Breaking News

ಕುಂಬದ್ರೋಣ ಮಳೆಗೆ ಚಿಕ್ಕೋಡಿಯ ಎಂಟು ತಾಲೂಕಿನ ಗ್ರಾಮಗಳು ಸಂಪೂರ್ಣ ಜಲಾವೃತ

ಚಿಕ್ಕೋಡಿ : ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೇಯು ಇಗಾ ರುದ್ರತಾಂಡವವಾಡುತ್ತಿದ್ದಾಳೆ ಕೆಲವೆ ತಿಂಗಳ ಹಿಂದೆ ಸಂಪೂರ್ಣ ಬತ್ತಿದ ಕೃಷ್ಣಾ ನದಿ ಈಗ 46 ಹಳ್ಳಿಗಳಿಗೆ ಕಾಲಿಟ್ಟಿದ್ದಾಳೆಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಕುಂಬದ್ರೋಣ ಮಳೆ ಕರ್ನಾಟಕದ ಚಿಕ್ಕೋಡಿಯ ಎಂಟು ತಾಲ್ಲೂಕುಗಳು ಸಂಪೂರ್ಣ ಜಲಾವೃತವಾಗಿದೆ ಇಲ್ಲಿನ ಜನ ಜಾನುವಾರಗಳ ಸ್ಥಿತಿ ಶೋಚನಿಯವಾಗಿದೆ. 46 ಹಳ್ಳಿಗಳು ಈಗಾ ನಡುಗಡ್ಡೆಯಾಗಿದೆ. ಜಿಲ್ಲಾ ಆಡಳಿತ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಧಾವಿಸಿದ್ದು ಅಪಾರ ಪ್ರಮಾಣದ ಜನ ಜಾನುವಾರಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆಇನ್ನು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನಾಲ್ಕು ಲಕ್ಷ ಇಪ್ಪತ್ತು ಸಾವಿರ ಕ್ಯೂಸೇಕ್ ನೀರು ಹರಿಬಿಟ್ಟಿದ್ದು ಪ್ರವಾಹದ ದಿನದಿಂದ ದಿನಕ್ಕೆ ಜನರ ಸ್ಥಿತಿ ಶೋಚನಿಯವಾಗಿದ್ದು ಆತಂತಕಗಕೆ ಎಡೆ ಮಾಡುತಿದೆಜನರ ರಕ್ಷಣೆಗೆ ಮುಂದಾಗಿರುವ ಜೀಲ್ಲಾ ಆಡಳಿತಕ್ಕೆ ಎನ್ ಡಿ ಆರ್ ಎಪ್, ಪೋಲಿಸ್ ಇಲಾಖೆ, ತಾಲ್ಲೂಕಾ ಪಂಚಾಯತಿ ಅಧಿಕಾರಿಗಳು ಸೇರಿದಂತೆ ಸೇನೆ ಕೋಡಾ ಸಾತ ನೀಡಿದೆ ಬೋಟಗಳನ್ನು ಬಳಸಿ ಪ್ರವಾಹದಲ್ಲಿ ಸಿಳುಕಿದ ಜನರ ರಕ್ಷಣೆ ಮಾಡಲಾಗಿದೆ ಇಲ್ಲಿವರೆಗೆ ಒಟ್ಟು ಒಂದು ಲಕ್ಷಕ್ಕುಅಧಿಕ ಜನರನ್ನು ರಕ್ಷಿಸಿ ಗಂಜಿಕೇಂದ್ರಕ್ಕೆಬೀಡಲಾಗಿದೆ ನಲವತ್ತು ಸಾವಿರಕಿಂತಲು ಅಧಿಕ ಜಾನುವಾರಗಖನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ ಇಪ್ಪತಾರು ಗಂಜಿಕೇಂದ್ರಗಳನ್ನು ತೇರೆಯಲಾಗಿದ್ದು ಜನ ಜಾನುವಾರುಗಳನ್ನು ಸುರಕ್ಷಿತವಾಗಿ ಸಾಗಿಸಲಾಗುತಿದೆ ಎಂದು ಗ್ರಾಮಸ್ಥರು ಹೇಳುತಿದ್ದಾರೆ.ಇನ್ನೂ ಮಹಾರಾಷ್ಟ್ರದ ವಿವಿಧ ಜಲಾಷಯದಿಂದ ದಿನದಿಂದ ದಿನಕ್ಕೆ ನೀರನ್ನು ಹರಿಬಿಡಲಾಗುತಿದ್ದು ಪ್ರತಿಗಂಟೆಗೊಮ್ಮೆ ನದಿ ನೀರಿನ ಒಳ ಹರಿವು ಪ್ರಮಾಣ ಹೆಚ್ಚಾಗುತಿದ್ದು ಪ್ರವಾಹದ ಒ್ರಮಾಣ ತಗ್ಗಿಸಲು ಆಲಮಟ್ಟಿ ಜಲಾಷಯದಿಂದ ನಿರಂತರ ನೀರನ್ನು ಸೊಲ್ಲಾಪುರ ಭಾಗಕ್ಕೆ ಹರಿಬಿಡಲಾಗುತಿದೆ ಆದರು ಕೃಷ್ಣಾ ನೀರಿನ ಪ್ರಮಾಣ ಕಡಿಮೆ ಆಗುತಿಲ್ಲಾ ಕುಂಬದ್ರೋಣ ಮಳೆ ಹೆಚ್ಚುತಿದ್ದು ಜಿಲ್ಲಾ ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಗೆ ರಜೆ ಘೋಷಿಸಿತು ಸಾವಿರಾರು ದೇವಸ್ಥಾನಗಳು ನೀರಿನಲ್ಲಿ ಮೂಳುಗಿವೆ ಶ್ರಾವಣ ಮಾಸವಾಗಿದ್ದರಿಂದ ದೇವರ ದರ್ಶನಕ್ಕೆ ಯಾವದೆ ರೀತಿ ಪರ್ಯಾಯ ಮಾರ್ಗಗಳು ಇಲ್ಲದೆ ಭಕ್ತರು ಪರಿತಪಿಸುವಂತಾಗಿದೆಸಂಪರ್ಕ ಸಾದಿಸಬೇಕಾಗಿದ್ದ ಹಲವಾರು ರಾಜ್ಯ ಹೆದ್ದಾರಿಗಳು ಮತ್ತು ಬ್ರಿಜಗಳು ಈಗಾಗಲೇ ನೀರಿನಲ್ಲಿ ಮುಳುಗಿವೆ ಇದರಿಂದ ದಿನನಿತ್ಯ ಅವಶ್ಯವಾಗಿರುವ ಹಾಲು,ಪೆಟ್ರೋಲ್ ಮತ್ತು ತರಕಾರಿಗಳ ಬೆಲೆ ಗಗನಕ್ಕೆ ಎರಿದೆ ನದಿಗ್ರಾಮದಲ್ಲಿ ವಿದ್ಯುತ್ ಕಡಿತವಾಗಿದೆ.ಒಟ್ಟಾರೆಯಾಗಿ ಕೇಳವೆ ದಿನಗಳ ಹಿಂದೆ ಹನಿ ನೀರಿಗಾಗಿ ಪರಿತಪಿಸುತಿದ್ದ ಜನರು ಈಗಾ ದಿಕ್ಕೆಟ್ಟು ಹೋಗಿದಂತು ಸುಳ್ಳಲ್ಲ ಬೆಳೆಗಳಿಗೆ ನೀರು ಇಲ್ಲಾ ಎಂದು ಪ್ರತಿಭಟನೆ ಮಾಡಿದ್ದೆ ರೈತ ಸಂಘಟನೆಗಳು ಈಗಾ ದೇವರ ಮೋರೆ ಹೋಗುತಿದ್ದಾರೆ ಮಹಾರಾಷ್ಟ್ರದಲ್ಲಿ ಮಳೆ ಕರ್ನಾಟಕದಲ್ಲಿ ನೇರಯಾಗಿದೆ ಇನ್ನು ಎರಡು ಮೂರು ದಿನಗಳಲ್ಲಿ ಪ್ರವಾಹದ ಅಬ್ಬರ ಕಡಿಮೆ ಆಗದಿದ್ದರೆ ಅಪಾರ ನಷ್ಟ ಆಗುವದಂತು ಖಚಿತ.ವರದಿ: ಪ್ರಕಾಶ ಬಿಗ್ ಟವಿ ನ್ಯೂಸ್ ಕನ್ನಡ ಚಿಕ್ಕೋಡಿ

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *