Breaking News

ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ರುದ್ರ ರಮಣೀಯ ವಿಡಿಯೋ ವೈರಲ್

ದಾವಣಗೆರೆ; ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಾದು ಹೋಗುವ ತುಂಗಾಭದ್ರಾ ನದಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದು, ಇಲ್ಲಿ ಸಂಚರಿಸುವ ರೈಲಿಗೆ ಮುತ್ತಿಟ್ಟಂತೆ ಭಾಸವಾಗುತ್ತಿದ್ದು ಈ ಮನಮೋಹಕ ದೃಶ್ಯವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ….ಹೌದು.. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ನದಿಯ ಮೇಲ್ಬಾಗದಲ್ಲಿ ನಿರ್ಮಿಸಿರುವ ರೈಲ್ವೆ ಸೇತುವೆಯ ಸಮೀಪಕ್ಕೆ ನೀರು ಹರಿಯುತ್ತಿದೆ, ಇಲ್ಲಿ ದಿನನಿತ್ಯ ಸಾಕಷ್ಟು ರೈಲುಗಳು ಸಂಚರಿಸುತ್ತವೆ. ನೀರಿನ ಮೇಲೆ ಓಡುವ ರೈಲಿನ ದೃಶ್ಯ ಮನಮೋಹಕವಾಗಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ಸಂಭ್ರಮಿಸುತ್ತಿದ್ದಾರೆ.
ರೈಲ್ವೆ ಸೇತುವೆ ಸಮೀಪಕ್ಕೆ ನದಿ ನೀರು ಬಂದಿದ್ದು ಇಲ್ಲಿ ಸಂಚರಿಸುವ ರೈಲುಗಳು ನೀರಿನ ಮೇಲೆ ಹೋದಂತೆ ಭಾಸವಾಗುತ್ತಿದೆ. ಈ ದೃಶ್ಯ ನಯನ ಮನೋಹರವಾಗಿದೆ. ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ನೋಡಲು ಹರಿಹರ ಮಾತ್ರವಲ್ಲದೆ ದಾವಣಗೆರೆಯಿಂದಲು ಸಾರ್ವಜನಿಕರು ಬಂದು ದೃಶ್ಯವನ್ನು ಕಣ್ತುಂಬಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.. ಸದ್ಯ ಹರಿಹರದಲ್ಲಿ ತುಂಗಭದ್ರಾ ನದಿಯ ರೈಲ್ವೆ ಸೇತುವೆ ಮೇಲೆ ಓಡುವ ರೈಲಿನ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *