿ ಈಗ 46 ಹಳ್ಳಿಗಳಿಗೆ ಕಾಲಿಟ್ಟಿದ್ದಾಳೆಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಕುಂಬದ್ರೋಣ ಮಳೆ ಕರ್ನಾಟಕದ ಚಿಕ್ಕೋಡಿಯ ಎಂಟು ತಾಲ್ಲೂಕುಗಳು ಸಂಪೂರ್ಣ ಜಲಾವೃತವಾಗಿದೆ ಇಲ್ಲಿನ ಜನ ಜಾನುವಾರಗಳ ಸ್ಥಿತಿ ಶೋಚನಿಯವಾಗಿದೆ. 46 ಹಳ್ಳಿಗಳು ಈಗಾ ನಡುಗಡ್ಡೆಯಾಗಿದೆ. ಜಿಲ್ಲಾ ಆಡಳಿತ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಧಾವಿಸಿದ್ದು ಅಪಾರ ಪ್ರಮಾಣದ ಜನ ಜಾನುವಾರಗಳನ್ನು …

Read More »

ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಪೋಲಿಸ್ ಸೂಚನೆ

ಮಂಡ್ಯ: ಹಾಸನ ಜಿಲ್ಲೆ ಗೋರೂರು ಡ್ಯಾಂ ನಿಂದ ಹೆಚ್ಚುವರಿಯಾಗಿ ಸುಮಾರು 20 ಸಾವಿರದಿಂದ 30 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುವುದರಿಂದ ನದಿ‌ ಪಾತ್ರದ ಜನರು ಮತ್ತು ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ‌ ಸ್ಥಳಾಂತರಗೊಳ್ಳಬೇಕು ಹಾಗೂ ನದಿಗೆ ಬಟ್ಟೆ ಪಾತ್ರೆ ತೊಳೆಯಲು‌ ಮಹಿಳೆಯರು ನದಿಗೆ ಇಳಿಯದಂತೆ ಜಿಲ್ಲೆಯ ಕಿಕ್ಕೇರಿ ಹೋಬಳಿಯ ಹೇಮಾವತಿ‌ ಹೊಳೆ‌ ( ನದಿ) ಪಾತ್ರದ ಜನರಿಗೆ ಪೋಲಿಸರು ಸೂಚನೆ ನೀಡಿದ್ದಾರೆ.

Read More »

ಸಂತ್ರಸ್ಥರಿಗೆ ಪರಿಹಾರ ನೀಡಲು ಇಂದಿರಮ್ಮನ ಕೆರೆಗೆ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಲ ಭೇಟಿ

ಧಾರವಾಡ:ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಅವಘಡಗಳು ಸಂಭವಿಸುತ್ತಿವೆ.ಕೊಟಬಾಗಿ – ಜಿರಗೆವಾಡ ಗ್ರಾಮಕ್ಕೆ ತೆರಳುವ ಬಸ್​​ವೊಂದು ಇಕ್ಕಟ್ಟಾದ ರಸ್ತೆಯಲ್ಲಿ ದಾಟಲು ಹೋಗಿ ಮರಕ್ಕೆ‌ ಡಿಕ್ಕಿ ಹೊಡೆದಿದೆ. ಧಾರವಾಡ ತಾಲೂಕಿನ ಹಂಗರಕಿ ರಸ್ತೆ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್​​ ಬಸ್​​ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭೂ ಕೊರೆತ ಉಂಟಾಗಿದೆ. …

Read More »

ಹುಬ್ಬಳ್ಳಿಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹೊಸ ಕೋರ್ಟ್ ಆವರಣ ಸಂಪೂರ್ಣ ಜಲಾವೃತ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿಯ ಹೊಸ ಕೋರ್ಟ್ ಆವರಣ ಸಂಪೂರ್ಣ ಜಲಾವೃತಗೊಂಡಿದ್ದು, ಕೋರ್ಟ್ ಕಲಾಪಗಳನ್ನ ಮುಂದೂಡಲಾಗಿದೆ.ನೂರಾರು ಕೋಟಿ ರೂ. ಖರ್ಚು ಮಾಡಿ ಏಷ್ಯಾದಲ್ಲಿಯೇ ಉನ್ನತ ದರ್ಜೆ ಕೋರ್ಟ್ ಅ​ನ್ನು ಹುಬ್ಬಳ್ಳಿ ನಗರದಲ್ಲಿ ನಿರ್ಮಿಸಲಾಗಿತ್ತು. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋರ್ಟ್ ಆವರಣ ಸಂಪೂರ್ಣ ಜಲಾವೃತವಾಗಿದ್ದು, ಕೋರ್ಟ್ ಒಳಗೆ ಪ್ರವೇಶಕ್ಕೆ ಅವಕಾಶವಿಲ್ಲದಂತಾಗಿದೆ. ಸುಮಾರು 2 ರಿಂದ 3 ಅಡಿಯಷ್ಟು ನೀರು ನಿಂತಿದೆ.ಕೋರ್ಟ್ ಆವರಣ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆಯಲ್ಲಿ ಕಲಾಪಗಳನ್ನು …

Read More »

ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ರುದ್ರ ರಮಣೀಯ ವಿಡಿಯೋ ವೈರಲ್

ದಾವಣಗೆರೆ; ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಾದು ಹೋಗುವ ತುಂಗಾಭದ್ರಾ ನದಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದು, ಇಲ್ಲಿ ಸಂಚರಿಸುವ ರೈಲಿಗೆ ಮುತ್ತಿಟ್ಟಂತೆ ಭಾಸವಾಗುತ್ತಿದ್ದು ಈ ಮನಮೋಹಕ ದೃಶ್ಯವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ….ಹೌದು.. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ನದಿಯ ಮೇಲ್ಬಾಗದಲ್ಲಿ ನಿರ್ಮಿಸಿರುವ ರೈಲ್ವೆ ಸೇತುವೆಯ ಸಮೀಪಕ್ಕೆ ನೀರು ಹರಿಯುತ್ತಿದೆ, ಇಲ್ಲಿ ದಿನನಿತ್ಯ ಸಾಕಷ್ಟು ರೈಲುಗಳು ಸಂಚರಿಸುತ್ತವೆ. ನೀರಿನ ಮೇಲೆ ಓಡುವ ರೈಲಿನ ದೃಶ್ಯ ಮನಮೋಹಕವಾಗಿದ್ದು, …

Read More »

ಕೃಷ್ಣಾ ನದಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ

ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿರುವ ಘಟನೆ ರಾಯಬಾಗ ತಾಲೂಕಿನ ಗೂಂಡವಾಡ ಗ್ರಾಮ ಬಳಿ ನಡೆದಿದೆ.‌ರಾಯಬಾಗ ತಾಲೂಕಿನ ಗೂಂಡವಾಡ ನಿವಾಸಿಯಾದ ಗುಂಡು ಅಪ್ಪಾಸಾಬ ಅಂಗಲಿ ೩೩ ಎಂಬುವವರು ಗೂಂಡವಾಡ ದಿಂದ ಕುಡಚಿ ಪಟ್ಟಣಕ್ಕೆ ಹೋಗುವಾಗ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ‌ ಈ ಕುರಿತು ಕುಡಚಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನೂತನ ಕುಲಪತಿಗಳಾದ ಡಾ. ವಿದ್ಯಾಶಂಕರ್ ಎಸ್ ರವರ ಅಭಿನಂದನಾ ಸಮಾರಂಭ

ಮಂಡ್ಯ: ಜೈ ಶ್ರೀ ಗುರುದೇವ್ಬೆಂಗಳೂರು ವಿವಿ ಪುರಂನ ಗಾಯನ ಸಮಾಜದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಡಾ. ವಿದ್ಯಾಶಂಕರ್ ಎಸ್ ರವರ ಅಭಿನಂದನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರು ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

Read More »

ಉಕ್ಕಿ ಹರಿಯುತ್ತಿರುವ ಹಳ್ಳವನ್ನೆ ಈಜಿ ದಾಟಿದ ಶ್ವಾನ

ದಾವಣಗೆರೆ : ಅಪಾರ ಪ್ರಮಾಣದ ಮಳೆಯಿಂದ ತುಂಗಭದ್ರಾ ಬದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ಬಂಡಿಹಳ್ಳದಲ್ಲಿ ಸಾರಥಿ ಚಿಕ್ಕಬಿದರೆ ಗ್ರಾಮದ ಸಂಪರ್ಕ ಕಡಿತಗೊಂಡಿದೆ.ಸುರಕ್ಷಿತ ಸ್ಥಳಕ್ಕೆ ತೆರಳಲು ಗ್ರಾಮಸ್ಥರು ಹರಸಾಹಸ ಪಡುತ್ತಿರುವದು ಒಂದು ಕಡೆಯಾದರೆ,ತುಂಬಿ ಹರಿಯುತ್ತಿರುವ ಬಂಡಿಹಳ್ಳದಿಂದ ಶ್ವಾನ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜಿ ದಡ ಸೇರುವ ಮೂಲಕ ಅಚ್ಚರಿ ಮೂಡಿಸಿತು.ಶ್ವಾನವೇನೋ ಈಜಿ ದಡ ಸೇರಿದೆ ಆದರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನದಿ …

Read More »