Breaking News

ಹುಬ್ಬಳ್ಳಿ

ಜುಲೈ ‌7ರಂದು ಸಿಂಧುತಾಯಿ ಸಪಕಾಳಿ ಜೀವನಾಧಾರಿತ ಅನಾಥರ ಮಾಯೆ ನಾಟಕ ಪ್ರದರ್ಶನ

ಹುಬ್ಬಳ್ಳಿ: ಮನ್ವರ್ಷಿ ನವಲಗುಂದ ರಚನೆಯ ಸುಭಾಸ ಎನ್.ನರೇಂದ್ರ ಅರ್ಪಿಸುವ ಶ್ರೀಮತಿ ಸಿಂಧುತಾಯಿ ಸಪಕಾಳಿ ಅವರ ಜೀವನಾಧಾರಿತ ನಾಟಕ ‘ಅನಾಥರ ಮಾಯಿ’ ಇದೇ 07ರಂದು ಸಂಜೆ 6-30ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಟಕದ ನಿರ್ದೇಶಕರಾದ ಸುಭಾಸ ನರೇಂದ್ರ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಮಕ್ಕಳಿಗೆ ತಮ್ಮ ತಮ್ಮ ತಾಯಿಯೇ ನಿಜವಾದ ದೇವತೆ ಆದರೇ ಅನಾಥ ಮಕ್ಕಳಿಗೆ ಸಿಂಧುತಾಯಿ ದೇವತೆಯಾಗಿ ತನ್ನ ಜೀವಿತಾವಧಿಯಲ್ಲಿ ಅಪಾರ ಪ್ರಮಾಣದ ಸೇವೆ …

Read More »

ಅಲ್ಪಸಂಖ್ಯಾತ ಮತ್ತು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ: ದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ಹತ್ಯೆ, ಅತ್ಯಾಚಾರ, ಮಾರಣಾಂತಿಕ ಹಲ್ಲೆಗಳಾಗುತ್ತಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಜಾರಿದ್ದಾರೆಂದು ಸುನ್ನಿ ಯುವ ಶಕ್ತಿ ನಗರದಲ್ಲಿಂದು ಪ್ರತಿಭಟನೆ ನಡೆಸಿತು. ನಗರದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸಂಸತಿಗೆ, ಸಂವಿಧಾನಕ್ಕೆ ನಮಸ್ಕಾರ ಮಾಡಿ ಸಬ್ ಕಾ‌ ಸಾತ ಸಬ್ ಕಾ ವಿಕಾಸ ಹೊಂದಿತು ಎಂದು ಹೇಳಿದ್ದಾರೆ. ಆದರೆ ಅಲ್ಪಸಂಖ್ಯಾತ ಮತ್ತು …

Read More »

ಜುಲೈ 8 ರಂದು ಬೆಳಗಾವಿ ಚಲೋ ಪ್ರತಿಭಟನಾ ಮೆರವಣಿಗೆ.

ಹುಬ್ಬಳ್ಳಿ: ರಾಜ್ಯಾದ್ಯಂತ ಹಿಂದೂಗಳನ್ನು ಕೆರಳಿಸಿದ ಗೋ ರಕ್ಷಕ ಶಿವು ಉಪ್ಪಾರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸರ್ಕಾರ ಸಿ.ಬಿ.ಐ. ಗೆ ವಹಿಸಬೇಕು ಎಂದು ಕರ್ನಾಟಕ ಶ್ರೀರಾಮ‌ಸೇನಾ ರಾಜ್ಯ ಕಾರ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ ಎಂದು ಆಗ್ರಹಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಶಿವು ಉಪ್ಪಾರ ಸಾವನ್ನು ಕಡೆಗಣಿಸುತ್ತಿದ್ದು, ಸರ್ಕಾರ ಪ್ರಕರಣವನ್ನು ಸಿ.ಬಿ.ಐ. ಗೆ ವಹಿಸಲು ಆಗ್ರಹಿಸಿ ಇದೇ ಜುಲೈ 8 ರಂದು ಬೆಳಗಾವಿ ಚಲೋ ಏರ್ಪಡಿಸಲಾಗಿದ್ದು, ಅಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ …

Read More »

ಉತ್ತರ ಕರ್ನಾಟಕದ ಬಗ್ಗೆ ಮೈತ್ರಿ ಸರ್ಕಾರದ ನಿಷ್ಕಾಳಜಿ ಖಂಡಿಸಿ ಪ್ರತಿಭಟನೆಗೆ ಸಿದ್ದ

ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಮೈತ್ರಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡ್ತಾಯಿಲ್ಲಾ ಈ ಹಿನ್ನಲೆಯಲ್ಲಿ ಅಗಸ್ಟ್ 12 ರಂದು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುತ್ತೇನೆ ಎಂದು ಕನ್ನಡ ಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.ನಗರದಲ್ಲಿಂದು ಹಿರಿಯ ಪತ್ರಕರ್ತರಾದ ನಾಡೋಜ ಪಾಟೀಲ ಪುಟ್ಟಪ್ಪನವರನ್ನು ಬೇಟಿ ನೀಡಿ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಂಜೂಂಡಪ್ಪ ವರದಿಯನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲಾ. ಮಹದಾಯಿ …

Read More »

ಚಿಗರಿ ಬಸ್, ಬೈಕ್ ಮುಖಾಮುಖಿ ಡಿಕ್ಕಿ.

ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆರಾಯಾಪುರ ಬಳಿ ನಡೆದಿದೆ.ನಿಷೇಧಿತ ಬಿ.ಆರ್.ಟಿ.ಎಸ್ ರಸ್ತೆಯಲ್ಲಿ ಬೈಕ್ ಸವಾರ ಸಂಚರಿಸಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನುಸ್ಥಳೀಯ ಖಾಸತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಉದ್ರಿಕ್ತ ಜನರಿಂದ ಬಸ್ ಗಾಜು ಪುಡಿ ಪುಡಿಯಾಗಿದೆ. ಬ್ಯಾರಿಕೇಟ್ ನಿಂದ ಬಸ್ ಗಾಜು ಒಡೆದ ಜನರು ಆಕ್ರೋಶ ವ್ಯಕ್ತಪಡಿಸಿದರು.

Read More »

ಹುತ್ತದ ಮೇಲೆ ಮೂಡಿದ ಶಿವ, ಪಾರ್ವತಿ ಹಾಗೂ ಗಣೇಶ.

ಹುಬ್ಬಳ್ಳಿ: ಪ್ರಕೃತಿಯ ಮಡಿಲಲ್ಲಿ ನಿತ್ಯ ಅಚ್ಚರಿ, ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅಂತದೇ ಒಂದು ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕುರುವಿನಕೊಪ್ಪ ಗ್ರಾಮದ ಭೀಮಶಿ ಮಹದೇವಪ್ಪ ಗಾಯಕವಾಡ ಎಂಬುವವರ ಜಮೀನಲ್ಲಿರುವ ಹುತ್ತದ ಮೇಲೆ ಶಿವ, ಪಾರ್ವತಿ ಮತ್ತು ಗಣಪತಿ ಹೊಲುವ ಆಕೃತಿ ಮೂಡಿದೆ. ಈ ಆಕೃತಿಯನ್ನು ನೋಡಿದ ಗಾಯಕವಾಡ ಕುಟುಂಬದವರು ಅಚ್ಚರಿಗೊಂಡಿದ್ದಾರೆ.ಗಾಯಕವಾಡ ಕುಟುಂಬದವರು ತಮ್ಮ ಜಮೀನಿನಲ್ಲಿರುವ ಉಡಚಮ್ಮ ದೇವಿಗೆ ಪ್ರತಿ ಅಮವಾಸ್ಯೆ ಹಾಗೂ ಹುಣ್ಣುಮೆಯಂದು ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ …

Read More »

ರಾಷ್ಟ್ರೀಯ ಸಬ್ ಜ್ಯೂನಿಯರ್ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟನೆ.‌

ಉಡುಪಿ: ಆರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಸಬ್ ಜ್ಯೂನಿಯರ್ ರಾಕಿಂಗ್ ಪಂದ್ಯಾವಳಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ವತಿಯಿಂದ ಮಣಿಪಾಲದ ಮರೀನಾ ಮತ್ತು ಉಡುಪಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ಮಣಿಪಾಲದ ಮರೀನಾ ಒಳಾಂಗಣ ಕ್ರೀಡಾಂಗದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಪಂದ್ಯಾವಳಿಗೆ ಚಾಲನೆ ನೀಡಿದರು. ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ ಅಧ್ಯಕ್ಷ ದಿನಕರ ಬಾಬು ಮುಂತಾದವರು …

Read More »

ಮೋಸದಿಂದ ಸುಲಿಗೆ ಮಾಡುತ್ತಿದ್ದ ಖದೀಮರ ಬಂಧನ.

ಹುಬ್ಬಳ್ಳಿ: ಸಿದ್ಧಾರೂಢ ಮಠಕ್ಕೆ ಕರೆದುಕೊಂಡು ಹೋಗುವುದಾಗಿ‌ ಸವದತ್ತಿ‌ ಮೂಲದ ವ್ಯಕ್ತಿಯನ್ನು ನಂಬಿಸಿ ಆಟೋದಲ್ಲಿ ಗದಗ ರಸ್ತೆಯ ಹೊರ ವಲಯಕ್ಕೆ ಕರೆದುಕೊಂಡು ಹೋಗಿ ಹಲ್ಲೆ‌ಮಾಡಿ, ಹಣ, ಮೊಬೈಲ್ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸವದತ್ತಿ ಮೂಲದ ಮೌಳೇಶ ದಿನ್ನಿಮನಿ ಹಣ ಕಳೆದುಕೊಂಡವರು. ಆಟೋ ಚಾಲಕ ರಮೇಶ ಪಾಂಚಾನ, ಲಕ್ಷ್ಮೀ, ಶಶಿಕಲಾ ಹಾಗೂ ರಾಜು ಬಂಧಿತರು.ಇಬ್ಬರು ಪುರುಷರು ಹಾಗೂ ಮಹಿಳೆಯರು ಸೇರಿ ಪ್ರಯಾಣಿಕರ ಸೋಗಿನಲ್ಲಿ ಸುಲಿಗೆ ಮಾಡಿದ್ದರು.ಕೂಡಲೇ ಜಾಗೃತರಾದ …

Read More »

ಹು-ಧಾ ಮಹಾನಗರ ಪಾಲಿಕೆ ತಾರತಮ್ಯ ನೀತಿ ಮನನೊಂದು ಆತ್ಮಹತ್ಯೆಗೆ ಶರಣಾದ ಪೌರ ಕಾರ್ಮಿಕ.

ಹುಬ್ಬಳ್ಳಿ: ಹು- ಧಾ ಮಹಾನಗರ ಪಾಲಿಕೆಯ ತಾರತಮ್ಯ ನೀತಿ ಹಾಗೂ ಕಿರುಕುಳದಿಂದ ಬೇಸತ್ತು ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೂಸಪೇಟೆಯಲ್ಲಿ ನಡೆದಿದೆ.‌ಕಲ್ಲಪ್ಪ ಶಿವಲಿಂಗಪ್ಪ ಅಣ್ಣಿಗೇರಿ (34) ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕ.ಮೃತ ಕಲ್ಲಪ್ಪ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ನೇರ ವೇತನಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ನೇರ ವೇತನ ಜಾರಿಯಾಗಿರಲಿಲ್ಲ. ಕಳೆದ ವಾರ …

Read More »

ಪೌರ ಕಾರ್ಮಿಕನಿಗೆ ನ್ಯಾಯ ದೊರಕಿಸಿ‌ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ಹು- ಧಾ ಮಹಾನಗರ ಪಾಲಿಕೆಯ ತಾರತಮ್ಯ ನೀತಿ ಹಾಗೂ ಕಿರುಕುಳದಿಂದ ಬೇಸತ್ತು ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪೌರಕಾರ್ಮಿಕನ ಆತ್ಮಹತ್ಯೆಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಹು-ಧಾ ಮಹಾನಗರ ಪೌರಕಾರ್ಮಿಕರು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರತಿಭಟನೆ ನಡೆಸಿದರು.ಕಲ್ಲಪ್ಪ ಶಿವಲಿಂಗಪ್ಪ ಅಣ್ಣಿಗೇರಿ (34) ಆತ್ಮಹತ್ಯೆ ಮಾಡಿಕೊಂಡಿರುವ ಪೌರ ಕಾರ್ಮಿಕನ ಸಾವಿಗೆ ಹು-ಧಾ ಮಹಾನಗರ ಪಾಲಿಕೆಯ ತಾರತಮ್ಯ ಹಾಗೂ ಅವ್ಯವಸ್ಥೆಯೇ ಕಾರಣವಾಗಿದ್ದು, ಪೌರಕಾರ್ಮಿಕನ ಆತ್ಮಹತ್ಯೆಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡುವಂತೆ …

Read More »