BigTv News
February 20, 2023
Breaking News, ಅಪರಾಧ, ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಎಪಿಎಂಸಿ ಹತ್ತಿರ ಉಳ್ಳಾಗಡ್ಡಿ ಮಾರ್ಕೆಟ್ ನಲ್ಲಿ ನಿಲ್ಲಿಸಿದ ಸ್ಪ್ಲೆಂಡರ್ ಬೈಕ್ ಎಸ್ಕೇಪ್ ಮಾಡಿದ ಆರೋಪಿ. ಪೈಗಂಬರ್ ಅನ್ನೂನೆ ಕಳ್ಳತನ ಮಾಡಿದ ಆರೋಪಿಯಂದು ತಿಳಿದುಬಂದಿದೆ, ಆರೋಪಿಯ ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಕಳೆದುಕೊಂಡವರು ಸದ್ಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನವನಗರ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.
Read More »
BigTv News
February 17, 2023
Breaking News, News, SPECIAL NEWS, ಧಾರವಾಡ, ಹುಬ್ಬಳ್ಳಿ
ಹುಬ್ಬಳ್ಳಿ: ತಾಲೂಕಿನ ಗಾಮಣಗಟ್ಟಿ ಗ್ರಾಮದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ, ಮೃತ ಯುವಕನ ಹೆಸರು ಸದ್ದಾಂ ಸವಾಂತನವರ್ ಎಂದು ತಿಳಿದುಬಂದಿದೆ. ಮೃತ ಯುವಕ ಮೂರು ದಿನದಿಂದ ನಾಪತ್ತೆಯಾಗಿದ್ದು ಇವತ್ತು ಶವವಾಗಿ ಪತ್ತಯಾಗಿದ್ದಾನೆ, ಇದು ಆತ್ಮಹತ್ಯೆಯೋ ಅಥವಾ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು ಈ ಸಂಬಂಧ ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Read More »
Shaikh BigTv
February 6, 2023
Breaking News, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಪ್ರಸಿದ್ದ ಮೀನಿನ ವ್ಯಾಪಾರಸ್ಥ ಕುಟುಂಬ ಪರಸ್ಪರ ಹೊಡೆದಾಡಿಕೊಂಡ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಹುಬ್ಬಳ್ಳಿಯ ಗಣೇಶ್ ಪೇಟೆಯ ಪ್ರಸಿದ್ದ ಮೀನಿನ ವ್ಯಾಪಾರಸ್ಥ ಯೂಸುಫ್ ಕೈರಾತಿ ಹಾಗೂ ಅವರ ಕುಟುಂಬದ ಮತ್ತೊಬ್ಬ ಸದಸ್ಯ ಅನೀಫ್ ಕೈರಾತಿ ಮದ್ಯ ಆಸ್ತಿ ವಿಚಾರಕ್ಕೆ ಪದೆ ಪದೆ ಜಗಳವಾಗುತ್ತಿತ್ತು, ಇವತ್ತು ಕೂಡ ಇದೆ ವಿಷಯವಾಗಿ ಇಬ್ಬರ ಮದ್ಯ ಜಗಳ ನಡೆದು ಜಗಳ ವಿಪೋಪಕ್ಕೆ ಹೋಗಿದೆ. ಹಲ್ಲೆಗೆ ಒಳಗಾದ ಯೂಸುಫ್ ನನ್ನು ಕಿಮ್ಸ್ ಆಸ್ಪತ್ರೆಗೆ …
Read More »
BigTv News
February 5, 2023
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಜೆಡಿಎಸ್‌ಗೆ ಸಜ್ಜನರು ಸೇರುತ್ತಿದ್ದಾರೆ, ಈಗಾಗಲೇ ಬಿಡುಗಡೆ ಮಾಡಿರುವ 93 ಜನರ ಪಟ್ಟಿಯಲ್ಲಿ ಐದಾರು ಬದಲಾವಣೆ ಆಗಬಹುದು ಎಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಮ್ ಇಬ್ರಾಹಿಂ ಹೇಳಿಕೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆ ಹಳ್ಳಿಹಳ್ಳಿ ತಲುಪುತ್ತಿದೆ, ಜನಸಾಗರ ಸೇರುತ್ತಿದೆ. ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಅನೇಕ ಪಕ್ಷಗಳ ಪ್ರಮುಖರು ಜೆಡಿಎಸ್ ಸೇರ್ಪಡೆ ಆಗುತ್ತಿದ್ದಾರೆ. ಹಿಂದೆ ನಮಗೆ ಕ್ಯಾಂಡಿಡೇಟ್ ಇಲ್ಲಾ ಅಂತಿದ್ರು, ಈಗ ಪ್ರತಿ …
Read More »
BigTv News
February 4, 2023
Breaking News, ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ 76,77,78,79ರ ಪ್ರದೇಶದಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಹೌದು, ನಗರದಲ್ಲಿಂದು ಸ್ವಚ್ಚತಾ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಪಾಲಿಕೆ ಅಧಿಕಾರಿಗಳು ಪ್ರತಿದಿನ ಸಾಮೂಹಿಕ ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ.ಇನ್ನೂ ಸಾರ್ವಜನಿಕರು ಸಹ ಇದಕ್ಕೆ ಸಹಕಾರ ಮಾಡಿದ್ದು ಸ್ವಚ್ಚತಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
Read More »
BigTv News
February 3, 2023
Breaking News, ಹುಬ್ಬಳ್ಳಿ
ಧಾರವಾಡ: ಸೈಲೆನ್ಸರ್ ಮೂಲಕ ಕರ್ಕಶ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಬೈಕ್‌ಗಳಿಗೆ ಧಾರವಾಡ ಸಂಚಾರ ಠಾಣೆ ಪೊಲೀಸರು ಶಾಕ್ ನೀಡಿದ್ದಾರೆ. ಸ್ಪೋರ್ಟ್ಸ್ ಸೈಲೆನ್ಸರ್ ಕಾನೂನು ಬಾಹಿರವಾಗಿದೆ. ಆದರೂ ಧಾರವಾಡದಲ್ಲಿ ಅನೇಕರು ಆ ರೀತಿಯ ಸೈಲೆನ್ಸರ್ ಅಳವಡಿಸಿಕೊಂಡು ಕರ್ಕಶ ಶಬ್ದ ಮಾಡುತ್ತ ಓಡಾಡುತ್ತಿದ್ದರು. ಅಂತಹ ನಾಲ್ಕು ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಸೀಜ್ ಮಾಡಿದ್ದಾರೆ. ಇಂತಹ ಬೈಕ್‌ಗಳ ಓಡಾಟ ಕಂಡು ಬಂದಲ್ಲಿ ಅವುಗಳನ್ನೂ ಸೀಜ್ ಮಾಡಲಾಗುವುದು ಎಂದು ಸಂಚಾರ ಠಾಣೆ ಇನ್‌ಸ್ಪೆಕ್ಟರ್ …
Read More »
BigTv News
February 3, 2023
Breaking News, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧೀಕ್ಷಕ ಇಂಜಿನಿಯರ್ ಅವರು ಧಾರವಾಡದ ಕೆಲಗೇರಿ ಕೆರೆಗೆ ಭೇಟಿ ನೀಡಿದರು ನಂತರ ಸಾರ್ವಜನಿಕರು ಸಹ ಸ್ವಚ್ಚತಾ ಬಗ್ಗೆ ಅರಿವು ಮೂಡಿಸಿದರು.ವಾರ್ಡ್ ನಲ್ಲಿರುವ ಜನರು ಅಲ್ಲಿನ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ ಆದಷ್ಟು ಬೇಗ ಕಾಮಗಾರಿ ಆರಂಭ ಮಾಡುವಂತೆ ತಿಳಿಸಿದರು.
Read More »
BigTv News
February 1, 2023
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಸಹಕಾರಿ ಭೀಷ್ಮ ಕೆ.ಎಚ್.ಪಾಟೀಲ್ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ತೆರವು ಗೊಳಿಸಿದ್ದಕ್ಕೆ ಪ್ರತಿಷ್ಠಾನದ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಈಜುಕೋಳದ ಮುಂಭಾಗದಲ್ಲಿ ಕಳೆದ 31 ವರ್ಷಗಳ ಹಿಂದೆ ಪ್ರತಿಷ್ಠಾಪನೆ ಮಾಡಿದ್ದ ಕೆ.ಹೆಚ್.ಪಾಟೀಲ್ ಅವರ ಪ್ರತಿಮೆಯನ್ನು ತೆರವು ಮಾಡಿದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿಷ್ಠಾನದ ಗಮನಕ್ಕೆ ತರದೇ ರಾತ್ರಿ ತೆರವುಗೊಳಿಸಿ ಇಂದಿರಾಗಾಜಿನ ಮನೆಯಲ್ಲಿ ಇರಿಸಿದ್ದ ವಿಷಯ ತಿಳಿದ ಕಾಂಗ್ರೆಸ್ ನಾಯಕರು ಹಾಗೂ ಪ್ರತಿಷ್ಠಾನದ ಪ್ರಮುಖರು ಸ್ಥಳಕ್ಕೆ …
Read More »
BigTv News
January 31, 2023
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಫ್ಲೈಓವರ್ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಬಸವ ವನದಲ್ಲಿದ್ದ ಬಸವೇಶ್ವರ ಪುತ್ಥಳಿಯನ್ನು ಸೋಮವಾರ ರಾತ್ರಿ ತೆರವುಗೊಳಿಸಲಾಯಿತು.ಒಂದು ಕ್ರೇನ್ ಮತ್ತು ಒಂದು ಎರಡು ಜೆಸಿಬಿಗಳಿಂದ ರಾತ್ರಿ ಹತ್ತು ಗಂಟೆಗೆ ಶುರುವಾದ ತೆರವು ಕಾರ್ಯಾಚರಣೆ ತಡರಾತ್ರಿಯವರೆಗೂ ನಡೆಯಿತು. ಫ್ಲೈಓವರ್ ಬಸವವನದ ಮೇಲ್ಭಾಗದಲ್ಲಿಯೇ ನಿರ್ಮಾಣವಾಗುವುದರಿಂದ ಪುತ್ಥಳಿಗೆ ಧಕ್ಕೆ ಆಗುವ ಸಾಧ್ಯತೆ ಇರುವುದರಿಂದ ಪುತ್ಥಳಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು. ಹಲವು ದಶಕಗಳಿಂದ ನಗರದ ಹೃದಯ ಭಾಗದ ಬಸವವನದಲ್ಲಿದ್ದ ಬಸವೇಶ್ವರ ಪುತ್ಥಳಿ ಜನಮಾನಸದಲ್ಲಿತ್ತು. ಪ್ರಮುಖ …
Read More »
BigTv News
January 28, 2023
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೆಎಲ್‌ಇ ಬಿವಿಬಿ ತಾಂತ್ರಿಕ ವಿಶ್ವವಿದ್ಯಾಲಯ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಹೌದು.. ವಿದ್ಯಾನಗರದ ಬಿವಿಬಿ ಆವರಣದಲ್ಲಿ ಆಯೋಜಿಸಲಾಗಿದ್ದ ಅಮೃತ ಮಹೋತ್ಸವ ಹಾಗೂ ಪ್ರಭಾಕರ ಕೋರೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನೂ ಬ್ರಹ್ಮ ಋಷಿ ಗುರುದೇವ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡದ ಬಳಿಕ ಕೇಂದ್ರ ಸಚಿವ ಅಮಿತ್ …
Read More »