ದಾವಣಗೆರೆ : ಅಪಾರ ಪ್ರಮಾಣದ ಮಳೆಯಿಂದ ತುಂಗಭದ್ರಾ ಬದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ಬಂಡಿಹಳ್ಳದಲ್ಲಿ ಸಾರಥಿ ಚಿಕ್ಕಬಿದರೆ ಗ್ರಾಮದ ಸಂಪರ್ಕ ಕಡಿತಗೊಂಡಿದೆ.ಸುರಕ್ಷಿತ ಸ್ಥಳಕ್ಕೆ ತೆರಳಲು ಗ್ರಾಮಸ್ಥರು ಹರಸಾಹಸ ಪಡುತ್ತಿರುವದು ಒಂದು ಕಡೆಯಾದರೆ,ತುಂಬಿ ಹರಿಯುತ್ತಿರುವ ಬಂಡಿಹಳ್ಳದಿಂದ ಶ್ವಾನ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜಿ ದಡ ಸೇರುವ ಮೂಲಕ ಅಚ್ಚರಿ ಮೂಡಿಸಿತು.ಶ್ವಾನವೇನೋ ಈಜಿ ದಡ ಸೇರಿದೆ ಆದರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನದಿ ದಾಟಿ ಬರಲು ಹರಸಾಹಸ ಪಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





