Breaking News

ಕೆರೆಗಳಿಗೆ ನದಿನೀರು ತುಂಬಿಸುವಂತೆ ಸಂಸತ್ತಿನಲ್ಲಿ ಸಂಸದರ ಮನವಿ

ಕೂಡ್ಲಿಗಿ: ಬಳ್ಳಾರಿ ಜಿಲ್ಲೆಯ 158 ಕೆರೆಗಳಿಗೆ ತುಂಗಭದ್ರಾ ಜಲಾಶಯದ ನೀರನಿಂದ ತುಂಬಿಸಲು ಕ್ರಮಕ್ಕಾಗಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸದನದಲ್ಲಿ ಸಕಾ೯ರಕ್ಕೆಮನವ ಮಾಡಿದ್ದಾರೆ.ಅವರು ಸದನದಲ್ಲಿ ಶೂನ್ಯವೇಳೆಯಲ್ಲಿ ಸಭಾಧ್ಯಕ್ಷರನ್ನುದ್ಧೇಶಿಸಿ ಮಾತನಾಡದರು.ಬಳ್ಳಾರಿ ಜಿಲ್ಲೆಯು ತೀರ ಹಿಂದುಳಿದಿದ್ದು ಹದಿನೈದು ವಷ೯ಗಳಿಂದಲೂ ಸತತ ಬರಗಾಲದ ಬೇಗೆಯಿಂದ ಬೆಂದಿದ್ದು.ಜಿಲ್ಲೆಯ ಬಹುತೇಕ ರೈತರ ಜೀವನ ತುಂಬಾ ಹದಗೆಟ್ಟಿದೆ. ಜಿಲ್ಲೆಯ ರೈತರ ಜನಸಾಮಾನ್ಯರ ಜೀವನ ಸುಧಾರಣೆಗೆ ಶೀಘ೯ವೇ ಸಕಾ೯ರ ಜಿಲ್ಲೆಯ ಒಟ್ಟು158 ಕರೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರನ್ನು ಹರಿಸುವ ಮೂಲಕ ಅನ್ನದಾತನ ಜೀವನ ಹಾಗೂ ಜಿಲ್ಲೆಯ ಸಮಸ್ಥ ಜನತೆಯ ಜೀವನದ ಹಿತಕಾಪಾಡಬೇಂದು ಅವರು ಸಕಾ೯ರವನ್ನು ಕೋರಿದರು.ಕೆರೆಗಳಿಗೆ ಹರಿಸಿ ತುಂಬಿಸಿದ್ದಲ್ಲಿ ರೈತರ ಪಂಪ್ ಸೆಟ್ ಗಳು ಪುನಛ್ಛೇತನಗೊಳ್ಳಲಿವೆ ಮತ್ತು ಕೆರೆಗಳ ನೀರಿನಿಂದ ಜಿಲ್ಲೆಯ ಬಹುತೇಕ ರೈತರಿಗೆ ತುಂಬಾ ಅನುಕೂಲವಾಗಲಿದ್ದು.ಕೆರೆಗಳಿಗೆ ನೀರು ಹರಿಸುವಕಾಯ೯ಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ಆದೇಶ ನೀಡಿ ಕ್ರಮಜರುಗಿಸಬೇಕೆಂದು ಸದನದ ಸಭಾಧ್ಯಕ್ಷರಲ್ಲಿ ಸಂಸದ ವೈ.ದೇವೇಂದ್ರಪ್ಪ ಮನವಿಮಾಡಿದ್ದಾರೆ.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *